ಇಂಟರ್​​ನ್ಯಾಷನಲ್​ ಕ್ರಿಕೆಟ್​ಗೆ ರಾಯುಡು ಗುಡ್​ ಬೈ..! ದಿಢೀರ್ ನಿರ್ಧಾರಕ್ಕೆ ಕಾರಣವೇನು?

0
606

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ ಅಂಬಟಿ ರಾಯುಡು ಇಂಟರ್​ನ್ಯಾಷನಲ್ ಕ್ರಿಕೆಟ್​ಗೆ  ವಿದಾಯ ಘೋಷಿಸಿದ್ದಾರೆ. ವರ್ಲ್ಡ್​​ಕಪ್​ನಲ್ಲಿ ಆಡಲು ಅವಕಾಶ ಸಿಗದ ಬೇಸರವೇ ರಾಯುಡು ಈ ದಿಢೀರ್ ನಿರ್ಧಾರಕ್ಕೆ ಕಾರಣ..!

ಆಂಧ್ರಪ್ರದೇಶದ ಗುಂಟೂರು ಮೂಲದ 33ರ ಹರೆಯದ ಅಂಬಟಿ ರಾಯುಡು ಮಧ್ಯಮ ಕ್ರಮಾಂಕದ ಬಲಗೈ ಬ್ಯಾಟ್ಸ್​ಮನ್ಗ, ಅಷ್ಟೇ ಅಲ್ದೇ ಬೌಲಿಂಗ್ ಕೂಡ ಮಾಡಬಲ್ಲವರಾಗಿದ್ದ ಅವರು, ಬಲಗೈ ಆಫ್ ಬ್ರೇಕ್ ಬೌಲರ್ ಕೂಡ ಆಗಿದ್ರು. ಟೀಮ್ ಇಂಡಿಯಾದ ಪರ 55 ಒಡಿಐಗಳಿಂದ 47.05 ರ ಸರಾಸರಿಯಲ್ಲಿ 1694 ರನ್ ಗಳಿಸಿದ್ದಾರೆ. ಅದರಲ್ಲಿ 3 ಶತಕ, 10 ಅರ್ಧಶತಕಗಳು ಸೇರಿವೆ. 

2013 ಜುಲೈನಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ರಾಯುಡು ಎಂಟ್ರಿಕೊಟ್ಟಿದ್ದರು. ಮಾರ್ಚ್ 2019ರಲ್ಲಿ ರಾಂಚಿಯಲ್ಲಿ ಸ್ಟ್ರೇಲಿಯಾ ವಿರುದ್ಧ ನಡೆದ ಮ್ಯಾಚೇ ಅವರ ಕೊನೆಯ ಏಕದಿನ ಪಂದ್ಯವಾಗಿದೆ. ಇನ್ನು 6 ಟಿ.20 ಮ್ಯಾಚ್​ಗಳಿಂದ 42ರನ್​ಗಳನ್ನು ಮಾಡಿದ್ದರು. ಟೆಸ್ಟ್ ಕ್ರಿಕೆಟ್​ ಆಡಲು ಅವಕಾಶ ಸಿಕ್ಕಿರಲಿಲ್ಲ. 

 ಪ್ರಸಕ್ತ ವಿಶ್ವಕಪ್​ ತಂಡದಲ್ಲಿ ಅವರಿಗೆ ಸ್ಥಾನ ದೊರಕಿರಲಿಲ್ಲ. 4ನೇ ಕ್ರಮಾಂಕಕ್ಕೆ ಆಯ್ಕೆ ಆಗುವ ನಿರೀಕ್ಷೆಯಲ್ಲಿದ್ದರು. ಆದರೆ ಅವರ ಬದಲಾಗಿ ಆಲ್​​ರೌಂಡರ್​​​ ವಿಜಯ್​​ ಶಂಕರ್​​​ ಅವರನ್ನು ಆಯ್ಕೆ ಮಾಡಲಾಗಿತ್ತು. ಇದರಿಂದ ಬೇಸರಗೊಂಡಿದ್ದ ರಾಯುಡು ತನ್ನ ಬೇಸರವನ್ನು ವ್ಯಂಗ್ಯ ಟ್ವೀಟ್ ಮಾಡುವ ಮೂಲಕ ಹೊರಹಾಕಿದ್ದರು.

ಶಿಖರ್ ಧವನ್ ಹಾಗೂ ವಿಜಯ್ ಶಂಕರ್ ಗಾಯಗೊಂಡು ಟೂರ್ನಿಯಿಂದ ಹೊರ ಬಂದಾಗ ರಾಯುಡುಗೆ ಬುಲಾವ್​ ಬರಬಹುದು ಅನ್ನೋ ನಿರೀಕ್ಷೆ ಇತ್ತು. ಆದರೆ, ಧವನ್ ಬದಲಿಗೆ ರಿಷಬ್ ಪಂತ್, ವಿಜಯ್ ಶಂಕರ್ ಬದಲಿಗೆ ಕನ್ನಡಿಗ ಮಯಾಂಕ್ ಅಗರ್​ವಾಲ್​ಗೆ ಚಾನ್ಸ್ ನೀಡಲಾಗಿದೆ. 

 

 

LEAVE A REPLY

Please enter your comment!
Please enter your name here