Sunday, May 29, 2022
Powertv Logo
Homeದೇಶಕೇಂದ್ರ ಸರ್ಕಾರದಿಂದ ಲಾಕ್​ಡೌನ್ ಸಡಿಲಿಕೆಗೆ ಆದೇಶ :ಹೊಸ ಆದೇಶದಲ್ಲಿ ಏನಿದೆ?

ಕೇಂದ್ರ ಸರ್ಕಾರದಿಂದ ಲಾಕ್​ಡೌನ್ ಸಡಿಲಿಕೆಗೆ ಆದೇಶ :ಹೊಸ ಆದೇಶದಲ್ಲಿ ಏನಿದೆ?

ಬೆಂಗಳೂರು: ಮೇ 3 ರವರೆಗೆ ಆದೇಶವಾಗಿರುವ ಲಾಕ್​ಡೌನ್ ಅನ್ನು ಹಂತ ಹಂತವಾಗಿ ಸಡಿಲಿಕೆ ಮಾಡುತ್ತಿದ್ದು, ಕೇಂದ್ರ ಸರ್ಕಾರದಿಂದ ಮತ್ತೊಂದು ಪರಿಷ್ಕೃತ ಮಾರ್ಗಸೂಚಿ ಬಿಡುಗಡೆಯಾಗಿದೆ.

ಕೇಂದ್ರದಿಂದ ಲಾಕ್​ಡೌನ್ ಮತ್ತಷ್ಟು ಸಡಿಲಿಕೆ ಮಾಡಿದ್ದು, ಗ್ರೀನ್ ಝೋನ್​​ಗಳಲ್ಲಿ ನಿಯಮಗಳ ಸಡಿಲಿಕೆ ಮಾಡಲಾಗಿದೆ. ಇದೀಗ ಕೇಂದ್ರದಿಂದ ಬಿಡುಗಡೆಯಾಗಿರುವ ಮಾರ್ಗಸೂಚಿಗಳು ರೆಡ್​ಝೋನ್​ಗಳಿಗೆ ಅನ್ವಯವಾಗುವುದಿಲ್ಲ. ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು, ಮುನ್ಸಿಪಲ್, ಪುರಸಭೆಗಳ ಮಿತಿಯಲ್ಲಿರುವ ಅಂಗಡಿಗಳನ್ನು ತೆರೆಯಬುಹುದು. ಮಾರುಕಟ್ಟೆ ಸಂಕೀರ್ಣಗಳಲ್ಲೂ ಅಂಗಡಿಗಳನ್ನು ತೆರೆಯಬಹುದು. ಆದರೆ ಅಂಗಡಿಗಳಲ್ಲಿ ಶೇ.50 ರಷ್ಟು ಕಾರ್ಮಿಕರೊಂದಿಗೆ ಕಾರ್ಯ ನಿರ್ವಹಿಸಬೇಕು. ಕಾರ್ಯ ನಿರ್ವಹಿಸುವ ಪ್ರತಿಯೊಬ್ಬ ಕಾರ್ಮಿಕನು ಮಾಸ್ಕ್, ಗ್ಲೌಸ್ ಧರಿಸಬೇಕು. ಇನ್ನು ವ್ಯವಹರಿಸಬೇಕಾದ್ರೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇನ್ನು ಸಿಂಗಲ್ ಹಾಗೂ ಮಲ್ಟಿ-ಬ್ರಾಂಡ್ ಮಾಲ್‌ಗಳನ್ನು ತೆರೆಯಲು ಅನುಮತಿ ಇಲ್ಲ.

LEAVE A REPLY

Please enter your comment!
Please enter your name here

- Advertisment -

Most Popular

Recent Comments