ಕೈ ಸೇರಿದ 30 ವರ್ಷದ ಹಿಂದಿನ ಪತ್ರ ಕಂಡು ಅನಿಲ್ ಕಪೂರ್ ಭಾವುಕರಾಗಿದ್ದೇಕೆ?

0
282

ಮುಂಬೈ : ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ 30 ವರ್ಷದ ಹಿಂದಿನ ಪತ್ರವೊಂದನ್ನು ಕಂಡು ಭಾವುಕರಾಗಿದ್ದಾರೆ. ಅದು ಅವರು ತನ್ನ ಅಭಿಮಾನಿಗೆ ಬರೆದಿದ್ದ ಪತ್ರ!
ಭಾನುವಾರ ನಾಸಿಕ್​ನ ಶಾಪ್​ವೊಂದರ ಓಪನಿಂಗಿಗೆ ಹೋಗಿದ್ದ ಅನಿಲ್ ಕಪೂರ್ ಅವರನ್ನು ನೋಡಲು ಸಾಕಷ್ಟು ಮಂದಿ ಅಭಿಮಾನಿಗಳು ಆಗಮಿಸಿದ್ರು. ಆಟೋಗ್ರಾಫ್ ಪಡೆಯಲು ಮುಗಿಬಿದ್ದಿದ್ರು. ಈ ಮಧ್ಯೆ ಅಭಿಮಾನಿಯೊಬ್ಬ ಸುಮಾರು 30 ವರ್ಷಗಳ ಹಿಂದಿನ ಅನಿಲ್ ಕುಮಾರ್ ಫೋಟೋ ಇರೋ ಪತ್ರವನ್ನು ನೀಡಿ ಆಟೋಗ್ರಾಫ್ ಕೊಡುವಂತೆ ಕೇಳಿಕೊಂಡ್ರು. ಆ ಪತ್ರ ಕಂಡು ಅನಿಲ್ ಭಾವುಕರಾಗಿ ಇದು ನಾನೇ 30 ವರ್ಷಗಳ ಹಿಂದೆ ಅಭಿಮಾನಿಗೆ ಬರೆದ ಪತ್ರ ಎಂದು ನೆನಪಿಸಿಕೊಂಡ್ರು. ಅಲ್ಲದೆ ಈ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್ ಮಾಡಿ, ಇಡೀ ವಿಶ್ವವೇ ಸಂಪೂರ್ಣ ಡಿಜಿಟಲೀಕರಣದ ಸಂವಹದನಲ್ಲಿ ಮುಳುಗಿದೆ. 30 ವರ್ಷದ ಹಿಂದೆ ಅಭಿಮಾನಿಯೊಬ್ರ ಪತ್ರಕ್ಕೆ ನಾನೇ ಉತ್ತರ ಬರೆದಿದ್ದೆ. ಈಗ ಅದನ್ನು ತಂದಿದ್ರು ಅಂತ ಬರೆದು, ಅಭಿಮಾನಿಯ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ.

LEAVE A REPLY

Please enter your comment!
Please enter your name here