Home ರಾಜ್ಯ ರಾಜ್ಯದಲ್ಲಿ ಇಂದು ಮತ್ತೆ 16 ಮಂದಿಯಲ್ಲಿ ಕೊರೋನಾ ಪತ್ತೆ : 443 ಕ್ಕೇರಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಇಂದು ಮತ್ತೆ 16 ಮಂದಿಯಲ್ಲಿ ಕೊರೋನಾ ಪತ್ತೆ : 443 ಕ್ಕೇರಿದ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಇಂದು ಮತ್ತೆ 16 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 443 ಕ್ಕೆ ಏರಿದೆ ಎಂದು ಹೆಲ್ತ್ ಬುಲೆಟಿನ್ ವರದಿ ಪ್ರಕಾರ ತಿಳಿದುಬಂದಿದೆ.

ಇಂದು ಪತ್ತೆಯಾದ 16 ಜನ ಸೋಂಕಿತರಲ್ಲಿ ಬೆಂಗಳೂರು ಒಂದರಲ್ಲೇ 9 ಜನರಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರಲ್ಲಿ ಪೇಷೆಂಟ್ ನಂ.419 ಬಿಹಾರಿ ಮೂಲದ ವ್ಯಕ್ತಿಯಿಂದ 9 ಜನರಿಗೆ ಸೋಂಕು ತಗುಲಿದೆ.

ವಿಜಯಪುರದಲ್ಲಿ ಇಬ್ಬರಿಗೆ ಸೋಂಕು ಹರಡಿದೆ. ಪೇಷೆಂಟ್ 112 ವ್ಕಕ್ತಿಯಿಂದ ಸೋಂಕು 32 ವರ್ಷದ ಪುರಷನಿಗೆ ಸೋಂಕು ಹರಡಿದೆ. ಹಾಗೂ 27 ವರ್ಷದ ಮಹಿಳೆಯಲ್ಲೂ ಸೋಂಕು ಪತ್ತೆಯಾಗಿದ್ದು, ಸೋಂಕು ಹರಡಿದ ಮೂಲ ಪತ್ತೆಯಾಗಿಲ್ಲ. ಇನ್ನು ಪೇಷೆಂಟ್ ನಂ.390 ವ್ಯಕ್ತಿಯ ಸಂಪರ್ಕದಿಂದ ಹುಬ್ಬಳ್ಳಿಯಲ್ಲಿ ಇಬ್ಬರಿಗೆ ಸೋಂಕು ಹರಡಿದೆ. ಅದರಲ್ಲಿ ಒಬ್ಬರು 30 ವರ್ಷದ ಮಹಿಳೆ ಹಾಗೂ 13 ವರ್ಷದ ಹೆಣ್ಣು ಮಗುವಿನಲ್ಲಿ ಸೊಂಕು ಪತ್ತೆಯಾಗಿದೆ. ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ 78 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.

ಇನ್ನುಳಿದಂತೆ  ಮಂಡ್ಯದ 47 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತ ಸಂಖ್ಯೆ 171 ಮತ್ತು 371 ರ ಸಂಪರ್ಕದಿಂದ ಸೋಂಕು ಹರಡಿದೆ. ಸೋಂಕಿತ ಸಂಖ್ಯೆ 179 ವ್ಯಕ್ತಿಯ ಸಂಪರ್ಕದಿಂದ ಮಳವಳ್ಳಿಯ 28 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ.

ರಾಜ್ಯದಲ್ಲಿ ಒಟ್ಟು 443 ಸೋಂಕು ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ 17 ಜನರು ಮೃತರಾಗಿದ್ದಾರೆ. 141 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮರಳಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಸೋಮವಾರದ ನಂತರ ಮುಷ್ಕರ ಮತ್ತಷ್ಟು ತೀವ್ರಗೊಳ್ಳಲಿದೆ : ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು : ಸಾರಿಗೆ ನೌಕರರ ಮುಷ್ಕರ ಮಂಕಾದಂತೆ ಕಾಣ್ತಿದೆ ಎನ್ನುವಷ್ಟರಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದಾರೆ. ಸೋಮವಾರದ ನಂತರ ಮುಷ್ಕರ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ. 1 ಲಕ್ಷಕ್ಕೂ ಹೆಚ್ಚು...

ನಿಖಿಲ್ ಕುಮಾರ್ ಸ್ವಾಮಿಗೂ ಕೊರೋನಾ ಪಾಸಿಟಿವ್

ಬೆಂಗಳೂರು : ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಅವರಿಗೂ ಕೊರೋನಾ ಪಾಸಿಟಿವ್ ವರದಿಯಾಗಿತ್ತು ಈಗ ನಿಖಿಲ್ ಅವರಿಗೂ ಪಾಸಿಟಿವ್ ಬಂದಿದೆ. ಇಂದು ನಿಖಿಲ್ ಅವರ ಮೊದಲನೇ ವಾರ್ಷಿಕೋತ್ಸವವೂ ಆಗಿದೆ.  ನಾನು ಇಂದು...

ವಿವಾಹಕ್ಕೆ 100 – 200, ಅಂತ್ಯಸಂಸ್ಕಾರಕ್ಕೆ 25 – 50 ಜನ ಮಾತ್ರ

ಬೆಂಗಳೂರು : ಸಿಎಂ ಯಡಿಯೂರಪ್ಪನವರು ಕೊರೋನಾ ಕಾರಣದಿಂದ ಆಸ್ಪತ್ರೆಗೆ ದಾಖಲಾದ ಕಾರಣ ಸಚಿವ ಸುಧಾಕರ್ ಮತ್ತು ಬೊಮ್ಮಾಯಿ ಅವರು ಸಭೆ ನಡೆಸಿ ರಾಜ್ಯದಲ್ಲಿ ಇನ್ಮೇಲೆ ಟಫ್ ರೂಲ್ಸ್ ಶುರುವಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ.  ಕೊವಿಡ್ ನಿಯಮ...

ಕೊರೋನಾ ಇಲ್ಲ ಅಂದವರ ಕಪಾಳಕ್ಕೆ ಬಾರಿಸಿ: ಸುನೇತ್ರ

ಬೆಂಗಳೂರು: ಕೊರೋನಾಗೆ ನಟಿ ಸುನೇತ್ರ ಪಂಡಿತ್ ಸಹೋದರಿ ಸಾವನ್ನಪ್ಪಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಎಂದು ನಟಿ ಸುನೇತ್ರ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರೋ ಓರ್ವ ಅಧಿಕಾರಿಯಿಂದ ನನ್ನ ಸಹೋದರಿ ಸಾವಾಗಿದೆ ಎಂದು ಸುಮನಹಳ್ಳಿ ಚಿತಾಗಾರ...

Recent Comments