ರಾಜ್ಯದಲ್ಲಿ ಇಂದು ಮತ್ತೆ 19 ಜನರಲ್ಲಿ ಸೋಂಕು ಪತ್ತೆ : ಬಾಗಲಕೋಟೆಯಲ್ಲೇ 13 ಜನರಲ್ಲಿ ಸೋಂಕು ದೃಢ

0
719

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಒಟ್ಟು 19 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 692ಕ್ಕೇರಿಕೆಯಾಗಿದೆ.ರಾಜ್ಯದಲ್ಲಿ ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 29 ಕ್ಕೇರಿದೆ. ಈ ನಡುವೆ ಸೋಂಕಿನಿಂದ ಈವರೆಗೆ ಒಟ್ಟು 345 ಜನರು ಗುಣಮುಖರಾಗಿದ್ದಾರೆ.  

ರಾಜ್ಯದಲ್ಲಿ ಇಂದು ಪತ್ತೆಯಾದ 19 ಸೋಂಕಿತರಲ್ಲಿ 13 ಜನ ಸೋಂಕಿತರು ಬಾಗಲಕೋಟೆಯ ಬಾದಾಮಿಯಲ್ಲೇ ಪತ್ತೆಯಾಗಿದ್ದಾರೆ. ಅದರಲ್ಲಿ ಒಬ್ಬರು 18 ವರ್ಷದ ಯುವತಿಯಾಗಿದ್ದಾರೆ. ಇನ್ನುಳಿದಂತೆ 12 ಜನರಿಗೆ ಪೇಷೆಂಟ್ ನಂ. 607 ರ ವ್ಯಕ್ತಿಯಿಂದಲೇ  ಸೋಂಕು ತಗುಲಿದ್ದು, 45 ವರ್ಷದ ಪುರುಷ, 55 ವರ್ಷದ ಮಹಿಳೆ, 26 ವರ್ಷದ ಪುರುಷ, 47 ವರ್ಷದ ಪುರುಷ, 30 ವರ್ಷದ ಮಹಿಳೆ, 15 ವರ್ಷದ ಬಾಲಕ, 40 ವರ್ಷದ ಮಹಿಳೆ, 23 ವರ್ಷದ ಪುರುಷ, 10 ವರ್ಷದ ಬಾಲಕ, 32 ವರ್ಷೆದ ಪುರುಷ, 30 ವರ್ಷದ ಪುರುಷ ಹಾಗೂ 16 ವರ್ಷದ ಬಾಲಕಿ ಸೋಂಕಿಗೆ ತುತ್ತಾಗುದ್ದಾರೆ.

ದಕ್ಷಿಣ ಕನ್ನಡದಲ್ಲಿ ಇಂದು ಮೂವರಲ್ಲಿ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪೇಷೆಂಟ್ 536  ರ ಸೋಂಕಿತನಿಂದ 11 ವರ್ಷದ ಬಾಲಕಿ ಹಾಗೂ 35 ವರ್ಷದ ಮಹಿಳೆಗೆ ಸೋಂಕು ಬಂದಿರುತ್ತದೆ. ಇನ್ನೊಬ್ಬ ಸೋಂಕಿತೆ 16 ವರ್ಷದ ಬಾಲಕಿಯಾಗಿದ್ದು, ಪೇಷೆಂಟ್ ನಂ. 390  ರ ವ್ಯಕ್ತಿಯಿಂದ ಸೋಂಕು ಬಂದಿರುತ್ತದೆ.

ಬೆಂಗಳೂರಿನಲ್ಲಿ ಇಂದು ಮತ್ತೆ 2 ಪ್ರಕರಣಗಳು ಪತ್ತೆಯಾಗಿದ್ದು, ಪೇಷೆಂಟ್ ನಂ. 654 ಒಬ್ಬರಿಂದಲೇ 40 ವರ್ಷದ ಮಹಿಳೆ ಹಾಗೂ 25 ವರ್ಷದ ಪುರುಷ ಇಬ್ಬರಿಗೂ ಸೋಂಕು ಹರಡಿರುತ್ತದೆ. ಇನ್ನು ಒಂದು ಕೇಸ್ ಕಲಬುರಗಿಯಲ್ಲಿ ಪತ್ತೆಯಾಗಿದೆ. ಪೇಷೆಂಟ್ 610 ರಿಂದ 52 ವರ್ಷದ ಪುರುಷನಿಗೆ ಸೋಂಕು ಬಂದಿರುತ್ತದೆ.  

LEAVE A REPLY

Please enter your comment!
Please enter your name here