Home ರಾಜ್ಯ ಬೆಂಗಳೂರು ಚಿಕ್ಕಮಗಳೂರಿನಲ್ಲಿ ಹಸಿದವರಿಗೆ ಅನ್ನ ನೀಡಿದ ಸಹಾಯಹಸ್ತ ತಂಡ

ಚಿಕ್ಕಮಗಳೂರಿನಲ್ಲಿ ಹಸಿದವರಿಗೆ ಅನ್ನ ನೀಡಿದ ಸಹಾಯಹಸ್ತ ತಂಡ

ಚಿಕ್ಕಮಗಳೂರು : ಕೊರೋನಾ ಕಾಲದಲ್ಲಿ ಊರ ತುಂಬಾ ಹೋಟೆಲ್ ಇವೆ ಯಾವ ಹೋಟೆಲ್ ಕೂಡ ಬಾಗಿಲು ತೆಗೆದಿಲ್ಲ. ಜೇಬು ತುಂಬು ದುಡ್ಡಿದ್ರು ಒಂದು ತುತ್ತು ಅನ್ನ ಸಿಗದಂತಹಾ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ನಗರದ ಯಾರೂ ಉಪವಾಸ ಇರಬಾರದು ಎಂದು ಸ್ಥಳಿಯ ಯುವಕ ತನೋಜ್ ಕುಮಾರ್ ಹಾಗೂ ಅವರ ತಂಡ ನಿನ್ನೆಯಿಂದ ನಗರದಲ್ಲಿ ಮೂರು ಹೊತ್ತು ಊಟ ಕೊಡುತ್ತಿದ್ದಾರೆ. ಮೂರು ಹೊತ್ತು ಕೂಡ ಒಂದೊಂದು ಬಗೆಯ ತಿಂಡಿ ಮಾಡಿಕೊಂಡು ಬೀದಿ-ಬೀದಿ, ಗಲ್ಲಿ-ಗಲ್ಲಿ ಸುತ್ತಿ ಊಟ ಹಂಚುತ್ತಿದ್ದಾರೆ. ನಿರ್ಗತಿಕರು, ಭಿಕ್ಷಕರು ಸೇರಿದಂತೆ ಊಟ ಸಿಗದವರು, ಬ್ಯಾಚುಲರ್​ಗಳು ಊಟದ ದಾರಿಯನ್ನೇ ಕಾಯುತ್ತಿದ್ದಾರೆ. ಕೋರೋನಾ ಮೊದಲನೇ ಅಲೆಯಲ್ಲೂ ಕೂಡ ಇದೇ ತಂಡ 45 ದಿನಗಳ ಕಾಲ ನಿರಂತರ ಊಟ ನೀಡಿದ್ರು. ಈಗಲೂ ಎಷ್ಟು ದಿನ ಲಾಕ್‍ಡೌನ್ ಆಗುತ್ತೋ ಅಷ್ಟು ದಿನವೂ ಊಟ ನೀಡಲು ಸಿದ್ಧರಿದ್ದಾರೆ.
ಸಚಿನ್ ಶೆಟ್ಟಿ

LEAVE A REPLY

Please enter your comment!
Please enter your name here

- Advertisment -

Most Popular

‘ನನ್ನಿಂದ ಮನೆಯವರೆಗೂ ಸೋಂಕು ತಗುಲಿದೆ ಎಂದು ತಹಶೀಲ್ದಾರ್ ಸೂಸೈಡ್’

ಚಿಕ್ಕಮಗಳೂರು: ನನ್ನಿಂದಲೇ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಕೊರೋನ ಬಂತು. ನನಗೆ ವಯಸ್ಸಾಗಿದ್ದು, ಬದುಕುವ ಭರವಸೆ ಕಡಿಮೆ ಇದೆ. ಆದರೆ, ನನ್ನ ಮಕ್ಕಳು, ಮೊಮ್ಮಕ್ಕಳಿಗೆ ನನ್ನ ಕಣ್ಣೆದುರೇ ಏನಾದರೂ ಆದರೆ ಅದನ್ನ ನನ್ನಿಂದ ಸಹಿಸಿಕೊಳ್ಳಲು...

ಮನೆ, ಮನೆಗೆ ಹಾಲು ವಿತರಣೆಗೆ ಪೊಲೀಸರ ಅಡ್ಡಿ..!  

ಶಿವಮೊಗ್ಗ: ನಗರ ಪ್ರದೇಶದ ಮನೆಮನೆಗಳಿಗೆ ಹಾಲು ಮಾರಾಟ ಮಾಡುವ ರೈತರಿಗೂ ಬಿಡದೇ ಪೊಲೀಸರು, ದರ್ಪ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.  ಹಾಲು, ತರಕಾರಿ ಮನೆಮನೆಗೆ ತೆರಳಿ ಮಾರಾಟ ಮಾಡಬಹುದು ಎಂದು ಜಿಲ್ಲಾಡಳಿತ ಸೂಚನೆ...

‘ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ’

ಕಲಬುರಗಿ: ಹಗಲಿರುಳು ಎನ್ನದೇ ಕೊರೊನಾ ರೋಗಿಗಳನ್ನ ಬದುಕಿಸೊದಕ್ಕೆ ದುಡಿಯುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿರುವಂತಹ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಗುಂಡೇಪಲ್ಲಿ ಗ್ರಾಮದಲ್ಲಿ ನಡೆದಿದೆ.‌ ಕಳೆದ ನಾಲ್ಕು...

‘ನಾಳೆಯಿಂದ ಯಾರು ಕೂಡ ವಾಹನಗಳಲ್ಲಿ ಓಡಾಡುವಂತಿಲ್ಲ’

ಶಿವಮೊಗ್ಗ : ರಾಜ್ಯ ಸರ್ಕಾರದ ಲಾಕ್ ಡೌನ್ ಮಾರ್ಗಸೂಚಿ ಹೊರಡಿಸಿದ ಬೆನ್ನಲ್ಲೇ, ಶಿವಮೊಗ್ಗದಲ್ಲಿಯೂ ಕಟ್ಟುನಿಟ್ಟಿನ ಲಾಕ್ ಡೌನ್ ಗೆ ನಿರ್ಧಾರ ಮಾಡಲಾಗಿದೆ.  ಇಂದು ಶಿವಮೊಗ್ಗದಲ್ಲಿ ಜಿಲ್ಲೆಯ ವಿವಿಧ ಇಲಾಖಾಧಿಕಾರಿಗಳ ಮತ್ತು ವರ್ತಕರೊಂದಿಗೆ ಜಿಲ್ಲಾಡಳಿತದ ಸಭೆಯಲ್ಲಿ...

Recent Comments