ಶಿವಣ್ಣನ ಸಿನಿಮಾದಲ್ಲಿ ಅನಿಲ್​ ಕುಂಬ್ಳೆ..!?

0
224

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಮತ್ತು ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಅನಿಲ್ ಕುಂಬ್ಳೆ ಆತ್ಮೀಯ ಗೆಳೆಯರು. ಬಲ ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಶಿವಣ್ಣ ಸದ್ಯ ಲಂಡನ್​ನಲ್ಲಿದ್ದಾರೆ.
ನಿನ್ನೆ (ಜುಲೈ.12) ಶಿವಣ್ಣನ ಬರ್ತ್​ಡೇ. ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರು ಲಂಡನ್​ನಲ್ಲೇ ತನ್ನ ಅಣ್ಣ ಶಿವಣ್ಣನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅಷ್ಟೇ ಅಲ್ಲದೆ ಅನಿಲ್​ ಕುಂಬ್ಳೆ ಕೂಡ ಶಿವಣ್ಣರನ್ನು ಭೇಟಿಯಾಗಿ ವಿಶ್ ಮಾಡಿದ್ದಾರೆ.
ಅನಿಲ್ ಕುಂಬ್ಳೆ ಭೇಟಿಯಾಗಿರುವ ಫೋಟೊವನ್ನು ಟ್ಟಿಟರ್​ನಲ್ಲಿ ಶೇರ್ ಮಾಡಿರುವ ಶಿವಣ್ಣ, ”ಕ್ರಿಕೆಟ್ ಅಂದ್ರೆ ನನಗೆ ಇಷ್ಟ, ಅದರಲ್ಲೂ ನಮ್ಮ ಕನ್ನಡದ ಕ್ರಿಕೆಟ್ ಆಟಗಾರರು ಅಂದ್ರೆ ನನಗೆ ಪ್ರೀತಿ ಜಾಸ್ತಿ. ನನ್ನ ಹುಟ್ಟುಹಬ್ಬಕ್ಕೆ surprise ಆಗಿ ಸಿಕ್ಕ ನನ್ನ favorite player ನನ್ನ ಒಳ್ಳೆಯ ಸ್ನೇಹಿತ @anilkumble1074 ನಿಮ್ಮ ಭೇಟಿ ಖುಷಿ ಕೊಡ್ತು”ಅಂತ ಬರೆದುಕೊಂಡಿದ್ದಾರೆ.
ಅದಲ್ಲದೆ ಶಿವಣ್ಣ ಮಾಡಿರುವ ಮತ್ತೊಂದು ಟ್ವೀಟ್, ಅನಿಲ್ ಕುಂಬ್ಳೆ ಸಿನಿಮಾದಲ್ಲೂ ನಟಿಸುವ ಸೂಚನೆ ನೀಡಿದೆ. ”ನಾವು ಸಿನಿಮಾದವ್ರು ಕ್ರಿಕೆಟ್ ಆಡ್ತಿರ್ತೀವಿ. ಅನಿಲ್​ ಕುಂಬ್ಳೆ ನನ್ನ ಮುಂದಿನ ಸಿನಿಮಾದಲ್ಲಿ ಅಟ್ಲೀಸ್ಟ್ ಅತಿಥಿ ಪಾತ್ರವನ್ನಾದರೂ ಮಾಡ್ತಾರೆ ಅನ್ನೋ ಆಶಯವಿದೆ”. ಅಂತ ಶಿವಣ್ಣ ಟ್ವೀಟ್ ಮಾಡಿದ್ದಾರೆ. ಆದ್ರಿಂದ ಮುಂದಿನ ದಿನಗಳಲ್ಲಿ ಅನಿಲ್ ಕುಂಬ್ಳೆ ಶಿವಣ್ಣನ ಸಿನಿಮಾಕ್ಕೆ ಬಣ್ಣ ಹಚ್ಚುವ ಸಾಧ್ಯತೆ ಇದೆ.

ಶಿವಣ್ಣನ ಹುಟ್ಟುಹಬ್ಬಕ್ಕೆ ಲಂಡನ್​​ನಲ್ಲಿ ಸರ್​​ಪ್ರೈಸ್​ ಆಗಿ ಸಿಕ್ಕ ಫೇವರೇಟ್​ ಕ್ರಿಕೆಟರ್..!

LEAVE A REPLY

Please enter your comment!
Please enter your name here