Sunday, May 29, 2022
Powertv Logo
Homeರಾಜ್ಯಹಳೆ ಹುಬ್ಬಳ್ಳಿ ಗಲಭೆಗೆ ಮತ್ತೊಂದು ಹೊಸ ಟ್ವಿಸ್ಟ್‌

ಹಳೆ ಹುಬ್ಬಳ್ಳಿ ಗಲಭೆಗೆ ಮತ್ತೊಂದು ಹೊಸ ಟ್ವಿಸ್ಟ್‌

ಹುಬ್ಬಳ್ಳಿಯನ್ನು ಹೊತ್ತಿ ಉರಿಯವಂತೆ ಮಾಡಿದ ಹಳೆ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.ಶಾಂತಿ ಮಂತ್ರ ಜಪಿಸಬೇಕಾದ ಮೌಲ್ವಿಯಿಂದಲೇ ಪ್ರಚೋದನೆ ನೀಡಲಾಗಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ನಗರದ ಮಸೀದಿಯೊಂದರ ಧಾರ್ಮಿಕ ಗುರು ಎನ್ನಲಾದ ವ್ಯಕ್ತಿ ಪೊಲೀಸ್ ಕಮಿಷನರ್ ಕಾರಿನ ಮೇಲೆ ಹತ್ತಿ ಅಲ್ಲಾ ಹು ಅಕ್ಬರ್ ಅಂತಾ ಘೋಷಣೆ ಕೂಗಿ ಕೋಮು ದಳ್ಳುರಿಗೆ ಕುಮ್ಮಕ್ಕು ಕೊಟ್ಟಿರುವ ವಿಡಿಯೋ ಎರಡು ದಿನಗಳ ಬಳಿಕ ಬಟಾಬಯಲಾಗಿದೆ.ಇದು ಗೊತ್ತಾಗುತ್ತಿದ್ದಂತೆ ಆತ ನಾಪತ್ತೆಯಾಗಿದ್ದಾನೆ.

ಇನ್ನೊಂದೆಡೆ ಕೋಮುದಳ್ಳುರಿಯಿಂದ ನಲುಗಿದ್ದ ವಾಣಿಜ್ಯನಗರಿ ಸಹಜಸ್ಥಿತಿಗೆ ಮರಳಿದ್ದು, ವಿವಾದಿತ ಪೋಸ್ಟ್ ಮಾಡಿದ್ದ ಆರೋಪಿ ಅಭಿಷೇಕ ಹಿರೇಮಠನನ್ನು ಬಿಗಿ ಭದ್ರತೆಯ ನಡುವೆ ನ್ಯಾಯಾಲಯಕ್ಕೆ ಕರೆತರಲಾಯಿತು. ವಿಚಾರಣೆ ನಡೆಸಿದ ನಾಲ್ಕನೇ ಹೆಚ್ಚುವರಿ ನ್ಯಾಯಾಲಯ, ಇದೇ 30ಕ್ಕೆ ವಿಚಾರಣೆ ಮುಂದೂಡಿದೆ. ಗಲಭೆಯಲ್ಲಿ ಅಮಾಯಕರ ಬಂದನವಾಗಿಲ್ಲ ಎಂದ ಕೇಂದ್ರ ಸಚಿವ ಜೋಶಿ, ಸಮಾಜ ದ್ರೋಹಿಗಳು ಭಾಗವಹಿಸಿದ್ದಾರೆ ಎಂದರು.

ಇನ್ನು ಗಲಭೆಗೆ ಸಂಬಂಧಿಸಿ ಈವರೆಗೆ 89 ಜನರನ್ನು ಬಂಧಿಸಲಾಗಿದೆ.ಭದ್ರತೆ ದೃಷ್ಟಿಯಿಂದ ವಿಡಿಯೋ ಕಾನ್‌ಫರೆನ್ಸ್ ಮೂಲಕ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು.ಆದರೆ ಮಾಡಿದವರನ್ನು ಬಿಟ್ಟು ಅಮಾಯಕರನ್ನು ಬಂಧಿಸಲಾಗಿದೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ರು .

ಒಟ್ಟಿನಲ್ಲಿ ಕೋಮು ದಳ್ಳುರಿಯಲ್ಲಿ ಬೆಂದಿದ್ದ ಹುಬ್ಬಳ್ಳಿ ಈಗ ಸಹಜ ಸ್ಥಿತಿಗೆ ಮರಳುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರಾದ್ಯಂತ ಖಾಕಿ ಕಟ್ಟೆಚ್ಚರ ವಹಿಸಲಾಗಿದೆ. ನಾಪತ್ತೆಯಾಗಿರುವ ಮೌಲ್ವಿಗಾಗಿ ಪೊಲೀಸರ ಹುಡುಕಾಟ

- Advertisment -

Most Popular

Recent Comments