ಬೆಂಗಳೂರು: ಇಂದಿನ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದ್ದು, ಇಂದು ರಾಜ್ಯದಲ್ಲಿ 9 ಜನರಿಗೆ ಸೋಂಕು ಹರಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 598 ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, 24 ಗಂಟೆಯಲ್ಲಿ ರಾಜ್ಯದಲ್ಲಿ ಮೂವರು ಸೋಂಕಿತರು ಸಾವನ್ನಪ್ಪುವುದರ ಮೂಲಕ ಸಾವಿನ ಸಂಖ್ಯೆ 25ಕ್ಕೆ ಏರಿದೆ.
ಇಂದು ರಾಜ್ಯದಲ್ಲಿ ಪತ್ತೆಯಾದ ಸೋಂಕಿತರಲ್ಲಿ ತುಮಕೂರಿನಲ್ಲಿ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಪೇಷೆಂಟ್ ನಂ. 535 ಹಾಗೂ 553 ರ ವ್ಯಕ್ತಿಯಿಂದ 29 ವರ್ಷದ ಮಹಿಳೆ ಹಾಗೂ 40 ವರ್ಷದ ಪುರುಷನಿಗೆ ಸೋಂಕು ಹರಡಿದೆ. ಇನ್ನು ವಿಜಯಪುರದಲ್ಲೂ ಇಬ್ಬರಿಗೆ ಸೋಂಕು ತಗುಲಿದ್ದು, ಪೇಷೆಂಟ್ 221 ಒಬ್ಬನಿಂದಲೇ 22 ವರ್ಷದ ಪುರುಷ ಹಾಗೂ 45 ವರ್ಷದ ಪುರುಷ ಇಬ್ಬರಿಗೂ ಸೋಂಕು ಹರಡಿರುತ್ತದೆ. ಬೀದರ್ನಲ್ಲಿ 82 ವರ್ಷದ ಒಬ್ಬ ವೃದ್ಧನಲ್ಲಿ ಸೋಂಕು ಪತ್ತೆಯಾಗಿದ್ದು, ತೀವ್ರ ಉಸಿರಾಟ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ಚಿಕ್ಕಬಳ್ಳಾಪುರದಲ್ಲಿ ಪೇಷೆಂಟ್ 253 ವ್ಯಕ್ತಿಯ ದ್ವಿತೀಯ ಸಂಪರ್ಕದಿಂದ 54 ವರ್ಷದ ಪುರುಷನಿಗೆ ಸೋಂಕು ಬಂದಿರುತ್ತದೆ. ಬೆಳಾಗಾವಿಯಲ್ಲಿ ಒಂದು ಸೋಂಕು ಪ್ರಕರಣ ಪತ್ತೆಯಾಗಿದ್ದು, ಪೇಷೆಂಟ್ ನಂ. 128 ರ ವ್ಯಕ್ತಿಯಿಂದ 23 ವರ್ಷದ ಪುರುಷನಿಗೆ ಕೊರೋನಾ ಹರಡಿದೆ. ಬಾಗಲಕೋಟೆಯ ಜಮಖಂಡಿಯಲ್ಲೂ ಒಂದು ಕೇಸ್ ದೃಢಪಟ್ಟಿದೆ. 45 ವರ್ಷದ ಮಹಿಳೆಗೆ ಪೇಷೆಂಟ್ 381 ಸೋಂಕಿತನಿಂದ ವೈರಸ್ ಹರಡಿರುತ್ತದೆ. ಪೇಷೆಂಟ್ ನಂ.444 ವ್ಯಕ್ತಿ ಸಂಪರ್ಕದಿಂದ 32 ವರ್ಷದ ಮಹಿಳೆಗೆ ಸೋಂಕು ಬಂದಿದ್ದು, ಈ ಮೂಲಕ ಇಂದು ಬೆಂಗಳೂರಿನಲ್ಲಿ ಒಂದು ಸೋಂಕು ದೃಢಪಟ್ಟಿದೆ.
2scorpion