Monday, May 23, 2022
Powertv Logo
Homeರಾಜ್ಯಅವಳಿ ಮರಿಗಳಿಗೆ ಜನ್ಮ ನೀಡಿದ ಆನೆ

ಅವಳಿ ಮರಿಗಳಿಗೆ ಜನ್ಮ ನೀಡಿದ ಆನೆ

ಚಾಮರಾಜನಗರ : ಆನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದ ಘಟನೆ ಬಂಡೀಪುರ ಕಾಡಲ್ಲಿ ನಡೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯದ ಮೂರ್ಕೆರೆ ದಾರಿ ಎಂಬಲ್ಲಿ ನೀರಿನ ಹೊಂಡ ಸಮೀಪ ಎರಡು ಮರಿಗಳೊಂದಿಗೆ ಕಾಣಿಸಿಕೊಳ್ಳುವ ಮೂಲಕ ಅವಳಿ ಮರಿ ಜನನದ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಅವಳಿ ಮರಿಗಳಿಗೆ ಜನ್ಮ ನೀಡಿರುವ ಸಾಧ್ಯತೆ ಇದೆ. ಇದೇ ಮೊದಲ ಬಾರಿಗೆ ಬಂಡೀಪುರದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿರುವ ಆನೆ ಭಾರಿ ಗಾತ್ರದ ಪ್ರಾಣಿ ಆಗಿರುವುದರಿಂದ ಉಳಿದ ಸಸ್ತನಿಗಳಾದ ಹುಲಿ, ಚಿರತೆಯಂತೆ 4-5 ಮರಿಗಳಿಗೆ ಜನ್ಮ ನೀಡದೇ ಒಂದು ಮರಿಗೆ ಮಾತ್ರ ಜನ್ಮ ನೀಡಲಿದೆ. ಆನೆಗಳಲ್ಲಿ ಅವಳಿ ಮರಿಗಳಾಗುವುದು ತೀರಾ ಅಪರೂಪವೇ ಆಗಿರುತ್ತದೆ.

- Advertisment -

Most Popular

Recent Comments