Home ದೇಶ-ವಿದೇಶ ದೀದಿ ನಾಡಲ್ಲಿ ವೋಟು ನಿಮ್ಮದು, ಹಾಕೋದು ಮತ್ತೊಬ್ಬರು - ಪಶ್ಚಿಮ ಬಂಗಾಳ ಸಿಎಂಗೆ ಬಹಿರಂಗ ಪತ್ರ

ದೀದಿ ನಾಡಲ್ಲಿ ವೋಟು ನಿಮ್ಮದು, ಹಾಕೋದು ಮತ್ತೊಬ್ಬರು – ಪಶ್ಚಿಮ ಬಂಗಾಳ ಸಿಎಂಗೆ ಬಹಿರಂಗ ಪತ್ರ

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ 6 ಹಂತಗಳ ಮತದಾನದಲ್ಲಿ ಹಿಂಸಾಚಾರ ನಡೆದಿರೋದು ಈಗಾಗ್ಲೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಟಿಎಂಸಿ ಕಾರ್ಯಕರ್ತರು ಅಕ್ರಮವಾಗಿ ಮತದಾನ ಮಾಡಿಸಿದ್ದಾರೆ ಅನ್ನೋ ಆರೋಪಗಳು ಕೂಡ ದೊಡ್ಡ ಮಟ್ಟದಲ್ಲಿ ಕೇಳಿಬಂದಿವೆ. ಅದಕ್ಕೆ ಪುಷ್ಠಿ ನೀಡುವಂತೆ ಮಹಿಳೆಯೊಬ್ಬರ ಫೇಸ್​ಬುಕ್​ ಪೋಸ್ಟ್​ ವೈರಲ್​ ಆಗಿದೆ. ಮತ ಕೇಂದ್ರಗಳಲ್ಲಿ ಬಲವಂತವಾಗಿ ಟಿಎಂಸಿಗೆ ಮತ ಹಾಕಿಸುವ ಕಾರ್ಯಕರ್ತರ ಬಗ್ಗೆ ಅನಿತಾ ಶರ್ಮಾ ಎಂಬವರು ಹಾಕಿರುವ ಪೋಸ್ಟ್​ ವೈರಲ್​ ಆಗ್ತಿದೆ.

ಹಲ್ದಿಯಾ ಎಂಬಲ್ಲಿ ಮತಹಾಕಲು ತೆರಳಿದ್ದ ಅನಿತಾ ಶರ್ಮಾ ಕುಟುಂಬಕ್ಕೆ ಟಿಎಂಸಿ ಪಕ್ಷದ ಬಟನ್​ ಒತ್ತಲು, ಇವಿಎಂ ಪಕ್ಕದಲ್ಲೇ ನಿಂತಿದ್ದ ಕಾರ್ಯಕರ್ತ ಒತ್ತಾಯಿಸಿದ್ದನಂತೆ. ಈ ಬಗ್ಗೆ ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಅನಿತಾ ಬೇಸರ ವ್ಯಕ್ತಪಡಿಸಿದ್ದಾರೆ. ಅನಿತಾ ಶರ್ಮಾ ಹಾಕಿರುವ ಪೋಸ್ಟ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಅದರ ಕನ್ನಡ ಸಾರಾಂಶ ಇಲ್ಲಿದೆ ನೋಡಿ. 

“ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇಂದು ಬೆಳಗ್ಗೆ 11ಗಂಟೆಗೆ ನಾನು ಕುಟುಂಬದ ಜೊತೆ ಹಲ್ದಿಯಾದಲ್ಲಿ ನನ್ನ ಮನೆಯ ಸಮೀಪವೇ ಇರುವ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಹೋದೆ. ಬೂತ್​ ಒಳಗೆ ತೆರಳಿ ಇವಿಎಂ ಹತ್ತಿರ ಮತ ಚಲಾಯಿಸಲು ಹೋದಾಗ ಮಷಿನ್ ಹತ್ತಿರ ನಿಂತಿದ್ದ ಯುವಕ ನನ್ನ ಸಹೋದರಿಗೆ ಟಿಎಂಸಿ ಅಭ್ಯರ್ಥಿಗೆ ಮತ ಹಾಕುವಂತೆ ಹೇಳಿದ್ದಾನೆ. ಮತದಾನ ನಮ್ಮ ಹಕ್ಕು ಮತ್ತು ಅದು ಖಾಸಗಿಯಾಗಿರಬೇಕು. ಸರಿದು ಹೋಗಿ ಅಂತ ವಿನಯ ಪೂರ್ವಕವಾಗಿಯೇ ಹೇಳಿದೆವು. ಆಗ ಆ ಯುವಕ ನನ್ನ ಸಹೋದರಿಯನ್ನು ತಳ್ಳಲು ಆರಂಭಿಸಿದ. ಆಗ ನಾವು ಜೋರಾಗಿಯೇ ಮಾತನಾಡಿದೆವು. ದೈಹಿಕವಾಗಿ ತೊಂದರೆ ಕೊಟ್ಟಿದ್ದಕ್ಕಾಗಿ ಜೋರು ಮಾಡಿದೆವು. ನಾನು ಒಬ್ಬ ಯುವತಿ, ನೀನು ಒಬ್ಬ ಯುವಕ. ಬಲವಂತವಾಗಿ ನೀನು ನನ್ನನ್ನು ಮುಟ್ಟಿದರೆ ಮುಂದಾಗುವ ಪರಿಣಾಮದ ಬಗ್ಗೆ ಆಲೋಚಿಸು ಅಂತ ನನ್ನ ಅಕ್ಕ ಆತನಿಗೆ ಬೆದರಿಸಿದಳು. ಹೀಗಾಗಿ ನನ್ನಕ್ಕ ಅವಳ ಆಯ್ಕೆಯ ಅಭ್ಯರ್ಥಿಗೆ ಮತ ಚಲಾಯಿಸಲು ಸಾಧ್ಯವಾಯಿತು. ಆಗ ಆ ಯುವಕರು ಹೊರಗಿದ್ದ ಒಂದಷ್ಟು ಜನ ಮಹಿಳೆಯರನ್ನು ಒಳಗೆ ಕರೆದುಕೊಂಡು ಬಂದರು. ಆ ಮಹಿಳೆಯರೊಂದಿಗೆ ನಾನು ಮಾತನಾಡಿದಾಗ ಅವರೂ ನನ್ನನ್ನು ಹೆದರಿಸಿದರು. ನಾನು ನಿಮ್ಮನ್ನು ಮುಟ್ಟಬಹುದು. ನೀನೇನೂ ಮಾಡಲು ಸಾಧ್ಯವಿಲ್ಲ. ಅಂತ ಹೆದರಿಸಿದ್ದಾರೆ. ಇದು ಸ್ವಲ್ಪ ಹೊತ್ತಿನ ತನಕ ಹೀಗೆಯೇ ಮುಂದುವರಿದು ಆ ಯುವಕ ನಮ್ಮ ಮತಗಳನ್ನು ಚಲಾಯಿಸಿದ. ಅಲ್ಲಿದ್ದ ಚುನಾವಣಾಧಿಕಾರಿಗಳೂ, ಪೊಲೀಸ್​ ಸಿಬ್ಬಂದಿಯೂ ಮೌನವಾಗಿದ್ದರು. ಬೂತ್​ ಒಳಗಡೆ ಸುಮಾರು 30 ಜನರಿದ್ದರು. ಮತ ಚಲಾಯಿಸುವ ಹಕ್ಕನ್ನು ಕೇಳಿದ್ದಕ್ಕಾಗಿ ಅವರೆಲ್ಲ ಸೇರಿ ನಮ್ಮನ್ನು ನಿಂದಿಸಿ, ಬೂತ್​ನಿಂದ ಹೊರಹಾಕಿದರು. ಮತದಾನ ನಿಮ್ಮ ಹಕ್ಕು ಅಂತ ಎಲ್ಲಿ ಬರೆದಿಡಲಾಗಿದೆ ಅಂತ ಪ್ರಶ್ನಿಸಿದ ಮಹಿಳೆ ತಾವು ಒಬ್ಬ ವಕೀಲೆ ಎಂಬುದನ್ನೂ ಹೇಳಿಕೊಂಡಿದ್ದಾರೆ. ನನ್ನ ತಂದೆಯ ವಯಸ್ಸಿನಲ್ಲಿರಬಹುದಾದ ಆ ಜನರು ಹಿಂಸಿಸಿ, ನಮ್ಮ ಮನೆಯನ್ನು ನಾಶ ಮಾಡಿ, ನಮ್ಮೆಲ್ಲರನ್ನು ಕೊಲ್ಲೋದಾಗಿ ಬೆದರಿಸಿದ್ರು. ನಮ್ಮ ತಾಯಿಯ ವಯಸ್ಸಿನ ಮಹಿಳೆಯರು ನಮ್ಮನ್ನು ಹೊರಗೆ ತಳ್ಳಿದ್ರು. ಇಬ್ಬರು ಯುವಕರು ಹಿಂಬಾಲಿಸಿಕೊಂಡು ಬಂದರು.

ಇದು ಪಶ್ಚಿಮ ಬಂಗಾಳದ ಸ್ಥಿತಿಯಾಗಿದ್ದು, ನಾವು ಪ್ರಜಾಪ್ರಭುತ್ವದಿಂದ ಬಹಳ ದೂರವಿದ್ದೇವೆ ಅಂತ ಹೇಳೋದಕ್ಕೆ ವಿಷಾದಪಡುತ್ತೇನೆ. ಒಂದು ಮತಗಟ್ಟೆಯಲ್ಲಿ ಬೂತ್​ ಒಳಗಿಂದ ಮಹಿಳೆಯರು ಬೇರೆ ಮಹಿಳೆಯರಿಂದ ಹೊರ ಹಾಕಲ್ಪಟ್ಟರೆ, ಪುರುಷರಿಂದ ಹಿಂಸಿಸಲ್ಪಟ್ಟರೆ ನಾನು ಅಂತಹ ರಾಜ್ಯದಲ್ಲಿರುವುದಕ್ಕೆ ನಾಚಿಕೆಪಡುತ್ತೇನೆ. ಇದು ನಮ್ಮ ಮುಖ್ಯಮಂತ್ರಿಯವರಿಗೆ  (ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ) ಬಹಿರಂಗ ಪತ್ರ. ನೀವು ಇಂತಹ ಮಾರ್ಗಗಗಳ ಮೂಲಕ ಗೆದ್ದರೆ, ನೀವು ಒಬ್ಬ ನಾಯಕಿಯಾಗಿ ಸೋತಂತೆ”.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments