Sunday, May 29, 2022
Powertv Logo
Homeರಾಜ್ಯರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ : ಇಂದು ಮತ್ತೆ 15 ಜನರಲ್ಲಿ ಸೋಂಕು ಪತ್ತೆ

ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ : ಇಂದು ಮತ್ತೆ 15 ಜನರಲ್ಲಿ ಸೋಂಕು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಅಂಕಿ ಅಂಶದ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದ್ದು, ಇಂದು ಮತ್ತೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ.15 ಮಂದಿಗೆ ಸೋಂಕು ಹರಡಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 489 ಕ್ಕೆ ಏರಿದೆ.

ಬೆಂಗಳೂರಲ್ಲಿ 6 ಜನ ಸೋಂಕಿತರು ಹಾಗೂ ಬೆಳಗಾವಿಯಲ್ಲಿ 6 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನುಳಿದಂತೆ ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ ಒಬ್ಬರು ಸೋಂಕಿತರು ಪತ್ತೆಯಾಗಿದ್ದಾರೆ.

ಬೆಂಗಳೂರಲ್ಲಿ ಇಂದು ಮತ್ತೆ 6 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಅವರಲ್ಲಿ ಐವರಿಗೆ ಬಿಹಾರಿ ವೃದ್ಧನಿಂದ ಸೋಂಕು ಹರಡಿದ್ದು, 28 ವರ್ಷದ ಪುರುಷ, 19 ವರ್ಷದ ಯುವತಿ, 17 ಯುವಕ, 21 ವರ್ಷದ ಪುರುಷ ಹಾಗೂ 37 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಇನ್ನೊಬ್ಬ 34 ವರ್ಷದ ವ್ಯಕ್ತಿಗೆ ಬಿಬಿಎಂಪಿ ಕಂಟೈನ್​ಮೆಂಟ್​ಗೆ ತೆರಳಿದ್ದರಿಂದ ಸೋಂಕು ಹರಡಿದೆ. ಈ ಮೂಲಕ ಬೆಂಗಳೂರಲ್ಲಿ ಒಟ್ಟು ಸೋಂಕಿತರ ಸಂಖ್ಯೆ  126ಕ್ಕೆ ಏರಿಕೆಯಾಗಿದೆ.

ಬೆಳಗಾವಿಯಲ್ಲಿ ಪತ್ತೆಯಾಗಿರುವ  6 ಮಂದಿ ಸೋಂಕಿತರಿಗೂ ತಬ್ಲಿಘಿಗೆ ಹೋಗಿ ಬಂದಿದ್ದ ಪೇಷೆಂಟ್ ನಂ. 128 ವೃದ್ಧನಿಂದ 6 ಮಂದಿಗೂ ತಗುಲಿದೆ. ಇನ್ನು ಚಿಕ್ಕಬಳ್ಳಾಪುರದಲ್ಲಿ 18 ವರ್ಷದ ಯುವಕನಿಗೆ ಸೋಂಕು ಹರಡಿದ್ದು, ಆಂಧ್ರದ ಹಿಂದೂಪುರಕ್ಕೆ ಭೇಟಿ ನೀಡಿದ್ದರು. ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಪೇಷೆಂಟ್ ನಂ.409ರಿಂದ  33 ವರ್ಷದ ಮಹಿಳೆಗೆ ಸೋಂಕು ಹರಡಿದೆ. ಮಂಡ್ಯದಲ್ಲಿ ಪೇಷೆಂಟ್ ನಂ. 78 ವ್ಯಕ್ತಿಯಿಂದ 37 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments