Home ರಾಜ್ಯ ಕಿರಾತಕ ಮಾವನ ಐನಾತಿ ಕೆಲಸ - ಸೊಸೆಯ ಮೇಲೆ ಅತ್ಯಾಚಾರ ನಡೆಸಿದ ಮಾವ ಅಂದರ್

ಕಿರಾತಕ ಮಾವನ ಐನಾತಿ ಕೆಲಸ – ಸೊಸೆಯ ಮೇಲೆ ಅತ್ಯಾಚಾರ ನಡೆಸಿದ ಮಾವ ಅಂದರ್

ಶಿವಮೊಗ್ಗ: ಪತಿ ಜಮೀನಿಗೆ ಕೆಲಸಕ್ಕೆ ತೆರಳಿದ್ದ ವೇಳೆ ಪತಿಯ ತಂದೆ, ಮಾವನ ಸೊಸೆಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಕುಂಸಿ ಬಳಿಯ ಚೋರಡಿಯಲ್ಲಿಯೇ ಈ ಘಟನೆ ನೆಡೆದಿದ್ದು, ಆರೋಪಿ ಮಾವ ರಂಗಪ್ಪ (65) ಬಂಧಿಸಲಾಗಿದೆ. ತನ್ನ ಮಗ ಜಮೀನಿಗೆ ಕೆಲಸಕ್ಕೆಂದು ತೆರಳಿದ ಬಳಿಕ ಸಮಯ ಸಾಧಿಸಿದ ಕಿರಾತಕ ಮಾವ ಇಂತಹ ಹೀನ ಕೃತ್ಯ ನಡೆಸಿದ್ದಾನೆ. ಈ ಬಗ್ಗೆ ಆರೋಪ ಮಾಡಿರುವ ಸೊಸೆ, ಕಿರುಚಿಕೊಂಡಾಗ ಬಳಿಕ ಅಕ್ಕಪಕ್ಕದ ಮನೆಯವರು ಬಂದ ವೇಳೆ ಮಾವ ಸಿಕ್ಕಿ ಹಾಕಿಕೊಂಡಿದ್ದಾನೆ ಎನ್ನಾಲಾಗಿದೆ.

ಇನ್ನು ವೈದ್ಯಕೀಯ ವರದಿ ಬಳಿಕ ಈ ಆರೋಪ ದೃಡವಾಗಿದ್ದು, ಈ ಹಿನ್ನಲೆಯಲ್ಲಿ ಆರೋಪಿ ಮಾವನನ್ನ ಇದೀಗ ಬಂಧಿಸಲಾಗಿದೆ. ಅದರಂತೆ, ಕಳೆದ 8 ತಿಂಗಳ ಹಿಂದೆಯಷ್ಟೇ, ಆರೋಪಿ ರಂಗಪ್ಪನ ಮಗ ಈಶ್ವರ್ ನ ಭದ್ರಾವತಿಯ ಯುವತಿಯೊಂದಿಗೆ ಮದುವೆಯಾಗಿತ್ತು.

ಇನ್ನೂ ಈ ಹೀನ ಘಟನೆ ನಡೆದಿರುವುದು ಕುಟುಂಬಸ್ಥರು ಮತ್ತು ಗ್ರಾಮಸ್ಥರು, ತಲೆತಗ್ಗಿಸುವಂತೆ ಮಾಡಿದ್ದು, ಘಟನೆಯ ಬಳಿಕ ಸೊಸೆಯನ್ನ ಆಕೆಯ ಒಪ್ಪಿಗೆ ಮೇರೆಗೆ ಅವರ ಪೋಷಕರೊಂದಿಗೆ ಕಳುಹಿಸಿಕೊಡಲಾಗಿದೆ.

ಇತ್ತೀಚಿಗಷ್ಟೇ ಮೆಗ್ಗಾನ್ ಆಸ್ಪತ್ರೆಯಲ್ಲಿ ತಾಯಿಯ ಚಿಕಿತ್ಸೆಗಾಗಿ ಬಂದಿದ್ದ ಅಪ್ರಾಪ್ತೆ ಬಾಲಕಿಯ ಮೇಲೆ ನಡೆದ ಅತ್ಯಾಚಾರದ ಘಟನೆ ಮಾಸುವ ಮುನ್ನವೇ, ಕುಟುಂಬಸ್ಥರಿಂದ ನಡೆದಿರುವ ಘಟನೆ ಎಲ್ಲರನ್ನು ತಲೆತಗ್ಗಿಸುವಂತೆ ಮಾಡಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಪರೀಕ್ಷೆ ಬೇಡ ಅಂತ ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ

ಬೆಂಗಳೂರು : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹಿಂದಿನ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಭೌತಿಕ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ, ಇದನ್ನು ಖಂಡಿಸಿ ನಗರದ ಮೌರ್ಯ ಸರ್ಕಲ್​ನಲ್ಲಿ  ಎನ್​​​ಎಸ್​​ಯುಐ ಸಂಘಟನೆ ಪ್ರತಿಭಟನೆ ನಡೆಸಿತು. ರಾಜ್ಯ...

ಸಚಿವ ಶಾಸಕರುಗಳ ಗುಪ್ತ ಗುಪ್ತ ಸಭೆ

ಚಿಕ್ಕಮಗಳೂರು : ಸಂಪುಟ ವಿಸ್ತರಣೆ ಖಾತೆ ಹಂಚಿಕೆ ಅಸಮಾಧಾನದ ಬೇಗುದಿ ಮಧ್ಯೆ ಬಿಜೆಪಿಯೊಳಗೆ ಹೊಸ ಬಂಡಾಯ ಬೂದಿ ಮುಚ್ಚಿದಂತೆ ಇದೆ ಪಕ್ಷದೊಳಗೆ ಒಂದೆರಡಲ್ಲ, ಹಲವು ಬಣಗಳು ರೂಪುಗೊಂಡಂತೆ ತೋರುತ್ತಿವೆ. ಸಚಿವ ಸ್ಥಾನ ಸಿಗದವರದ್ದು...

ಮಗಳಿಂದ ತಂದೆಯ ಅಂತ್ಯ ಸಂಸ್ಕಾರ

ಕಾರವಾರ : ಹೃದಯಾಘಾತದಿಂದ ಮೃತಪಟ್ಟಿದ್ದ ತಂದೆಯ ಅಂತ್ಯ ಸಂಸ್ಕಾರವನ್ನು ಮಗಳೇ ನೆರವೇರಿಸಿದ ಘಟನೆ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ನಿಪೇಟೆಯಲ್ಲಿ ನಡೆದಿದೆ.ಕುರ್ನಿಪೇಟೆಯ ಚಂದ್ರಕಾಂತ ಬುದೊ ಪಾಗಿ (56) ಹೃದಯಾಘಾತದಿಂದ ಮೃತಪಟ್ಟಿದ್ದರು. 9...

ಉದ್ಧವ್ ಠಾಕ್ರೆ ಹೇಳಿಕೆಗೆ ಸಿಲಿಕಾನ್ ಸಿಟಿ ಮರಾಠಿಗರಿಂದ ವಿರೋಧ

ಬೆಂಗಳೂರು : ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ದಿನ ದಿನಕ್ಕೆ ಪ್ರತಿಭಟನೆಗಳು ಜಾಸ್ತಿಯಾಗುತ್ತಿವೆ. ಇವತ್ತು ನಗರದ ಮೌರ್ಯ ಸರ್ಕಲ್​ನಲ್ಲಿ ಸಿಲಿಕಾನ್ ಸಿಟಿಯ ಮರಾಠಿಗರೆಲ್ಲಾ ಒಂದೆಡೆ ಸೇರಿ ತೀವ್ರ ವಿರೋಧ ವ್ಯಕ್ತ ಪಡಿಸಿದ್ರು....

Recent Comments