Sunday, May 29, 2022
Powertv Logo
Homeರಾಜ್ಯಆನೇಕಲ್ ಸುತ್ತ ಅಬ್ಬರಿಸುತ್ತಿರುವ ಕರೋನಾ ಸೋಂಕು

ಆನೇಕಲ್ ಸುತ್ತ ಅಬ್ಬರಿಸುತ್ತಿರುವ ಕರೋನಾ ಸೋಂಕು

ಆನೆಕಲ್​ : ಇತ್ತೀಚೆಗೆ ಕರೋನಾ ಪರೀಕ್ಷೆಯಲ್ಲಿ ತಪಾಸಣೆ ಕೈಗೊಂಡಿದ್ದ ಆನೇಕಲ್ ತಾಲ್ಲೂಕಿನ ಹೆನ್ನಾಗರದ ಮಹಿಳೆಗೆ ಪಾಸಿಟಿವ್ ದೃಢವಾಗಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಡಲಾಗಿತ್ತು. ಇದೀಗ ಈಕೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಮಂದಿಯಲ್ಲಿ ಸ್ವಂತ ಕುಟುಂಬದವರೇ ಆದ ಆರು ಮಂದಿಯನ್ನು ಅವರ ವಿಶಾಲ ಮನೆಯ ಪ್ರತ್ಯೇಕ ಕೋಣೆಗಳಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಅವರಲ್ಲಿ ನಾಲ್ವರಿಗೆ ಬಂದ ಪಾಸಿಟಿವ್ ಫಲಿತಾಂಶದಲ್ಲಿ ಕೊರೋಮ‌ ಪಾಸಿಟಿವ್ ದೃಢ ಪಟ್ಟಿದೆ ಉಳಿದ ಇಬ್ಬರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು ಅವರ ಸ್ಕ್ವಾಬ್ ಪರೀಕ್ಷೆಗೆ ಕಳುಹಿಸಲಾಗಿದೆ. .. ಅಷ್ಟಲ್ಲದೆ ಉಳಿದ ಆರು ಮಂದಿ ಮಂದಿ ಆಸ್ಪತ್ರೆಗೆ ಸಂಬಂದಿಸಿದವರಾಗಿದ್ದು ಅವರನ್ನೂ ಪರೀಕ್ಷೆಗೆ ಒಳಪಡಿಸಿದ್ದು ಫಲಿತಾಂಶ ಹೊರಬೀಳಬೇಕಿದೆ.
ಹೆನ್ನಾಗರ ಕುಟುಂಬದವರೇ ಆದ 12- 13 _ವರ್ಷದ ಹುಡುಗರಿಗೆ 65 ವರ್ಷದ ಸೋಂಕಿತೆಯ ಮಾವ ಮತ್ತು 38ವರ್ಷದ ಆಕೆಯ ಗಂಡನಿಗೆ ಸೋಂಕು ಖಾತರಿಯಾಗಿದ್ದು ವಿಕ್ಟೋರಿಯಾಗೆ ಕಳುಹಿಸಿಕೊಡಲಾಗಿದೆ. ಜೊತೆಗೆ ಹೆನ್ನಾಗರ ಸಂಪೂರ್ಣ ಗ್ರಾಮವನ್ನು ಸೀಲ್‌ ಡೌನ್ ಮಾಡಲಾಗಿದೆ‌…‌

ಜೊತೆಗೆ ಪಶ್ಚಿಮ ಬಂಗಾಳದಿಂದ ಬಂದು ಚಂದಾಪುರ ಭಾಗದಲ್ಲಿ ಕ್ವಾರಂಟೈನ್ ಆಗಿದ್ದ ಒಬ್ಬ ವ್ಯಕ್ತಿಗೆ ಪಾಸಿಟಿವ್ ದೃಢಪಟ್ಟಿದ್ದು ಇದೀಗ ವಿಕ್ಟೋರಿಯಾಗೆ ಕಳುಹಿಸಿಕೊಡಲಾಗಿದೆ.

18 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments