ವಿಶಾಖಪಟ್ಟಣ : ಆಂಧ್ರದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅಧಿಕಾರದ ಚುಕ್ಕಾಣಿ ಹಿಡಿದಲ್ಲಿಂದಲೂ ಜನಪರ ಕೆಲಸಗಳಿಂದ ದೇಶದ ಗಮನ ಸೆಳೆದಿದ್ದಾರೆ . ತಮ್ಮ ಜನಸೇವೆಯಿಂದಲೇ ವಿರೋಧ ಪಕ್ಷದ ನಿದ್ದೆಗೆಡಿಸಿರುವ ಜಗನ್ ಮೋಹನ್ ರೆಡ್ಡಿ ಈಗ ಮತ್ತೆ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ.
ಸದ್ಯ ಮೂರು ರಾಜಧಾನಿಗಳನ್ನು ಸೃಷ್ಡಿಸುವ ನಿರ್ಧಾರದ ಕುರಿತು ಎಲ್ಲೆಡೆ ಪರ-ವಿರೋಧ ಚರ್ಚೆ ಶುರುವಾಗಿರುವ ಬೆನ್ನಲ್ಲೇ, ಆಡಳಿತ ವಿಕೇಂದ್ರಿಕರಣಗೊಳಿಸಲು 13 ಜಿಲ್ಲೆಗಳ ರಾಜ್ಯವನ್ನು 25 ಜಿಲ್ಲೆಗಳಾಗಿ ಮಾಡಲು ಜಗನ್ ರೆಡ್ಡಿ ಸರ್ಕಾರ ತೀರ್ಮಾನಿಸಿದೆ.
ಆಂಧ್ರದ ಅಭಿವೃದ್ದಿ ಹಿತದೃಷ್ಟಿಯಿಂದ 13 ಜಿಲ್ಲೆಗಳನ್ನು 25 ಜಿಲ್ಲೆಗಳಾಗಿ ಮಾಡಿ, ಎಲ್ಲಾ ಜಿಲ್ಲೆಗಳನ್ನು ಅಭಿವೃದ್ದಿ ಮಾಡಲಾಗುವುದು ಎಂದು ಜಗನ್ ತಿಳಿಸಿದ್ದಾರೆಂದು ವೈಎಸ್ಆರ್ ಕಾಂಗ್ರೆಸ್ ಸಂಸದ ವಿಜಯಸಾಯಿ ರೆಡ್ಡಿ ಹೇಳಿದ್ದಾರೆ.