ರಾಜ್ಯದಲ್ಲಿ ಇಂದು ಮತ್ತೆ 11 ಜನರಲ್ಲಿ ಸೋಂಕು ಪತ್ತೆ : ಸೊಂಕಿತರ ಸಂಖ್ಯೆ 576 ಕ್ಕೇರಿಕೆ 

0
552

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 11 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ  576 ಕ್ಕೆ ಏರಿಕೆಯಾಗಿದೆ.  ರಾಜ್ಯದಲ್ಲಿ ಈವರೆಗೆ 22 ಸೋಂಕಿತರು ಸಾವನ್ನಪ್ಪಿದ್ದಾರೆ. ಇದರ ನಡುವೆ ಸೋಂಕಿನಿಂದ ಗುಣಮುಖರಾದ ಸಂಖ್ಯೆಯೂ ಹೆಚ್ಚಾಗಿದ್ದು, 235 ಕ್ಕೇರಿಕೆಯಾಗಿದೆ.

ಇಂದು ರಾಜ್ಯದಲ್ಲಿ ಪತ್ತೆಯಾದ 11 ಜನ  ಸೋಂಕಿತರಲ್ಲಿ ಮಂಡ್ಯದಲ್ಲಿ 8 ಪ್ರಕರಣಗಳು ಪತ್ತೆಯಾಗಿದೆ. ಬೆಳಗಾವಿಯಲ್ಲಿ  3ಜನರಲ್ಲಿ ಸೋಂಕು ದೃಢಪಟ್ಟಿದೆ.

ಮಂಡ್ಯದಲ್ಲಿ ಮುಂಬೈ, ಮಹಾರಾಷ್ಟ್ರಕ್ಕೆ ತೆರಳಿದ್ದರಿಂದ 25 ವರ್ಷದ ಪುರುಷ ಹಾಗೂ 24 ವರ್ಷದ ಮಹಿಳೆ ಹಾಗೂ 27 ವರ್ಷದ ಪುರುಷನಿಗೆ ಸೋಂಕು ಹರಡಿದೆ. ಇನ್ನುಳಿದಂತೆ ಮಂಡ್ಯದ ಕೆ.ಆರ್ ಪೇಟೆಯ  30 ವರ್ಷದ ಮಹಿಳೆಗೆ ಪೇಷೆಂಟ್ ನಂ. 566, 567, 568 ಸೋಂಕಿತರಿಂದ ಕೊರೋನಾ ಹರಡಿದೆ.  ಪೇಷೆಂಟ್ ನಂ. 179 ವ್ಯಕ್ತಿ ಒಬ್ಬನ ಸಂಪರ್ಕದಿಂದಲೇ ಮಂಡ್ಯದ ಮಳವಳ್ಳಿಯಲ್ಲಿ ನಾಲ್ವರಿಗೆ ಸೋಂಕು ತಗುಲಿದ್ದು, 19 ವರ್ಷದ ಬಾಲಕ, 13 ವರ್ಷದ ಬಾಲಕ, 32 ವರ್ಷದ ಮಹಿಳೆ ಹಾಗೂ 12 ವರ್ಷದ ಬಾಲಕನಿಗೆ ಸೋಂಕು ಬಂದಿರುತ್ತದೆ.

ಇನ್ನು ಬೆಳಗಾವಿಯ ರಾಯಭಾಗದಲ್ಲೂ ಒಬ್ಬ ಸೋಂಕಿತನಿಂದಲೇ  ಮೂವರಿಗೆ ಸೋಂಕು ಹರಡಿದ್ದು, ಪೇಷೆಂಟ್ ನಂ. 301 ವ್ಯಕ್ತಿಯ ದ್ವಿತೀಯ ಸಂಪರ್ಕದಿಂದ  55 ವರ್ಷದ ಪುರುಷ, 50 ವರ್ಷದ ಪುರುಷ ಹಾಗೂ 30 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. 

LEAVE A REPLY

Please enter your comment!
Please enter your name here