Friday, September 30, 2022
Powertv Logo
Homeರಾಜ್ಯಅಮೂಲ್ಯ ಲಿಯೋನಾ ಹುಟ್ಟೂರಿಗೆ ಕಾಲಿಡದಂತೆ ಭಜರಂಗದಳದ ಎಚ್ಚರಿಕೆ

ಅಮೂಲ್ಯ ಲಿಯೋನಾ ಹುಟ್ಟೂರಿಗೆ ಕಾಲಿಡದಂತೆ ಭಜರಂಗದಳದ ಎಚ್ಚರಿಕೆ

ಚಿಕ್ಕಮಗಳೂರು: ಕಳೆದ ಫೆಬ್ರವರಿ 21 ರಂದು ಬೆಂಗಳೂರಿನಲ್ಲಿ ಸಿಎಎ, ಎನ್‌ಆರ್‌ಸಿ ವಿರೋಧಿಸಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಭಾಗವಹಿಸಿದ್ದ ಕೊಪ್ಪ ಮೂಲದ ಯುವತಿ ಅಮೂಲ್ಯ ಲಿಯೋನಾ  ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ದೇಶದ್ರೋಹದ ಆರೋಪದಲ್ಲಿ ಪೊಲೀಸರು ಈಕೆಯನ್ನು ಬಂಧಿಸಿದ್ದರು. ಇದೀಗ ಅಮೂಲ್ಯ ಲಿಯೋನಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಜಾಮೀನಿನ ಪಡೆದು ಬಿಡುಗಡೆಯಾಗಿದ್ದಾರೆ.

ಸಂಸದ ಅಸಾದುದ್ದಿನ್ ಓವೈಸಿ ಭಾಗಿಯಾಗಿದ್ದ ಈ ಸಮಾವೇಶದಲ್ಲಿ ಅಮೂಲ್ಯ ಲಿಯೋನಾ ಜಿಂದಾಬಾದ್ ಎಂದು ಘೋಷಣೆ ಕೂಗಿ ಸುದ್ದಿಯಾಗಿದ್ದರು. ತಕ್ಷಣ ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ದೇಶದ್ರೋಹದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಕಳೆದ ಮೂರು ತಿಂಗಳು ಜೈಲಿನಲ್ಲಿದ್ದ ಇವರು ಕಾನೂನಿಗೆ ಬದ್ಧವಾಗಿ ಸಿಆರ್​ಪಿಸಿ ಸೆಕ್ಷನ್ 162 ಕಲಂ 2 ಅಡಿಯಲ್ಲಿ ಷರತ್ತು ಬದ್ಧ ಜಾಮೀನು ಅಡಿಯಲ್ಲಿ ಹೊರ ಬಂದಿದ್ದಾರೆ. ಆದರೆ ಆಕೆಯ ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಬ್ಬಗದ್ದೆಯ ಗ್ರಾಮಕ್ಕೆ ಬಂದರೆ ವಿರುದ್ದ ಪ್ರತಿಭಟನೆ ಮಾಡಲಾಗುವುದು ಎಂದೂ ಕೊಪ್ಪ ತಾಲೂಕಿನ ಭಜರಂಗದಳ ಸಂಘಟನೆ ಎಚ್ಚರಿಕೆಯನ್ನು ನೀಡಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗುತ್ತಿದೆ. ಆಕೆ ಕೊಪ್ಪಕ್ಕೆ ಬರದ ಹಾಗೆ ಸಂಬಂಧಪಟ್ಟ ಇಲಾಖೆಗಳು ಆಕೆಯ ಮೇಲೆ ಎಚ್ಚರಿಕೆಯನ್ನು ವಹಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೊಪ್ಪ ಭಜರಂಗದಳ ಪೋಸ್ಟ್ ಮಾಡಿರೋದು ಜಿಲ್ಲಾದ್ಯಂತ ವೈರಲ್ ಆಗುತ್ತಿದೆ. 

6 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments