Monday, January 17, 2022
Powertv Logo
Homeದೇಶಚಿರತೆಯ ಬಾಯಿಂದ ಮಗನನ್ನು ರಕ್ಷಿಸಿದ ಸಾಹಸಿ ಬುಡಕಟ್ಟು ಮಹಿಳೆ

ಚಿರತೆಯ ಬಾಯಿಂದ ಮಗನನ್ನು ರಕ್ಷಿಸಿದ ಸಾಹಸಿ ಬುಡಕಟ್ಟು ಮಹಿಳೆ

ಮಧ್ಯಪ್ರದೇಶ: ಇದೊಂದು ಸಿನಿಮಾ ಕತೆಯನ್ನೂ ಮೀರಿಸುವಂತಿರುವ ನೈಜ ಘಟನೆ. ನಂಬಲು ಅಸಾಧ್ಯವಾದ ಈ ಘಟನೆಯಲ್ಲಿ ಮಧ್ಯಪ್ರದೇಶದ ಅರಣ್ಯದಂಚಿನ ಗ್ರಾಮದ ಬುಡಕಟ್ಟು ಮಹಿಳೆಯೊಬ್ಬಳು ಅಕ್ಷರಶಃ ತನ್ನ ಮಗನನ್ನು ಚಿರತೆಯ ಬಾಯಿಯಿಂದ ಕಿತ್ತು ಬದುಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ತಾಯಿಯೊಬ್ಬಳು ತನ್ನ ಮಗುವನ್ನು ಎಷ್ಟು ಪ್ರೀತಿಸಬಹುದು ಎಂಬುದು ಈ ಘಟನೆ ಜ್ವಲಂತ ಉದಾಹರಣೆಯಾಗಿದೆ. ತನ್ನ ಕಣ್ಣೆದುರೇ ಮಗನನ್ನು ಕಚ್ಚಿ ಹೊತ್ತೊಯ್ದ ಚಿರತೆಯನ್ನು ಹಿಂಬಾಲಿಸಿ ಅದರ ಬಾಯಿಂದ ತನ್ನ ಮಗನನ್ನು ಕಿತ್ತುಕೊಳ್ಳುವುದು ಸಾಮಾನ್ಯವಾದ ಸಾಹಸವಲ್ಲ.

ಕಣ್ಣೆದುರೆ ಮಗನನ್ನು ಹೊತ್ತೊಯ್ದ ಚಿರತೆ

ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನಿಂದ 500 ಕಿಲೋಮಿಟರ್ ದೂರದಲ್ಲಿರುವ ಸಿಧಿ ಜಿಲ್ಲೆಯ ಸಂಜಯ್  ಟೈಗರ್​ ರಿಸರ್ವ್​ನ ಬಫರ್ ವಲಯದಲ್ಲಿರುವ ಬಾಡಿ ಝರಿಯಾ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಕಿರಣ್ ಎಂಬ ಬೈಗಾ ಬುಡಕಟ್ಟು ಮಹಿಳೆ ತನ್ನ ಮೂರು ಮಕ್ಕಳೊಂದಿಗೆ ಬೆಂಕಿಯ ಮುಂದೆ ಚಳಿ ಕಾಯಿಸುತ್ತ ಕುಳಿತಿದ್ದಳು. ಆಗಲೇ ಇದ್ದಕ್ಕಿದ್ದಂತೆ ಅಲ್ಲಿ ಚಿರತೆಯೊಂದು ಕಾಣಿಸಿಕೊಂಡಿತು. ಅವಳು ನೋಡುತ್ತಿದ್ದಂತೆಯೇ ಅವಳ ಮಗ ರಾಹುಲ್​ನನ್ನು ತನ್ನ ಬಾಯಿಯಲ್ಲಿ ಕಚ್ಚಿಕೊಂಡು ಅರಣ್ಯಪ್ರದೇಶದತ್ತ ಓಡಿಹೋಯಿತು.

ಚಿರತೆಯನ್ನು ಹಿಂಬಾಲಿಸಿ ಅದರೊಂದಿಗೆ ಹೋರಾಡಿದ ಮಹಿಳೆ

ಕಣ್ಣುಮುಚ್ಚಿ ತೆಗೆದಯುವುದರಲ್ಲಿ ನಡೆದ ಈ ಘಟನೆಯಿಂದ ದಿಗ್ಭ್ರಾಂತಳಾದ ಅವಳು ಎಲ್ಲರಂತೆ ಅಳುತ್ತ ರೋಧಿಸುತ್ತ ಕೂರದೆ ತಕ್ಷಣ ಚಿರತೆ ಹೋದ ದಾರಿಯಲ್ಲಿ ಕಾಡಿನಲ್ಲಿ ಓಡಿದಳು. ಅಲ್ಲಿ ಅವಳು ಚಿರತೆಯನ್ನು ಕಂಡಿ ಅದರ ಜೊತೆ ಹೋರಾಡಿ ಚಿರತೆಯ ಬಾಯಿಂದ ತನ್ನ ಮಗನನ್ನು ಬದುಕಿಸಿಕೊಂಡು ಹಳ್ಳಿಗೆ ವಾಪಸಾದಳು. ನಂಬಲಸಾಧ್ಯವಾದ ಈ ಘಟನೆಯನ್ನು ಅಲ್ಲಿನ ಹಿರಿಯ ಅರಣ್ಯಾಧಿಕಾರಿ ಪುಷ್ಟೀಕರಿಸಿದ್ದಾರೆ. ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ವೈ.ಪಿ.ಸಿಂಗ್ ಸಹ ಈ ಮಹಿಳೆಯ ಸಾಹಸವನ್ನು ಹೊಗಳಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್​ಸಿಂಗ್ ಚವ್ಹಾಣ್ ಸಹ ಬುಡಕಟ್ಟು ಮಹಿಳೆಯ ಈ ಸಾಹಸವನ್ನು ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments