ಭೋಪಾಲ್ : ರಾಜಾ ಭೋಜ್ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ವಿಮಾನವನ್ನು ಕಲ್ಲಿನಿಂದ ಒಡೆದು ಜಖಂಗೊಳಿಸಿದ್ದಾನೆ..!
ವಿಮಾನ ನಿಲ್ದಾಣದೊಳಗೆ ಏಕಾಏಕಿ ನುಗ್ಗಿದ ಯುವಕ ಸ್ಪೈಸ್ ಜೆಟ್ ವಿಮಾನದ ಮುಂಭಾಗದಲ್ಲಿ ಕುಳಿತು ವಿಮಾನದ ಕಲ್ಲಿನಿಂದ ಜಜ್ಜಿದ್ದಾನೆ. ಇದರಿಂದಾಗಿ ವಿಮಾನದ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ವಿಮಾನದಲ್ಲಿ ಸುಮಾರು 48 ಪ್ರಯಾಣಿಕರು ಪ್ರಯಾಣಕ್ಕೆ ಸಜ್ಜಾಗಿ ಕುಳಿತಿದ್ದರು. ಈ ಯುವಕನ ಹುಚ್ಚಾಟದಿಂದ ವಿಮಾನ ಹಾರಾಟದಲ್ಲಿ ಒಂದು ಗಂಟೆ ವ್ಯತಯವಾಗಿದೆ ಎಂದು ವರದಿಯಾಗಿದೆ. ಯುವಕನನ್ನು ಬಂಧಿಸಿದ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೊಪ್ಪಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಅಷ್ಟೆಲ್ಲಾ ಭದ್ರತೆ ಇದ್ದರೂ ಈತ ಕಣ್ತಪ್ಪಿಸಿ ಹೇಗೆ ಒಳನುಸುಳಿದ್ದಾನೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಅಲ್ಲದೆ ಆತನ ಉದ್ದೇಶ ಏನಾಗಿತ್ತು ಅನ್ನೋದು ಕೂಡ ತನಿಖೆ ಬಳಿಕವಷ್ಟೇ ತಿಳಿಯಬೇಕು.