ಭಾರತದಲ್ಲಿ ಸೋಂಕಿತರ ಸಂಖ್ಯೆ 74 ಸಾವಿರಕ್ಕೆ ಏರಿಕೆ : 2,415 ಜನ ಸೋಂಕಿನಿಂದ ಸಾವು

0
291

ನವದೆಹಲಿ: ಭಾರತದಲ್ಲಿ ಕದಂಬ ಬಾಹು ಚಾಚುತ್ತಿರುವ ಹೆಮ್ಮಾರಿ ಕೊರೋನಾಗೆ ಈವರೆಗೆ ಒಟ್ಟು 74,281 ಜನ ತುತ್ತಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 3,525 ಜನರಿಗೆ ಸೋಂಕು ಹರಡಿದೆ. ಇನ್ನು ಈವರೆಗೆ ಸೋಂಕಿನಿಂದ 2,415 ಸಾವನ್ನಪ್ಪಿದ್ದಾರೆ. ಗುಣಮುಖರಾದವರ ಸಂಖ್ಯೆಯೂ ಹೆಚ್ಚಾಗಿದ್ದು, 22,455 ಕ್ಕೆ ಏರಿಕೆಯಾಗಿದೆ.

ದೇಶದಲ್ಲಿನ ಇತರೆ ರಾಜ್ಯದಗಳಿಗೆ ಹೋಲಿಸಿದರೆ ಮಹಾರಾಷ್ಟ್ರವೇ ಮುಂಚೂಣಿಯಲ್ಲಿದ್ದು, ಕಳೆದ 24 ಗಂಟೆಯಲ್ಲಿ 1,026 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 24,427 ಕ್ಕೇರಿಕೆಯಾಗಿದೆ. ಈವರೆಗೆ ಅಲ್ಲಿ 921 ಜನ ಸಾವನ್ನಪ್ಪಿದ್ದಾರೆ. ಇವೆಲ್ಲದರ ನಡುವೆ 5 ಸಾವಿರಕ್ಕೂ ಹೆಚ್ಚು ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಗುಜರಾತ್​ನಲ್ಲಿ ಸೋಂಕಿತರ ಸಂಖ್ಯೆ 8,900 ರ ಗಡಿ ದಾಟಿದ್ದು, ಕಳೆದ 24 ಗಂಟೆಯಲ್ಲಿ 362 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸಾವನ್ನಪ್ಪಿದವರ ಸಂಖ್ಯೆ 537ಕ್ಕೆ ಏರಿದೆ.

ಇನ್ನು ತಮಿಳುನಾಡಿನಲ್ಲಿ ವೇಗವಾಗಿ ಸೋಂಕು ಹರಡುತ್ತಿದ್ದು, ಒಂದೇ ದಿನದಲ್ಲಿ 716 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 8,700 ರ  ಗಡಿ ದಾಟಿದೆ. ಈಗಾಗಲೇ 61 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ದೆಹಲಿಯಲ್ಲಿ ಕಳೆದ 24  ಗಂಟೆಯಲ್ಲಿ  400ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು 7,639 ಜನರಲ್ಲಿ ಸೋಂಕು ದೃಢಪಟ್ಟಿದೆ.ಈವರೆಗೆ 86 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ರಾಜಸ್ಥಾನದಲ್ಲೂ 4ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದೆ. ಆದರೆ ಅಲ್ಲಿ ಸೋಂಕಿತರ ಅರ್ಧದಷ್ಟು ಜನ ಅಂದರೆ 2ಸಾವಿರಕ್ಕೂ ಹೆಚ್ಚು ಜನ ಸೋಂಕಿತರು ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆಯೂ 117 ಕ್ಕೇರಿಕೆಯಾಗಿದ್ದು, ದೆಹಲಿ ಹಾಗೂ ತಮಿಳನಾಡಿಗೆ ಹೋಲಿಸಿದರೆ  ರಾಜಸ್ಥಾನದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯೂ ಹೆಚ್ಚಾಗಿದೆ.

ಮಧ್ಯಪ್ರದೇಶದಲ್ಲೂ ಸೋಂಕಿತರ 4 ಸಾವಿರದ ಅಂಚಿನಲ್ಲಿದೆ. ಈವರೆಗೆ ಇಲ್ಲಿ ಒಟ್ಟು 225 ಜನ  ಸೋಂಕಿತರು ಮೃತಪಟ್ಟಿದ್ದಾರೆ. ಇನ್ನು ಈವರೆಗೆ  1,800ಕ್ಕೂ ಹೆಚ್ಚು ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.

LEAVE A REPLY

Please enter your comment!
Please enter your name here