ಬೆಂಗಳೂರು: ಬೆಂಗಳೂರಿನಲ್ಲಿ ಸಿಡಿದೆದ್ದ ಅನ್ನದಾತರು. ಬೆಂಗಳೂರಿನ ಹೆಬ್ಬಾಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ರೈತರು ಪ್ರತಿಭಟನೆ ಆಗಮಿಸುವ ಹಿನ್ನಲೆಯಲ್ಲಿ ಪೊಲೀಸರು ಹೆಬ್ಬಾಳದ ಮುಖ್ಯ ರಸ್ತೆಗೆ ಬ್ಯಾರಿಕೆಡ್ ಗಳನ್ನು ಹಾಕಿ ತಡೆಹಿಡೆಯಲಾಗಿದೆ. 50ಕ್ಕೂ ಹೆಚ್ಚು ಕಾರು ಟೆಂಪೋದಲ್ಲಿ ರೈತರು ಆಗಮಿಸಿದ್ದಾರೆ. ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಕೃಷಿ ಕಾಯ್ದೆ ವಿರೋಧಿಸಿ ನೂರಾರು ಸಂಖ್ಯೆಯಲ್ಲಿ ರೈತರು ಕ್ಯಾತಸಂದ್ರ ಟೋಲ್ ಬಳಿ ಪ್ರತಿಭಟನಾಕಾರರು ಜಮಾಯಿಸಿದ್ದಾರೆ. ತುಮಕೂರು, ಶಿರಾ, ಪಾವಗಡ, ಮಧುಗಿರಿ, ತಿಪಟೂರು ಭಾಗದಿಂದ ಪ್ರತಿಭಟನಾಕಾರರು ಆಗಮಿಸಿದ್ದಾರೆ.
ಕೃಷಿ ಕಾಯ್ದೆ ವಿರೋಧಿಸಿ ಬೀದರ್ ನಲ್ಲೂ ಭಾಲ್ಕಿ ಪಟ್ಟಣದಿಂದ ಡಿಸಿ ಕಚೇರಿವರೆಗೂ ಟ್ಯ್ರಾಕ್ಟರ್ ರ್ಯಾಲಿ ಆರಂಭಿಸಿದ್ದಾರೆ. ರೈತ ಟ್ಯ್ರಾಕ್ಟರ್ ರ್ಯಾಲಿಗೆ ವಿವಿದ ಸಂಘಟನೆಗಳು ಸಾಥ್ ನೀಡಿವೆ. ಅಂಬೇಡ್ಕರ್ ಪ್ರತಿಮೆ, ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸುಮಾರು 45 ಕಿಲೋ ಮೀಟರ್ ವರೆಗೂ ರೈತರು ರ್ಯಾಲಿ ನಡೆಸುತ್ತಿದ್ದಾರೆ.