Saturday, May 21, 2022
Powertv Logo
Homeದೇಶಜಗತ್ತಿನಾದ್ಯಂತ ತಾಂಡವಾಡುತ್ತಿದೆ ಕೊರೋನಾ : ಭಾರತದಲ್ಲಿ ಹೊಸದಾಗಿ 1,007 ಮಂದಿಗೆ ಸೋಂಕು

ಜಗತ್ತಿನಾದ್ಯಂತ ತಾಂಡವಾಡುತ್ತಿದೆ ಕೊರೋನಾ : ಭಾರತದಲ್ಲಿ ಹೊಸದಾಗಿ 1,007 ಮಂದಿಗೆ ಸೋಂಕು

ನವದೆಹಲಿ: ವಿಶ್ವದಾದ್ಯಂತ ರುದ್ರನರ್ತನವನ್ನಾಡುತ್ತಿರುವ ಡೆಡ್ಲಿ ಕೊರೋನಾಗೆ ಈವರೆಗೆ 1,45,429 ಮಂದಿ ಬಲಿಯಾಗಿದ್ದಾರೆ. ಇನ್ನು 21,80,617 ಜನ ಸೋಂಕಿಗೆ ತುತ್ತಾಗಿದ್ದು, ಅದರಲ್ಲಿ 5,46,777 ಸೋಂಕಿನಿಂದ ಗುಣಮುಖರಾಗಿದ್ದಾರೆ.

ಭಾರತದಲ್ಲೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 1,007 ಜನರಲ್ಲಿ ಸೋಂಕು ದೃಢಪಟ್ಟಿದೆ. ಇನ್ನು 23 ಜನರನ್ನು ಮಹಾಮಾರಿ ಕೊರೋನಾ ಬಲಿ ಪಡೆದುಕೊಂಡಿದ್ದು, ದೇಶದಲ್ಲಿ ಸಾವಿನ ಸಂಖ್ಯೆ 437ಕ್ಕೆ ಏರಿಕೆಯಾಗಿದೆ. ಈವರೆಗೆ ಭಾರತದಲ್ಲಿ13,387 ಜನರಿಗೆ ಸೋಂಕು ಹರಡಿದೆ. ಅದರಲ್ಲಿ 1,749 ಮಂದಿಯಲ್ಲಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇನ್ನು ಅಮೆರಿಕಾದಲ್ಲಿ 6,77,056 ಮಂದಿಯಲ್ಲಿ ಸೋಂಕು  ಕಂಡುಬಂದಿದ್ದು, 34,580 ಜನ ಸಾವನ್ನಪ್ಪಿದ್ದಾರೆ. ಸ್ಪೇನ್​ನಲ್ಲಿ 19,315 ಜನ ಸೋಂಕಿಗೆ ಬಲಿಯಾಗಿದ್ದಾರೆ. ಇಟಲಿಯಲ್ಲಿ 22,170 ಮಂದಿ ಹಾಗೂ ಫ್ರಾನ್ಸ್​ನಲ್ಲಿ 17,164 ಸಾವಪ್ಪಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments