ಕೊರೋನಾ ವೈರಸ್ ತಡೆಯುವ ಹಿನ್ನೆಲೆ ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ. ಇದರ ಬೆನ್ನಲ್ಲೇ ಈಗ ಆನ್ಲೈನ್ ಶಾಪಿಂಗ್ ಸೈಟ್ಗಳು ಕೂಡ ತಮ್ಮ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ.
ಭಾರತದ ಇ-ಕಾಮರ್ಸ್ ತಾಣಗಳಾದ ಅಮೇಜಾನ್ ಹಾಗೂ ಫ್ಲಿಪ್ಕಾರ್ಟ್ ಆರ್ಡರ್ ಸ್ವೀಕರಿಸುವುದನ್ನು ನಿಲ್ಲಿಸಿವೆ. ಫ್ಲಿಪ್ಕಾರ್ಟ್ ಎಲ್ಲಾ ಸೇವೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡುವುದಾಗಿ ಹೇಳಿದ್ದು, ಅಮೇಜಾನ್ ಯಾವುದೇ ಹೊಸ ಆರ್ಡರ್ಗಳನ್ನು ಸ್ವೀಕರಿಸುವುದಿಲ್ಲ. ಆದರೆ ದಿನಸಿ ಸಾಮಾಗ್ರಿಗಳು, ಹೆಲ್ತ್ಕೇರ್ ಉತ್ಪನ್ನಗಳು ಹಾಗೂ ದಿನನಿತ್ಯದ ಬಳಕೆಯ ವಸ್ತುಗಳನ್ನು ಪೂರೈಕೆ ಮಾಡುತ್ತೇವೆ ಎಂದು ಹೇಳಿದೆ. ಅಲ್ಲದೆ ಕಡಿಮೆ ಪ್ರಾಮುಖ್ಯತೆ ಇಲ್ಲದ ವಸ್ತುಗಳನ್ನು ಆರ್ಡರ್ ಮಾಡಿದ್ದರೆ ಅದನ್ನು ಕ್ಯಾನ್ಸಲ್ ಮಾಡಿ ಹಾಗೂ ಮೊದಲೇ ಹಣ ಪಾವತಿಸಿದ್ದರೆ ಅದನ್ನು ರೀಫಂಡ್ ಮಾಡುತ್ತೇವೆಂದು ಅಮೇಜಾನ್ ತಿಳಿಸಿದೆ.
ಬಿಗ್ ಬ್ಯಾಸ್ಕೆಟ್, ಗ್ರೋಫರ್ಸ್ ಹಾಗೂ ಇತರೆ ಕೆಲವು ಆನ್ಲೈನ್ ಶಾಪಿಂಗ್ ಸೈಟ್ಗಳು ಡೆಲಿವರಿ ಸರ್ವೀಸ್ ಸ್ಥಗಿತಗೊಳಿಸಿದೆ.