ಬೆಂಗಳೂರು: ರಾಜ್ಯದಲ್ಲಿ ಇಂದು 9 ಜನರಲ್ಲಿ ಕೋವಿಡ್-19 ಪತ್ತೆಯಾಗಿದ್ದು, ಕಲಬುರಗಿ ಒಂದರಲ್ಲೇ 8 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 532 ಕ್ಕೆ ಏರಿಕೆಯಾಗಿದೆ.
ಕಲಬುರಗಿಯಲ್ಲಿ ಕೇವಲ 24 ಗಂಟೆಯಲ್ಲಿ 8 ಮಂದಿಗೆ ಸೋಂಕು ತಗುಲಿದ್ದು, ಗರಿಷ್ಠ ಮಟ್ಟದಲ್ಲಿ ಸೋಂಕು ಹರಡಿದೆ. ಪೇಷೆಂಟ್ ನಂ. 425 ವ್ಯಕ್ತಿಯಿಂದ 4 ಜನರಿಗೆ ಸೋಂಕು ಹರಡಿದೆ. ಈ ನಾಲ್ವರಲ್ಲಿ 14 ವರ್ಷದ ಬಾಲಕಿ ಸೇರಿದಂತೆ 17 ವರ್ಷದ ಯುವತಿ,12 ವರ್ಷದ ಬಾಲಕಿ ಹಾಗೂ 40 ವರ್ಷದ ಮಹಿಳೆಯಲ್ಲಿ ಸೋಂಕು ಕಂಡುಬಂದಿದೆ. ಇನ್ನುಳಿದಂತೆ ಪೇಷೆಂಟ್ ನಂ. 205 ವ್ಯಕ್ತಿಯಿಂದ 20 ವರ್ಷದ ಯುವಕ ಹಾಗೂ 22 ವರ್ಷದ ಯುವಕನಿಗೆ ದಸೋಂಕು ಬಂದಿದೆ. ಸೋಂಕಿತ 515 ವ್ಯಕ್ತಿಯ ಸಂಪರ್ಕದಿಂದ 25 ವರ್ಷದ ಪುರುಷ ಹಾಗೂ ಪೇಷೆಂಟ್ ನಂ.395 ಸೋಂಕಿತೆಯಿಂದ ನಾಲ್ಕುವರೆ ವರ್ಷದ ಹೆಣ್ಣು ಮಗುವಿಗೂ ಸೋಂಕು ಹರಡಿದೆ.
ಇನ್ನು ಬೆಳಗಾವಿಯಲ್ಲಿ ಒಂದು ಕೊರೋನಾ ಕೇಸ್ ಪತ್ತೆಯಾಗಿದ್ದು, ಪೇಷೆಂಟ್ 293 ವ್ಯಕ್ತಿಯ ಸಂಪರ್ಕದಿಂದ 12 ವರ್ಷದ ಬಾಲಕನಲ್ಲಿ ಸೋಂಕು ದೃಢಪಟ್ಟಿದೆ. ಹಾಗಾಗಿ ರಾಜ್ಯದಲ್ಲಿ ಒಟ್ಟು ಈವರೆಗೆ 532 ಜನರಲ್ಲಿ ಸೋಂಕು ದೃಢಪಟ್ಟಿದೆ. ಇನ್ನು 20 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇವೆಲ್ಲದರ ಮಧ್ಯೆ 215 ಮಂದಿ ಸೋಂಕಿತರು ಸೋಂಕಿನಿಂದ ಗುಣಮುಖರಾಗಿದ್ದಾರೆ.