Home ಸಿನಿ ಪವರ್ ಅಂಡರ್​ ವಾಟರ್​ನಲ್ಲೂ ಸೌಂಡು ಮಾಡಿದ ಶಿವಣ್ಣನ ಮಚ್ಚು..!

ಅಂಡರ್​ ವಾಟರ್​ನಲ್ಲೂ ಸೌಂಡು ಮಾಡಿದ ಶಿವಣ್ಣನ ಮಚ್ಚು..!

ಸೆಂಚುರಿ ಸ್ಟಾರ್ ಶಿವಣ್ಣ ನ ಕೈಯಲ್ಲಿ ಮಚ್ಚು ನೋಡೋದೇ ಚಂದ. ಶಿವಣ್ಣ ಮಚ್ಚು ಹಿಡಿದು ನೆಡ್ಕೊಂಡ್ ಬಂದ್ರೆ ಥಿಯೇಟರ್ ನಲ್ಲಿ ಕುಳಿತಿರೋ ಜನಕ್ಕೆ ಏನೋ ಒಂಥರಾ ಥ್ರಿಲ್ . ಈಗ ಯಾಕಪ್ಪ ಮಚ್ಚಿನ ವಿಷಯ ಅಂದ್ರೆ ಇಷ್ಟು ದಿನ ಶಿವಣ್ಣ ಹಿಡಿದ ಮಚ್ಚಿನ ಸ್ಟೈಲ್​​ಗಿಂತ ಡಿಫ್ಫ್ರೆಂಟ್ ಆಗಿ ಅಂಡರ್ ವಾಟರ್ ನಲ್ಲಿ ಶಿವಣ್ಣನ ಮಚ್ಚು ಸೌಂಡ್ ಮಾಡ್ತಾ ಇದೆ.
ಅದೇನೋ ಗೊತ್ತಿಲ್ಲ ಶಿವಣ್ಣನಿಗೂ ಹಾಗು ಮಚ್ಚಿಗೂ ಒಂಥರಾ ಅವಿನಾಭಾವ ಸಂಬಂಧ. ಬಹುತೇಕ ಎಲ್ಲಾ ನಟರು ಮಚ್ಚು ಹಿಡಿದು ಫೈಟ್ ಮಾಡ್ತಾರೆ . ಆದ್ರೆ ಶಿವಣ್ಣ ಮಚ್ಚು ಹಿಡಿದ್ರೆ ಅದ್ರ ಸೌಂಡ್ ಸ್ವಲ್ಪ ಜಾಸ್ತಿನೇ ಇರುತ್ತೆ . ಅದಕ್ಕೆ ‘ಓಂ’ ಚಿತ್ರದಲ್ಲಿ ಶಿವಣ್ಣ ಮಚ್ಚು ಹಿಡಿದ ಸ್ಟೈಲ್ ಯಾವತ್ತೋ ಸಾಕ್ಷಿಯಾಗಿದೆ.
ಯಾವಾಗ ‘ಓಂ’ ನಲ್ಲಿ ಶಿವಣ್ಣ ಮಚ್ಚು ಹಿಡಿದು ಅಬ್ಬರಿಸಿದ್ರೋ ಅಲ್ಲಿಂದ ಸ್ಟಾರ್ಟ್ ಆಯಿತು ಶಿವಣ್ಣನಿಗೂ ಹಾಗೂ ಮಚ್ಚಿಗೆ ದೋಸ್ತಿ . ಇನ್ನು ‘ಜೋಗಿ’ ಸಿನಿಮಾದಲ್ಲಿ ಈ ಕೈ ಗೆ ಮಚ್ಚು ಸಿಕ್ಕಿದ ಮೇಲೆ ಬದುಕು ಕಣೋ ಅನ್ನೋ ಹಾಡು ಎಲ್ಲರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದು ಸಧ್ಯ ಇತಿಹಾಸ . ಈಗ ಅಂಡರ್ ವಾಟರ್ ನಲ್ಲಿ ಶಿವಣ್ಣನ ಮಚ್ಚು ಸೌಂಡ್ ಮಾಡ್ತಿದೆ
ಹೌದು ಸ್ಯಾಂಡಲ್​ವುಡ್​ನಲ್ಲಿ ಯಾವ ಸ್ಟಾರ್ ಸೈಲೆಂಟಾಗಿದ್ರೂ, ‘ಸೆಂಚುರಿ ಸ್ಟಾರ್’ ಶಿವಣ್ಣ ಮಾತ್ರ ಯಾವಾಗಲೂ ಬ್ಯುಸಿಯಾಗಿರ್ತಾರೆ. ವರ್ಷದಲ್ಲಿ ಕಡಿಮೆ ಅಂದರೂ ಒಂದೆರಡು ಸಿನಿಮಾ ಇದ್ದೇ ಇರುತ್ತೆ. ಆದ್ರೆ 2019 ಆಗಲ್ಲ. ಒಂದಲ್ಲ ಎರಡಲ್ಲ ಆರು ಸಿನಿಮಾಗಳಿವೆ..!
ಕವಚ ಬಿಡುಗಡೆಯಾಗಿ ವಿಮರ್ಶಕರ ಮೆಚ್ಚುಗೆ ಗಿಟ್ಟಿಸಿತ್ತು. ಮುಂದೆ ರುಸ್ತುಂ, ಎಸ್​ಆರ್​ಕೆ, ದ್ರೋಣ, ಆನಂದ್​, ಮೈ ನೇಮ್ ಇಸ್​ ಅಂಜಿ.. ಸಿನಿಮಾಗಳು ಪಟ್ಟಿಯಲ್ಲಿವೆ. ಅದರಲ್ಲಿ ಶಿವಣ್ಣನ ಅಂಡರ್​ವಾಟರ್​ ಫೈಟಿಂಗ್​ ದೃಶ್ಯವೊಂದು ಸುದ್ದಿಯಾಗಿತ್ತು. ಇದು ‘ರುಸ್ತುಂ’ ಆ್ಯಕ್ಷನ್​ ಸೀಕ್ವೆನ್ಸ್ ಎನ್ನಲಾಗಿತ್ತು. ಅಸಲಿಗೆ ಇದು ‘ಆನಂದ್​’ ಸಿನಿಮಾದ ಮೆಗಾ ಫೈಟ್​.
ಶಿವಲಿಂಗ ಸಿನಿಮಾದ ಭರ್ಜರಿ ಸಕ್ಸಸ್​ ನಂತರ ಶಿವಣ್ಣ- ಪಿ.ವಾಸು ಮತ್ತೊಮ್ಮೆ ಒಂದಾಗಿದ್ದಾರೆ. ಆನಂದ್​ ಒಂದು ಸೈಕಾಲಜಿಕಲ್​ ಥ್ರಿಲ್ಲರ್ ಸಿನಿಮಾ. ಶಿವಣ್ಣ ಫಸ್ಟ್​ ಟೈಂ ನಾಯಕನಾಗಿ ನಟಿಸಿದ್ದ ಟೈಟಲ್​ ಕೂಡ ಈ ‘ಆನಂದ್​’ ಆದ್ದರಿಂದ ‘ಆನಂದ್’ ದೊಡ್ಡ ನಿರೀಕ್ಷೆ ಹುಟ್ಟಿಸಿದೆ.
ಶಿವಣ್ಣ- ಪಿ.ವಾಸು ಕಾಂಬೊ ಮತ್ತೊಮ್ಮೆ ತಮ್ಮ ಎನರ್ಜಿ ನಿರೂಪಿಸೋಕೆ ಬಂದಿದೆ. ಅಂದ್ಹಾಗೆ ಆನಂದ್​ ಸಿನಿಮಾದ ಫೋಟೊವೊಂದು ಹರಿದಾಡುತ್ತಿದೆ. ಅಂಟರ್​ವಾಟರ್​ನಲ್ಲಿ ಶಿವಣ್ಣನ ಮೆಗಾ ಫೈಟ್ ಸೀಕ್ವೆನ್ಸ್ ಇದೆ. ಶಿವಣ್ಣನ ಸುತ್ತಮುತ್ತ ಲಾಂಗ್​ ಹಿಡಿದಿರೋ ರೌಡಿಗಳಿದ್ದು, ಸೈಕಾಲಜಿಕಲ್​ ಥ್ರಿಲ್ಲರ್ ಜೊತೆಗೆ ರೌಡಿಂಸ್ ಇರುವ ಗುಟ್ಟು ಬಿಟ್ಟುಕೊಟ್ಟಿದೆ.
ಇಷ್ಟು ದಿನ ಭೂಮಿಯ ಮೇಲೆ ಮಚ್ಚು ಹಿಡಿದು ಅಬ್ಬರಿಸಿದ್ದ ಶಿವಣ್ಣ ಈಗ ನೀರಿನಲ್ಲಿಯೂ ತಮ್ಮ ಮಚ್ಚಿನ ಕರಾಮತ್ತು ತೋರಿಸಿದ್ದಾರೆ . ಸಧ್ಯ ಈ ಫೈಟ್ ನ ಫೋಟೋಗಳು ರಿವೀಲ್ ಆಗಿದ್ದರಿಂದ ಚಿತ್ರವನ್ನ ತೆರೆಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ದಾರೆ

-ಮನೋಜ್ ನರಗುಂದಕರ್

LEAVE A REPLY

Please enter your comment!
Please enter your name here

- Advertisment -

Most Popular

‘ನನ್ನಿಂದ ಮನೆಯವರೆಗೂ ಸೋಂಕು ತಗುಲಿದೆ ಎಂದು ತಹಶೀಲ್ದಾರ್ ಸೂಸೈಡ್’

ಚಿಕ್ಕಮಗಳೂರು: ನನ್ನಿಂದಲೇ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಕೊರೋನ ಬಂತು. ನನಗೆ ವಯಸ್ಸಾಗಿದ್ದು, ಬದುಕುವ ಭರವಸೆ ಕಡಿಮೆ ಇದೆ. ಆದರೆ, ನನ್ನ ಮಕ್ಕಳು, ಮೊಮ್ಮಕ್ಕಳಿಗೆ ನನ್ನ ಕಣ್ಣೆದುರೇ ಏನಾದರೂ ಆದರೆ ಅದನ್ನ ನನ್ನಿಂದ ಸಹಿಸಿಕೊಳ್ಳಲು...

ಮನೆ, ಮನೆಗೆ ಹಾಲು ವಿತರಣೆಗೆ ಪೊಲೀಸರ ಅಡ್ಡಿ..!  

ಶಿವಮೊಗ್ಗ: ನಗರ ಪ್ರದೇಶದ ಮನೆಮನೆಗಳಿಗೆ ಹಾಲು ಮಾರಾಟ ಮಾಡುವ ರೈತರಿಗೂ ಬಿಡದೇ ಪೊಲೀಸರು, ದರ್ಪ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.  ಹಾಲು, ತರಕಾರಿ ಮನೆಮನೆಗೆ ತೆರಳಿ ಮಾರಾಟ ಮಾಡಬಹುದು ಎಂದು ಜಿಲ್ಲಾಡಳಿತ ಸೂಚನೆ...

‘ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ’

ಕಲಬುರಗಿ: ಹಗಲಿರುಳು ಎನ್ನದೇ ಕೊರೊನಾ ರೋಗಿಗಳನ್ನ ಬದುಕಿಸೊದಕ್ಕೆ ದುಡಿಯುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿರುವಂತಹ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಗುಂಡೇಪಲ್ಲಿ ಗ್ರಾಮದಲ್ಲಿ ನಡೆದಿದೆ.‌ ಕಳೆದ ನಾಲ್ಕು...

‘ನಾಳೆಯಿಂದ ಯಾರು ಕೂಡ ವಾಹನಗಳಲ್ಲಿ ಓಡಾಡುವಂತಿಲ್ಲ’

ಶಿವಮೊಗ್ಗ : ರಾಜ್ಯ ಸರ್ಕಾರದ ಲಾಕ್ ಡೌನ್ ಮಾರ್ಗಸೂಚಿ ಹೊರಡಿಸಿದ ಬೆನ್ನಲ್ಲೇ, ಶಿವಮೊಗ್ಗದಲ್ಲಿಯೂ ಕಟ್ಟುನಿಟ್ಟಿನ ಲಾಕ್ ಡೌನ್ ಗೆ ನಿರ್ಧಾರ ಮಾಡಲಾಗಿದೆ.  ಇಂದು ಶಿವಮೊಗ್ಗದಲ್ಲಿ ಜಿಲ್ಲೆಯ ವಿವಿಧ ಇಲಾಖಾಧಿಕಾರಿಗಳ ಮತ್ತು ವರ್ತಕರೊಂದಿಗೆ ಜಿಲ್ಲಾಡಳಿತದ ಸಭೆಯಲ್ಲಿ...

Recent Comments