ಬೆಂಗಳೂರು: ರಾಜ್ಯದಲ್ಲಿ ಕೊರೋನಾಸೋಂಕಿತ ಸಂಖ್ಯೆಯಲ್ಲಿ ಭಾನುವಾರ ಇಳಿಕೆ ಕಂಡಿದ್ದರಿಂದ ರಾಜ್ಯದ ಜನತೆ ಸ್ವಲ್ಪ ಮಟ್ಟಿಗೆ ನಿರಾಳಗೊಂಡಿದ್ದರು. ಆದರೆ ಇಂದು ಮತ್ತೆ ರಾಜ್ಯದಲ್ಲಿ 8 ಪ್ರಕರಣಗಳು ದಾಖಲಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 511 ಕ್ಕೇರಿಕೆಯಾಗಿದ್ದು, ರಾಜ್ಯದಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.
ಇಂದು ಪತ್ತೆಯಾಗಿರುವ ಸೋಂಕಿತರಲ್ಲಿ ದಕ್ಷಿಣ ಕನ್ನಡದಲ್ಲಿ 2 ಪ್ರಕರಣಗಳು ಪತ್ತೆಯಾಗಿದ್ದು, 45 ವರ್ಷದ ಪುರುಷ ಹಾಗೂ 80 ವರ್ಷದ ಮಹಿಳೆಗೆ ಸೊಂಕು ತಗುಲಿದೆ. ಇವರಿಬ್ಬರಿಗೂ ಪೇಷೆಂಟ್ ನಂ.432 ರಿಂದ ಸೋಂಕು ಹರಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 20 ಕ್ಕೆ ಏರಿದೆ.
ಇನ್ನು ಬೆಂಗಳೂರಿನಲ್ಲಿ ಭಾನುವಾರ ಒಂದು ಸೋಂಕು ಪ್ರಕರಣವು ಪತ್ತೆಯಾಗಿರಲಿಲ್ಲ. ಆದರೆ ಇಂದು ಒಂದು ಕೇಸ್ ದಾಖಲಾಗಿದ್ದು, 13 ವರ್ಷದ ಬಾಲಕನಿಗೆ ಸೋಂಕು ಹರಡಿದೆ. ಇನ್ನು ಮಂಡ್ಯದ ನಾಗಮಂಗಲದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದ್ದು, ಮುಂಬೈ, ಮಹಾರಾಷ್ಟ್ರಕ್ಕೆ ತೆರಳಿದ್ದರಿಂದ 50 ವರ್ಷದ ಪುರುಷನಿಗೆ ಸೋಂಕು ಹರಡಿದೆ. ಬಾಗಲಕೋಟೆಯ ಜಮಖಂಡಿಯಲ್ಲಿ 2 ಪ್ರಕರಣಗಳು ಪತ್ತೆಯಾಗಿದ್ದು, ಪೇಷೆಂಟ್ ನಂ. 456 ವ್ಯಕ್ತಿಯಿಂದ 32 ವರ್ಷದ ಮಹಿಳೆ ಹಾಗೂ 21 ವರ್ಷದ ಮಹಿಳೆಗೆ ಸೋಂಕು ಹರಡಿದೆ. ಇನ್ನು ವಿಜಯಪುರಲದಲೂ 2 ಪ್ರಕರಣಗಳು ದಾಖಲಾಗಿದ್ದು, 45 ವರ್ಷದ ಪುರುಷನಿಗೆ ಪೇಷೆಂಟ್ ನಂ. 221 ವ್ಯಕ್ತಿಯ ಸಂಪರ್ಕದಿಂದ ಸೋಂಕು ಬಂದಿದೆ. ವಿಜಯಪುರದಲ್ಲಿ 27 ವರ್ಷದ ಪುರುಷನಲ್ಲೂ ಸೋಂಕು ಪತ್ತೆಯಾಗಿದ್ದು, ಸೋಂಕಿತನ ಟ್ರಾವೆಲ್ ಹಿಸ್ಟರಿ ಬಗ್ಗೆ ಮಾಹಿತಿ ದೊರೆತಿಲ್ಲ.