Friday, October 7, 2022
Powertv Logo
Homeರಾಜ್ಯರಾಜ್ಯದಲ್ಲಿ 463ಕ್ಕೇರಿದ ಸೋಂಕಿತರ ಸಂಖ್ಯೆ : ಬೆಂಗಳೂರಲ್ಲೇ 11 ಜನರಲ್ಲಿ ಸೋಂಕು ಪತ್ತೆ

ರಾಜ್ಯದಲ್ಲಿ 463ಕ್ಕೇರಿದ ಸೋಂಕಿತರ ಸಂಖ್ಯೆ : ಬೆಂಗಳೂರಲ್ಲೇ 11 ಜನರಲ್ಲಿ ಸೋಂಕು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಲಾಕ್​ಡೌನ್ ಆದೇಶವಿದ್ದರೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಮಾತ್ರ ಏರುತ್ತಲೇ ಇದೆ. ಇಂದು ಮತ್ತೆ ರಾಜ್ಯದಲ್ಲಿ 18 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 463 ಕ್ಕೆ ಏರಿಕೆಯಾಗಿದೆ.

ಇಂದು ಪತ್ತೆಯಾದ ಸೋಂಕಿತರಲ್ಲಿ ಬೆಂಗಳೂರು ಒಂದರಲ್ಲೇ ಒಟ್ಟು 11 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಅದರಲ್ಲಿ 5 ಮಂದಿ ಪಾದರಾಯನಪುರ ಹಾಗೂ  ಹೊಗಸಂದ್ರದಲ್ಲಿ 5 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಬೆಂಗಳೂರಲ್ಲಿ ಸೋಂಕಿತರ ಸಂಖ್ಯೆ 112 ಕ್ಕೆ ಏರಿಕೆಯಾಗಿದೆ.

ಇನ್ನುಳಿದಂತೆ ಬೆಳಗಾವಿಯಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಬಾಗಲಕೋಟೆಯಲ್ಲಿ ಇಬ್ಬರು, ಚಿಕ್ಕಬಳ್ಳಾಪುರದಲ್ಲಿ 1, ವಿಜಯಪುರ ಹಾಗೂ ತುಮಕೂರಿನಲ್ಲಿ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.

- Advertisment -

Most Popular

Recent Comments