Home ದೇಶ-ವಿದೇಶ ಜಗತ್ತಿನಾದ್ಯಂತ  ಸೋಂಕಿತರ ಸಂಖ್ಯೆ  34 ಲಕ್ಷಕ್ಕೇರಿಕೆ : ಒಂದೇ ದಿನದಲ್ಲಿ 83,255 ಜನರಲ್ಲಿ ಸೋಂಕು ದೃಢ

ಜಗತ್ತಿನಾದ್ಯಂತ  ಸೋಂಕಿತರ ಸಂಖ್ಯೆ  34 ಲಕ್ಷಕ್ಕೇರಿಕೆ : ಒಂದೇ ದಿನದಲ್ಲಿ 83,255 ಜನರಲ್ಲಿ ಸೋಂಕು ದೃಢ

ನವದೆಹಲಿ: ಜಗತ್ತಿನಾದ್ಯಂತ  ಕೋವಿಡ್-19 ತನ್ನ ಕದಂಬಬಾಹು ಚಾಚುತ್ತಲೇ ಇದೆ. ಕೇವಲ 24 ಗಂಟೆಯಲ್ಲಿ 83,255 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈವರೆಗೆ ಒಟ್ಟು  34,81,349 ಜನರಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಸಾವಿನ ಸಂಖ್ಯೆಯೂ ಏರುತ್ತಿದ್ದು, ಒಂದೇ ದಿನದಲ್ಲಿ 5,215 ಜನ  ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ಈವರೆಗೆ ಒಟ್ಟು 2,44,663 ಮಂದಿ ಸೋಂಕಿತರು  ಮೃತಪಟ್ಟಿದ್ದಾರೆ. ಇದರ ನಡುವೆ ಗುಣಮುಖರಾದವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಈವರೆಗೆ 11,20,314 ಜನ ಸಾವನ್ನಪ್ಪಿದ್ದಾರೆ.

ಜಗತ್ತಿನ ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕಾದಲ್ಲಿ 29,744 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಈವರೆಗೆ ಒಟ್ಟು 11,60,774 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈವರೆಗೆ ಅಮೇರಿಕಾದಲ್ಲಿ ಸಾವನ್ನಪ್ಪಿದವರ ಸಂಖ್ಯೆಯೂ 67,444ಕ್ಕೇರಿಕೆಯಾಗಿದ್ದು, ಒಂದೇ ದಿನದಲ್ಲಿ 1,691 ರಷ್ಟು ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಎರಡನೇ ಸ್ಥಾನದಲ್ಲಿರುವ ಸ್ಪೇನ್​ನಲ್ಲಿ 2,45,567 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಒಂದು ದಿನದಲ್ಲಿ 2,588 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಮೃತಪಟ್ಟವರ ಸಂಖ್ಯೆಯೂ 25,100ಕ್ಕೇರಿಕೆಯಾಗಿದೆ. ಇನ್ನು ಇಟಲಿಯಲ್ಲಿ ಒಟ್ಟು 2,09,328 ಮಂದಿಯಲ್ಲಿ ಸೋಂಕು ದೃಢಪಟ್ಟ್ಟಿದ್ದು, ನಿನ್ನೆಯಿಂದ ಇಂದಿಗೆ 1,900 ಜನರಲ್ಲಿ ಸೋಂಕು ಪತ್ತೆಯಾಗಿದೆ.ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯೂ 28,710 ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ ಒಂದೇ ದಿನದಲ್ಲಿ 2,644 ಮಂದಿಗೆ ಸೋಂಕು ಹರಡಿದ್ದು ಸೋಂಕಿತರ ಸಂಖ್ಯೆ 39,980ಕ್ಕೆ ಏರಿದೆ. ಇನ್ನು ಇಲ್ಲ ಸಾವನ್ನಪ್ಪಿದವರ ಸಂಖ್ಯೆಯೂ ಏರಿಕೆಯಾಗಿದ್ದು, ಈವರೆಗೆ ಒಟ್ಟು 1,301 ಜನ ಸೋಂಕಿತರು ಮೃತಪಟ್ಟಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್​ ವೀಕ್ಷಕರಾಗಿ ಬಂಗಾರೇಶ ಹಿರೇಮಠ ನೇಮಕ

ಬೆಂಗಳೂರು : ಬಾಗಲಕೋಟೆ ಜಿಲ್ಲಾ ಉಸ್ತುವಾರಿಯಾಗಿ ಕಾಂಗ್ರೆಸ್​ ವೀಕ್ಷಕರಾಗಿ ಬಂಗಾರೇಶ್ ಹಿರೇಮಠ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್​.ಎಂ.ರೇವಣ್ಣ, ಶಾಸಕ...

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

Recent Comments