ಕೊರೋನಾ ಎಫೆಕ್ಟ್ : ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ನಂಬರ್ 1 ಪಟ್ಟದಿಂದ ಕೆಳಕ್ಕಿಳಿದ ಮುಖೇಶ್ ಅಂಬಾನಿ!

0
1220

ಮುಂಬೈ: ತೈಲ ದರ ಇಳಿಕೆ ಮತ್ತು ಷೇರು ಮಾರುಕಟ್ಟೆಯ ಕುಸಿತದ ಕಾರಣದಿಂದ ಜಾಗತಿಕ ಮಾರುಕಟ್ಟೆಯು ಕೆಳಮುಖವಾಗಿ ಸಾಗುತ್ತಿದೆ. ಇದರಿಂದ ಮುಖೇಶ್ ಅಂಬಾನಿಯ ಸ್ಥಾನವೂ ಕುಸಿದಿದೆ. ಅವರು ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟವನ್ನು ಕಳೆದುಕೊಂಡಿದ್ದು, ಚೀನಾದ ಅಲಿಬಾಬಾ ಗುಂಪಿನ ಜಾಕ್ ಮಾ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. 

ಕೊರೋನಾ ವೈರಸ್ ಭೀತಿಯಿಂದ ಷೇರು ಮಾರುಕಟ್ಟೆಯಲ್ಲಿ ಅನೇಕ ಬದಲಾವಣೆಗಳಾಗಿವೆ. ಸೋಮವಾರ ರಿಲಯನ್ಸ್ ಕಂಪೆನಿಯ ಷೇರುಗಳಲ್ಲಿ ಕುಸಿತ ಕಂಡಿದೆ.2009 ರ ನಂತರ ಇದೆ ಮೊದಲ ಬಾರಿಗೆ ರಿಲಯನ್ಸ್​ನಲ್ಲಿ ಕುಸಿತ ಅನುಭವಿಸಿದೆ. ಹಾಗಾಗಿ ಒಂದೇ ದಿನಕ್ಕೆ ಅಂಬಾನಿಗೆ ಸುಮಾರು 42,855 ಕೋಟಿ ರೂ ನಷ್ಟವಾಗಿದ್ದು, ಆ ಸ್ಥಾನವನ್ನು ಜಾಕ್ ಮಾ ಪಡೆದುಕೊಂಡಿದ್ದಾರೆ. ಅವರ ಆಸ್ತಿ 44.5 ಬಿಲಿಯಾನ್ ಡಾಲರ್ ಆಗಿದ್ದರೆ ಅಂಬಾನಿ ಆಸ್ತಿ 42 ಬಿಲಿಯಾನ್ ಡಾಲರ್​ಗೆ ಇಳಿದಿದೆ. 2018ರಲ್ಲಿ ಮುಖೇಶ್ ಅಂಬಾನಿ ಏಷ್ಯಾದ ನಂ.1 ಶ್ರೀಮಂತ ಸ್ಥಾನಕ್ಕೇರಿದ್ದರು.

LEAVE A REPLY

Please enter your comment!
Please enter your name here