Homeರಾಜ್ಯಶಿಕ್ಷಣ ಸಚಿವರಿಗೆ ಮುಗ್ಧ ಬಾಲಕನ ಮನವಿ

ಶಿಕ್ಷಣ ಸಚಿವರಿಗೆ ಮುಗ್ಧ ಬಾಲಕನ ಮನವಿ

ಶಿವಮೊಗ್ಗ : ನಿನ್ನೆ ಇನ್ನೂ, ನಾಡಿನಾದ್ಯಂತ ಶಿಕ್ಷಕರ ದಿನಾಚರಣೆ ಆಚರಿಸಲಾಗಿದ್ದು, ಈ ಬೆನ್ನಲ್ಲೇ ಇಂದಿನಿಂದ, ಅದರಲ್ಲೂ ಬರೊಬ್ಬರಿ ಎರಡು ವರ್ಷಗಳ ಬಳಿಕ ಶಾಲೆಗಳು ಆರಂಭಗೊಂಡಿವೆ. ರಾಜ್ಯದಲ್ಲಿ ಕೊರೋನಾ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ, ಶಿಕ್ಷಣ ಇಲಾಖೆ, ಹಂತ ಹಂತವಾಗಿ ಶಾಲೆಗಳು ಆರಂಭಿಸಿದ್ದು, ಸಕಾ೯ರದ ಆದೇಶದಂತೆ, ಇಂದಿನಿಂದ 6 ರಿಂದ 8 ನೇ ತರಗತಿಗಳು ಆರಂಭಗೊಂಡಿವೆ.

ಇಂದು ಶಿವಮೊಗ್ಗದಲ್ಲಿಯೂ ಕೂಡ ಖಾಸಗಿ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ, ಶಾಲಾ ಮಕ್ಕಳು ಆಗಮಿಸುತ್ತಿದ್ದು, ನಗರದ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ಮತ್ತು ಗುಲಾಬಿ ಹೂವು ನೀಡುವ ಮೂಲಕ ಶಾಲೆಗೆ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು. ತರಗತಿಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ, ಶಾಲಾ ಮಕ್ಕಳಲ್ಲಿ ಸಂಭ್ರಮ ಮನೆ ಮಾಡಿದ್ದು, ಸಂತಸದಿಂದ ಮಕ್ಕಳು, ತರಗತಿಗಳಿಗೆ ಆಗಮಿಸುತ್ತಿದ್ದಾರೆ.

https://fb.watch/7RxaBmgDtq/

ಈ ನಡುವೆ, 5 ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಸಹೋದರಿಗೆ ಶಾಲೆಗೆ ಬಿಡಲು ಬಂದಿದ್ದು, ನಮಗೂ ಶಾಲೆ ಆರಂಭಿಸಿ ಅಂತ ಬಹಳ ಕ್ಯೂಟಾಗಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾನೆ. ಎರಡು ವರ್ಷ ಆಯ್ತು, ಶಾಲೆ ಇರ್ಲಿಲ್ಲ. ಈಗ ಕೊರೋನಾ ಕಡಿಮೆಯಾಗಿದೆ. ನಾವು ಕೂಡ ಎಚ್ಚರದಿಂದ ಇರ್ತಿವಿ. ಪ್ಲೀಸ್ ನಮಗೂ ಶಾಲೆ ಆರಂಭಿಸಿ ಸಾರ್ ಅಂತಾ ಸರ್ಕಾರಕ್ಕೆ ಕೇಳಿಕೊಂಡಿದ್ದಾನೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments