ಸುಧಾಮೂರ್ತಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಮಿತಾಬ್​ ಬಚ್ಚನ್!

0
403

ಮುಂಬೈ : ಬಾಲಿವುಡ್​​ನ ಸ್ಟಾರ್ ನಟ ಅಮಿತಾಬ್​​ ಬಚ್ಚನ್ ನಮ್ಮ ಹೆಮ್ಮೆಯ ಕನ್ನಡತಿ ಸುಧಾಮೂರ್ತಿ ಅವರ ಕಾಲಿಗೆರಗಿ ಆಶೀರ್ವಾದ ಪಡೆದಿದ್ದಾರೆ. ಬಿಗ್ ಬಿ ಸುಧಾಮೂರ್ತಿ ಆಶೀರ್ವಾದ ಪಡೆದಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. 

ಹೌದು, ಅಮಿತಾಬ್​  ಬಚ್ಚನ್​​ ಅವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಜನಪ್ರಿಯ ಕಾರ್ಯಕ್ರಮ “ಕೌನ್​​ ಬನೇಗಾ ಕರೋಡ್​ಪತಿ’’ ಸೀಸನ್​ 11 ಕೊನೆಯ ಘಟ್ಟ ತಲುಪಿದೆ. ಈ ಕಾರ್ಯಕ್ರಮದ ಕೊನೆಯ ಸಂಚಿಕೆ ನವೆಂಬರ್ 29ರಂದು ಪ್ರಸಾರವಾಗಲಿದೆ. ಆ ಸಂಚಿಕೆಯಲ್ಲಿ ಇನ್ಫೋಸಿಸ್​ ಮುಖ್ಯಸ್ಥೆ, ಖ್ಯಾತ ಲೇಖಕಿ ಸುಧಾಮೂರ್ತಿ ಭಾಗವಹಿಸಲಿದ್ದು , ಅದರ ಪ್ರೋಮೊ ಈಗ ರಿಲೀಸ್​ ಆಗಿದೆ. 

ಸುಧಾಮೂರ್ತಿ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಅಮಿತಾಬ್​​ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ವಯಸ್ಸಲ್ಲಿ ಅಮಿತಾಬ್ ಬಚ್ಚನ್​ ಸುಧಾಮೂರ್ತಿ ಅವರಿಗಿಂತ ಹಿರಿಯರಾಗಿದ್ದರೂ  ಸುಧಾಮೂರ್ತಿಯವರ ಸಾಮಾಜಿಕ ಕಾರ್ಯಗಳಿಗೆ ಮನಸೋತು ತುಂಬು ಹೃದಯದಿಂದ ನಮಸ್ಕರಿಸಿದ್ದಾರೆ. 

ಅನೇಕ ಬಾರಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸುಧಾಮೂರ್ತಿಯವರು  ತಮ್ಮ ಗುರುಗಳ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿರೋದನ್ನು ನಾವು- ನೀವು ನೋಡಿದ್ದೀವಿ. ಇದೀಗ ಟಿವಿ ಕಾರ್ಯಕ್ರಮದಲ್ಲಿ ಅಮಿತಾಬ್​  ಸುಧಾಮೂರ್ತಿಯವರ ಕಾಲಿಗೆ ನಮಸ್ಕರಿಸಿ ದೊಡ್ಡತನ ಮೆರೆದಿದ್ದಾರೆ.

ಇನ್ನು ಈ ಶೋನಲ್ಲಿ ಇನ್ಫೋಸಿಸ್​ ಪ್ರತಿಷ್ಠಾನ ನಡೆಸುತ್ತಿರುವ ಸಾಮಾಜಿಕ ಕಾರ್ಯಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡಿರುವ ಅಮಿತಾಬ್​​, ಸುಧಾಮೂರ್ತಿಯವರಿಂದ ದೇವದಾಸಿಯರು ತಯಾರಿಸಿರುವ ಹೊದಿಕೆಯೊಂದನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ. 

LEAVE A REPLY

Please enter your comment!
Please enter your name here