ಪೂರ್ವ ಕರಾವಳಿಯಲ್ಲಿ ಚಂಡಮಾರುತದ ಅಬ್ಬರ :  ಮೃತ್ಯು ಅಂಫಾನ್​ಗೆ 12 ಜನ ಬಲಿ

0
528

ಕೊಲ್ಕತ್ತಾ: ದೇಶದಲ್ಲೆಡೆ ಕೊರೋನಾ ಅಟ್ಟಹಾಸ ಮೆರೆಯುತ್ತಿರುವ ಬೆನ್ನಲ್ಲೆ ಅಂಫಾನ್ ಚಂಡಮಾರುತವೂ ಅಪ್ಪಳಿಸಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಫೂರ್ವ ಕರಾವಳಿಗೆ ಅಪ್ಪಳಿಸಿರುವ ಚಂಡಮಾರುತ ಬುಧವಾರದಂದು ಪಶ್ಚಿಮ ಬಂಗಾಳದ ದಿಗಾ ಪ್ರದೇಶಕ್ಕೆ ಕಾಲಿಟ್ಟಿದ್ದು, ಇದರ ಪ್ರಭಾವಕ್ಕೆ ಈಗಾಗಲೇ  12 ಜನ ಬಲಿಯಾಗಿದ್ದಾರೆ.

ಅಂಫಾನ್ ಚಂಡಮಾರುತದ ತೀವ್ರತೆಗೆ ಸಮುದ್ರದಲ್ಲಿ ಅಲೆಗಳು ರಕ್ಕಸನಂತೆ ಅಬ್ಬರಿಸುತ್ತಿದೆ. ಕೊಲ್ಕತ್ತಾದಲ್ಲಿ 100 ಕಿ.ಮೀ ವೇಗದಲ್ಲಿ ಅಪ್ಪಳಿಸಿದ ಚಂಡಮಾರುತ, ಕೋಲ್ಕತ್ತಾ ಸೇರಿದಂತೆ ಹಲವು ನಗರಗಳಿಗೆ ಹಾನಿಯುಂಟು ಮಾಡಿದೆ. ಒಡಿಶಾದ ಪುರಿ, ಕುರ್ದಾ, ಜಗತ್ ಸಿಂಗಾಪುರ್, ಕಟಕ್, ಕೇಂದ್ರಪರಾ, ಜಾಜ್​ಪುರ, ಗಂಜಾಮ್, ಭದ್ರಕ್, ಬಾಲೋಸೋರ್​ನಲ್ಲಿ ತೀವ್ರ ಮಳೆಯಾಗುತ್ತಿದೆ. ಇನ್ನು ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಒಟ್ಟಾರೆ 7 ಲಕ್ಷಕ್ಕೂ ಹೆಚ್ಚು ಜನರನ್ನು ತೆರವುಗೊಳಿಸಿ ನಿರಾಶ್ರಿತರ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ.  

LEAVE A REPLY

Please enter your comment!
Please enter your name here