Friday, September 30, 2022
Powertv Logo
Homeರಾಜ್ಯರಾಜ್ಯದಲ್ಲಿಅಟ್ಟಹಾಸ ಮೆರೆಯುತ್ತಿರುವ ಕೊರೋನಾ : ನಿನ್ನೆ 36 ಕೊರೋನಾ ಪ್ರಕರಣ, ಇಂದು 38 ಪ್ರಕರಣ ಪತ್ತೆ

ರಾಜ್ಯದಲ್ಲಿಅಟ್ಟಹಾಸ ಮೆರೆಯುತ್ತಿರುವ ಕೊರೋನಾ : ನಿನ್ನೆ 36 ಕೊರೋನಾ ಪ್ರಕರಣ, ಇಂದು 38 ಪ್ರಕರಣ ಪತ್ತೆ

ಬೆಂಗಳೂರು: ಕೋವಿಡ್-19 ಸೋಂಕು ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಗುರುವಾರ 36 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಇಂದು ಮತ್ತೆ 38 ಮಂದಿಯಲ್ಲಿ ಕೊರೋನಾ ದೃಢಪಟ್ಟಿದೆ. ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 353 ಕ್ಕೆ ಏರಿಕೆಯಾಗಿದೆ.

ಇಂದು ಪತ್ತೆಯಾದ ಸೋಂಕಿತರಲ್ಲಿ ಬೆಂಗಳೂರು ನಗರದಲ್ಲಿ 9 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಮೈಸೂರಿನಲ್ಲಿ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿದ್ದು, 12 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನುಳಿದಂತೆ ಮಂಡ್ಯ ಮಳವಳ್ಳಿಯಲ್ಲಿ 3, ವಿಜಯಪುರ 2, ಬಳ್ಳಾರಿಯಲ್ಲಿ 7, ಚಿಕ್ಕಬಳ್ಳಾಪುರದಲ್ಲಿ 3 ಮಂದಿಗೆ ಸೋಂಕು ತಗುಲಿದೆ. ದಕ್ಷಿಣ ಕನ್ನಡ ಹಾಗೂ ಬೀದರ್​ನಲ್ಲಿ ತಲಾ ಒಬ್ಬರು ಸೋಂಕಿತರು ಪತ್ತೆಯಾಗಿದ್ದಾರೆ.

ಬೆಂಗಳೂರಲ್ಲಿ ಇಂದು 9 ಮಂದಿಯಲ್ಲಿ ಪತ್ತೆಯಾಗಿರುವ ಕೊರೋನಾ ಪಾಸಿಟಿವ್ ಬಂದಿದ್ದು, 11 ವರ್ಷದ ಬಾಲಕಿ ಮತ್ತು ಆರು ವರ್ಷದ ಬಾಲಕನಿಗೆ ಕೊರೋನಾ ಕಂಡುಬಂದಿದೆ. ಇನ್ನುಳಿದಂತೆ 25 ವರ್ಷದ ಮಹಿಳೆ, 32 ವರ್ಷದ ಪುರುಷ, 23 ವರ್ಷದ ಯುವಕ ಮತ್ತು 28 ವರ್ಷದ ಯುವಕ ಹಾಗೂ 55 ವರ್ಷದ ವ್ಯಕ್ತಿಗೆ ಕೊರೋನಾ ಪಾಸಿಟಿವ್‌ ಬಂದಿದೆ. ಇವರಿಗೆ ಹೇಗೆ ಕೊರೋನಾ ಬಂತು ಅನ್ನೋದರ ಬಗ್ಗೆ ಶೋಧ ನಡೆಸಲಾಗುತ್ತದೆ. ಬೆಂಗಳೂರಲ್ಲಿ ಕಂಡುಬಂದ 9 ಮಂದಿ ಸೋಂಕಿತರಲ್ಲಿ 7 ಮಂದಿಗೆ ಯಾವುದೇ ರೀತಿಯ ಟ್ರಾವೆಲ್ ಹಿಸ್ಟರಿ ಇಲ್ಲ.

ಬಳ್ಳಾರಿಯ ಹೊಸಪೇಟೆಯಲ್ಲಿ 7 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಹೊಸಪೇಟೆಯಲ್ಲಿ 10 ವರ್ಷದ ಬಾಲಕಿಗೂ ಸೋಂಕು ತಗುಲಿದೆ. ಒಂದೇ ಕುಟುಂಬದ 7 ಮಂದಿಗೂ ಸೋಂಕು ತಗುಲಿದೆ. ಇದೀಗ ಇವರ ಬಗ್ಗೆ ಜಿಲ್ಲಾಡಳಿತ ಮಾಹಿತಿ ಕಲೆಹಾಕುತ್ತಿದೆ.

ದಕ್ಷಿಣ ಕನ್ನಡದ ಉಪ್ಪಿನಂಗಡಿ ವ್ಯಕ್ತಿಗೆ ಸೋಂಕು ತಗುಲಿದ್ದು, ದೆಹಲಿಯಿಂದ ಬಂದು 21 ದಿನಗಳ ಬಳಿಕ ಸೋಂಕು ಇರುವುದು ದೃಢಪಟ್ಟಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಒಂದೇ ದಿನ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂವರು ಸೋಂಕಿತರಿಗೂ ದೆಹಲಿ ನಿಜಾಮುದ್ದೀನ್​ ನಂಟು ಇರುವುದು ತಿಳಿದು ಬಂದಿದೆ. ಮೈಸೂರಿನಲ್ಲಿ ಇಂದು ಒಂದೇ ದಿನ 12 ಮಂದಿಗೆ ಸೋಂಕು ತಗುಲಿದೆ. ನಂಜನಗೂಡಿನಲ್ಲಿ ಪೇಷೆಂಟ್ ನಂ. 52 ರಿಂದ 8 ಜನರಿಗೆ ಸೋಂಕು ತಗುಲಿದೆ. ಚಿಕ್ಕಬಳ್ಳಾಪುರದಲ್ಲಿ ಪೇಷೆಂಟ್​ ನಂ. 250 ರಿಂದ 9 ವರ್ಷದ ಬಾಲಕ, 21 ವರ್ಷದ ಯುವಕ, 30 ವರ್ಷದ ವ್ಯಕ್ತಿಗೆ ಮೂವರಿಗೆ ಸೋಂಕು ಹರಡಿದೆ.

ಬೀದರ್‌ ಜಿಲ್ಲೆಯಲ್ಲಿ18 ವರ್ಷದ ಬಾಲಕನಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ದೆಹಲಿಗೆ ತೆರಳಿದ್ದ ಪೇಷೆಂಟ್‌ ನಂಬರ್‌ 328 ವ್ಯಕ್ತಿಯೊಂದಿಗೆ ಜೊತೆ ಈತನಿಗೆ ಸಂಪರ್ಕವಿತ್ತು ಎಂದು ಹೇಳಲಾಗುತ್ತಿದೆ. ವಿಜಯಪುರದಲ್ಲಿ ಇಂದು ಇಬ್ಬರಲ್ಲಿ ಕೊರೋನಾ ಕಂಡುಬಂದಿದ್ದು, ಆರು ವರ್ಷದ ಬಾಲಕ ಹಾಗೂ 28 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments