Monday, January 17, 2022
Powertv Logo
HomePower Specialಅಂಬರಕ್ಕೇರಿದ 'ಅಂಬಿ'ಗ..!

ಅಂಬರಕ್ಕೇರಿದ ‘ಅಂಬಿ’ಗ..!

ಅಂಬರೀಶ್.. ಈ ಹೆಸರಲ್ಲೇ ಒಂದು ಗತ್ತಿದೆ, ಖದರ್ ಇದೆ. ಯಾವುದಕ್ಕೂ, ಯಾರಿಗೂ ಜಗ್ಗದ ವ್ಯಕ್ತಿ, ವ್ಯಕ್ತಿತ್ವ. ಈ ‘ಸೋಲಿಲ್ಲದೆ ಸರದಾರ’ ಕಾಲಕ್ಕೆ ಶರಣಾಗಿದ್ದಾರೆ. ಇನ್ನು ಅಂಬರೀಶ್ ನೆನಪು ಮಾತ್ರ.
ವರನಟ ಡಾ.ರಾಜ್​ಕುಮಾರ್, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ನಂತರ ಸ್ಯಾಂಡಲ್ ವುಡ್ ‘ಸಂಸಾರ ನೌಕೆ’ಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋದ ‘ಪಾಳೇಗಾರ’. ಅಂಬರಕ್ಕೇರಿದ ಈ ‘ಅಂಬಿ’ಗನ ಲೈಫ್ ಸ್ಟೋರಿ ನಿಜಕ್ಕೂ ಅದ್ಭುತ. ಮರೆಯಾಗುವ ಮುನ್ನ ಮರೆಯಲಾಗದ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ ರೆಬಲ್ ಸ್ಟಾರ್.
ಅಂಬರೀಶ್ ಅವರ ಮೊದಲ ಹೆಸ್ರು ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಅಂತ. ಹುಟ್ಟಿದ್ದು 1952 ಮೇ 29ರಂದು. ಹುಟ್ಟೂರು ಮಂಡ್ಯ ಜಿಲ್ಲೆಯ ದೊಡ್ಡರಸನಗೆರೆ ಗ್ರಾಮ. ತಂದೆ ಹುಚ್ಚೇಗೌಡ, ತಾಯಿ ಪದ್ಮಮ್ಮ. ಅಜ್ಜ ಖ್ಯಾತ ಪಿಟೀಲು ವಿದ್ವಾನ್ ಟಿ. ಚೌಡಯ್ಯ. ಹುಚ್ಚೇಗೌಡ ಮತ್ತು ಪದ್ಮಮ್ಮ ದಂಪತಿಯ 7 ಜನ ಮಕ್ಕಳಲ್ಲಿ ಅಂಬಿ 6ನೇ ಅವರು. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಮಂಡ್ಯದಲ್ಲಿ ಪೂರೈಸಿದ ಅಂಬರೀಶ್ ಪದವಿ ವಿದ್ಯಾಭ್ಯಾಸ ಮಾಡಿದ್ದು ಮೈಸೂರಿನಲ್ಲಿ. ದಾಂಪತ್ಯಕ್ಕೆ ಕಾಲಿಟ್ಟಿದ್ದು 1991ರಲ್ಲಿ. ನಿಮ್ಗೇ ಗೊತ್ತೇ ಇದೆ ಇವರ ಬಾಳಸಂಗಾತಿ ಸುಮಲತಾ. ಅಂಬರೀಶ್ ಮತ್ತು ಸುಮಲತಾ ದಂಪತಿಯ ಪುತ್ರ ಅಭಿಷೇಕ್.
ಅಂಬಿ ಸಿನಿಯಾನ : ಅಂಬರೀಶ್ ಅವರ ಸಿನಿಯಾನ ಆರಂಭವಾಗಿದ್ದು 1972ರಲ್ಲಿ. ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ‘ನಾಗರಹಾವು’ ಸಿನಿಮಾದಲ್ಲಿ ಖಳನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಅಂಬರೀಶ್ ಎಲ್ಲರ ಪ್ರೀತಿಯ ಜಲೀಲನಾಗಿ ಕನ್ನಡ ಚಿತ್ರರಂಗವನ್ನು ಆಳಿದರು. ವಿಲನ್ ಆಗಿ, ಹೀರೋ ಆಗಿ, ಪೋಷಕನಟನಾಗಿ ಅಂಬಿ ಸ್ಯಾಂಡಲ್ ವುಡ್ ಗೆ ಸಲ್ಲಿಸಿದ ಕೊಡುಗೆ ಅಪಾರ. ಪಡುವರಹಳ್ಳಿ ಪಾಂಡವರು, ಚಕ್ರವ್ಯೂಹ, ಚದುರಂಗ, ದಿಗ್ಗಜರು, ಮಸಣದ ಹೂವು, ಶುಭಮಂಗಳ, ರಂಗನಾಯಕಿ, ಸಾಂಗ್ಲಿಯಾನ, ಡಾ. ರಾಜ್ ಕುಮಾರ್ ಜೊತೆ ಒಡಹುಟ್ಟಿದವರು ಸೇರಿದಂತೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಂಬಿ ನಟಿಸಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಅಂಬಿ ನಿಂಗೆ ವಯಸ್ಸಾಯ್ತೋ’ ಅಂಬಿಯ ಕೊನೆಯ ಸಿನಿಮಾ. ಈ ಸಿನಿಮಾದಲ್ಲಿ ಅಭಿನಯ ಚಕ್ರವತ್ರಿ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಸಿನಿಮಾದಲ್ಲಿಯೂ ಅಂಬಿ ನಟಿಸಿದ್ದು, ಸಿನಿಮಾ ರಿಲೀಸ್ ಆಗಬೇಕಿದೆ.

ಸಾಲು ಸಾಲು ಪ್ರಶಸ್ತಿಗಳ ಸರದಾರ
1982 – ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ
1985-86 ಅತ್ಯುತ್ತಮ ಸಹಾಯ ನಟ, ಚಿತ್ರ :ಮಸಣದ ಹೂವು
ಫಿಲ್ಮ್ ಫೇರ್ ಪ್ರಶಸ್ತಿ : ಅತ್ಯುತ್ತಮ ನಟ : ಒಲವಿನ ಉಡುಗೊರೆ
2005 – ಎನ್.ಟಿ.ಆರ್ ನ್ಯಾಷನಲ್ ಪ್ರಶಸ್ತಿ
2009 – ಜೀವಮಾನ ಫಿಲ್ಮ್ ಫೇರ್ ಪ್ರಶಸ್ತಿ
2009 – ಆಂಧ್ರ ಸರ್ಕಾರದಿಂದ ನಂದಿ ಪ್ರಶಸ್ತಿ
2011- ವಿಷ್ಣುವರ್ಧನ್ ಪ್ರಶಸ್ತಿ
2013 – ಕರ್ನಾಟಕ ವಿವಿಯಿಂದ ಗೌರವ ಡಾಕ್ಟರೇಟ್

ರಾಜಕೀಯ ಹೆಜ್ಜೆ :
ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದಾಗಲೇ ರಾಜಕೀಯ ಪ್ರವೇಶ ಮಾಡಿದ ಅಂಬರೀಶ್ ಸಿನಿಮಾ ಕ್ಷೇತ್ರದಂತೇ ರಾಜಕೀಯದಲ್ಲೂ ಛಾಪು ಮೂಡಿಸಿದ್ದಾರೆ. ಕಾಂಗ್ರೆಸ್ ಸೇರುವ ಮೂಲಕ ಅಂಬಿ ರಾಜಕೀಯಕ್ಕೆ ಎಂಟ್ರಿಕೊಟ್ರು. ಸಂಸದರು, ಕೇಂದ್ರ ಸಚಿವರಾಗಿ, ವಸತಿ ಸಚಿವರಾಗಿ ಇವರು ಸಲ್ಲಿಸಿದ ಸೇವೆ ಅನನ್ಯ.
1994ರಲ್ಲಿ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಅಂಬಿ, 1998 ರಿಂದ 2004ರವರೆಗೆ ಸಂಸದರಾಗಿ, 2006-08 – ಡಾ. ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನದ ರಾಜ್ಯ ಸಚಿವರಾಗಿ,ಹಾಗೇ ರಾಜ್ಯ ಸರ್ಕಾರದಲ್ಲಿ ವಸತಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
2 ವರ್ಷ ಟಿಕೆಟ್ ನೀಡದಿದ್ದಕ್ಕೆ ಅಸಮಾಧಾನಗೊಂಡು 1996ರಲ್ಲಿ ಜನತಾದಳಕ್ಕೆ ಸೇರಿದ ಅಂಬಿ, ಆ ವರ್ಷ ರಾಮನಗರ ಉಪಚುನಾವಣೆಯಲ್ಲಿ ದಳ ಅಭ್ಯರ್ಥಿಯಾಗಿ ಕಣಕ್ಕಿಳಿದು ಮೊದಲ ಚುನಾವಣೆಯಲ್ಲಿ ಸೋಲುಕಂಡಿದ್ರು. 1998ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಸಲ ‘ಕೈ’ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದ್ರು. ನಂತರ 2 ಅವಧಿಗೆ ಮಂಡ್ಯದಿಂದಲೇ ಕಾಂಗ್ರೆಸ್ ಕ್ಯಾಂಡಿಡೇಟ್ ಆಗಿ ಕಣಕ್ಕಿಳಿದು ಜಯಿಸಿದ್ದರು. ಹೀಗೆ ಮೂರು ಬಾರಿ (1998, 1999, 2004ರಲ್ಲಿ) ಸಂಸದರಾಗಿ ಅಂಬರೀಶ್ ಆಯ್ಕೆಯಾಗಿದ್ರು. 2009ರಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದು ಸೋತಿದ್ದರು. 2012ರಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದರು,
2013 ರಲ್ಲಿ ಮಂಡ್ಯ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ, ಸಿದ್ದರಾಮಯ್ಯ ಅವರ ಸಂಪುಟದಲ್ಲಿ ವಸತಿ ಸಚಿವರಾಗಿ ಸೇವೆ ಮಾಡಿದ್ರು. ಈ ವೇಳೆಯಲ್ಲೇ ಅನಾರೋಗ್ಯದ ಹಿನ್ನೆಲೆಯಲ್ಲಿ ಸಿಂಗಾಪುರಕ್ಕೆ ಹೋಗಿ ಚಿಕಿತ್ಸೆ ಪಡೆದಿದ್ದರು.
ನಂತರದ ದಿನಗಳಲ್ಲಿ ಸಿನಿಮಾ ಹಾಗೂ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದ ಅಂಬರೀಶ್ ಇದೀಗ ಬಾರದ ಲೋಕಕ್ಕೆ ಹೋಗಿದ್ದಾರೆ. ಅಂಬಿ ಮತ್ತೆ ಹುಟ್ಟಿಬನ್ನಿ ಅಂತ ಪ್ರಾರ್ಥಿಸುವುದೊಂದೇ ದಾರಿ.

ಕಂಠೀರವ ಸ್ಟೇಡಿಯಂ ತಲುಪಿದ ಅಂಬಿ ಪ್ರಾರ್ಥಿವ ಶರೀರ

ಅಂಬಿಗೆ ಗುರುವಾರ ಕರೆಮಾಡಿದ್ದೆ… ಕನೆಕ್ಟ್ ಆಗಿರ್ಲಿಲ್ಲ -ಜಗ್ಗೇಶ್

ಪಯಣ ಮುಗಿಸಿದ ‘ಅಂಬಿ’ಗನ ಕೊನೆಯ ಪತ್ರ..!

ಡಾ.ರಾಜ್ ಸಮಾಧಿ ಬಳಿ ಅಂಬಿ ಅಂತ್ಯಕ್ರಿಯೆ

ರಾಜ್ಯದ ಪಾಲಿಗೆ ಕರಾಳ ದಿನ – ಡಾ.ಜಿ ಪರಮೇಶ್ವರ್

ಅಂಬರೀಶ್ ಅವರನ್ನು ಕಳೆದುಕೊಂಡ ಕರ್ನಾಟಕ ಬಡವಾಗಿದೆ : ಬಿಎಸ್ ವೈ

ಅಂಬರೀಶ್ ಅಜಾತಶತ್ರು -ಸಿದ್ದರಾಮಯ್ಯ

ಅಂಬರೀಶ್ ಅವರ ಅಗಲಿಕೆ ಆಘಾತವನ್ನುಂಟು ಮಾಡಿದೆ : ಎಚ್.ಡಿ ದೇವೇಗೌಡ್ರು

ಅಪ್ಪಾಜಿಯನ್ನು ಕಳೆದುಕೊಂಡಿದ್ದನ್ನು ಅರಗಿಸಿಕೊಳ್ಳಲಾಗ್ತಿಲ್ಲ – ದರ್ಶನ್

ಹುಸಿ ಕೋಪದಿಂದಲೇ ಪ್ರೀತಿ ಸಂಪಾದಿಸಿದ್ದ ಎಲ್ಲರ ಅಣ್ಣ ಅಂಬಿ – ಡಿ.ವಿ ಸದಾನಂದ ಗೌಡ

ಅಂಬರೀಶ್ ನಿಧನಕ್ಕೆ ರಜನಿಕಾಂತ್ ಸಂತಾಪ

ರೆಬಲ್ ಸ್ಟಾರ್ ಅಂಬರೀಶ್ ವಿಧಿವಶ

LEAVE A REPLY

Please enter your comment!
Please enter your name here

- Advertisment -

Most Popular

Recent Comments