ಇಂದು ಮತ್ತೆ 105 ಜನರಲ್ಲಿ ಸೋಂಕು ದೃಢ : ಸೋಂಕಿತರ ಸಂಖ್ಯೆ  1,710 ಕ್ಕೆ ಏರಿಕೆ

0
689

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 105 ಜನರು ಸೋಂಕಿಗೆ ತುತ್ತಾಗಿದ್ದು, ಈ  ಮೂಲಕ ಸೋಂಕಿತರ ಸಂಖ್ಯೆ 1,710 ಕ್ಕೆ ಏರಿಕೆಯಾಗಿದೆ. ಅದರಲ್ಲಿ ಈವರೆಗೆ 588 ಜನ ಸೋಂಕಿನಿಂದ ಚೇತರಿಸಿಕೊಂಡಿದ್ದು, 1,080 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈವರೆಗೆ 41 ಜನ ಸಾವನ್ನಪ್ಪಿದ್ದಾರೆ.

ಇಂದು ರಾಜ್ಯದಲ್ಲಿ ಪತ್ತೆಯಾದ ಸೋಂಕಿತರಲ್ಲಿ ಹೆಚ್ಚಿನವರು ಮಹಾರಾಷ್ಟ್ರದಿಂದ ಹಿಂತಿರುಗಿದವರೇ ಆಗಿದ್ದಾರೆ. ಅದರಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ 3, ತುಮಕೂರು 6, ಚಿಕ್ಕಬಳ್ಳಾಪುರದಲ್ಲಿ 45, ಮಂಡ್ಯದಲ್ಲಿ 3, ಚಿಕ್ಕಮಗಳೂರು 5, ಮಂಡ್ಯದಲ್ಲಿ  3, ಬೀದರ್ 4, ಹಾವೇರಿ 2, ಉತ್ತರ ಕನ್ನಡ 1, ದಕ್ಷಿಣ ಕನ್ನಡ 1, ಹಾಸನದಲ್ಲಿ 14 ಜನರಿಗೆ ಸೋಂಕು ತಗುಲಿದೆ.

ಇನ್ನು ಹುಬ್ಬಳ್ಳಿಯಲ್ಲಿ ಇಬ್ಬರಿಗೆ ನವದೆಹಲಿಗೆ ಪ್ರಯಾಣ ಬೆಳೆಸಿದ್ದರಿಂದ ಸೋಂಕು ತಗುಲಿದೆ. ಬಾಗಲಕೋಟೆಯಲ್ಲಿ ಪೇಷೆಂಟ್ 680 ರ ಸಂಪರ್ಕದಿಂದ ಸೋಂಕು ಹರಡಿದೆ. ಚಿತ್ರದುರ್ಗದಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ದಾವಣಗೆರೆಯಲ್ಲಿ ಪೇಷೆಂಟ್ 1483 ರ ಸಂಪರ್ಕದಿಂದ ಮೂವರಿಗೆ ಸೋಂಕು ತಗುಲಿದೆ. ವಿಜಯಪುರದಲ್ಲಿ ಪತ್ತೆಯಾದ ಇಬ್ಬರು ಸೋಂಕಿತರು ಕಂಟೈನ್ಮೆಂಟ್ ಝೋನ್​ಗೆ ತೆರಳಿದ್ದರಿಂದ ಸೋಂಕು ದೃಡಪಟ್ಟಿದೆ. ಬೀದರ್​ನಲ್ಲಿ ಇಬ್ಬರು ತೆಲಂಗಾಣ ಪ್ರಯಾಣ ಬೆಳೆಸಿ ಬಂದಿದ್ದರು. ತುಮಕೂರು ಸೋಂಕಿತನ ಮೂಲ ಪತ್ತೆಯಾಗಿಲ್ಲ. ಹಾವೇರಿ ಕಂಟೈನ್ಮೆಂಟ್ ಝೋನ್​ಗೆ ತೆರಳಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆ.

ಬೆಂಗಳೂರಲ್ಲಿ ಇಬ್ಬರಲ್ಲಿ ಪೇಷೆಂಟ್ ನಂ 706 ರಿಂದ ಸೋಂಕು ಪತ್ತೆಯಾಗಿದ್ದು, ಮತ್ತಿಬ್ಬರ ಸೋಂಕಿನ ಮೂಲ ಪತ್ತೆಯಾಗಿಲ್ಲ. ಇನ್ನಿಬ್ಬರಲ್ಲಿ ಸೋಂಖು ಪತ್ತೆಯಾಗಿದ್ದು, ಅದರಲ್ಲಿ ಒಬ್ಬರು ತೀವ್ರ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ.

LEAVE A REPLY

Please enter your comment!
Please enter your name here