ಭಾರತ ಚಿತ್ರರಂಗದಿಂದ ಪಾಕಿಸ್ತಾನಿ ಕಲಾವಿದರು ಬ್ಯಾನ್​..!

0
324

ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನದ ನಟ, ನಟಿಯರು, ಕಲಾವಿದರನ್ನು ಸಂಪೂರ್ಣ ಬ್ಯಾನ್​ ಮಾಡಿ ಅಖಿಲ ಭಾರತ ಚಿತ್ರ ಕಲಾವಿದರ ಸಂಘ ನೊಟೀಸ್ ಹೊರಡಿಸಿದೆ.

ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ 40 ಭಾರತೀಯ ಯೋಧರ ಸಾವಿಗೆ ಕಾರಣವಾದ ಉಗ್ರರ ದಾಳಿಯನ್ನು ಖಂಡಿಸಿ ಚಿತ್ರಕಲಾವಿದರ ಸಂಘ ಈ ತೀರ್ಮಾನವನ್ನು ಹೇಳಿದೆ. ಪಾಕಿಸ್ತಾನದ ಕಲಾವಿದರೊಂದಿಗೆ ಕೆಲಸ ಮಾಡುವ ಸಂಸ್ಥೆಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಅಂತ ಚಿತ್ರ ಕಲಾವಿದರ ಸಂಘದ ಕಾರ್ಯದರ್ಶಿ ರೋನಕ್​ ಸುರೇಶ್ ಜೈನ್ ಹೇಳಿದ್ದಾರೆ.

“ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಮ್ಮ ಯೋಧರ ಮೇಲೆ ನಡೆದ ಉಗ್ರರ ದಾಳಿಯನ್ನು ನಾವು ಖಂಡಿಸುತ್ತೇವೆ. ಹುತಾತ್ಮ ಯೋಧರ ಕುಟುಂಬಗಳ ಜೊತೆ ನಾವು ನಿಲ್ಲುತ್ತೇವೆ. ಇಂತಹ ಅಮಾನವೀಯ ಕೃತ್ಯದ ಎದುರಾಗಿ ನಾವು ಸದಾ ನಮ್ಮ ದೇಶದ ಜೊತೆ ನಿಲ್ಲುತ್ತೇವೆ. ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿರುವ ನಟ, ನಟಿಯರು, ಕಲಾವಿದರನ್ನು ನಾವು ಅಧಿಕೃತವಾಗಿ ಬಹಿಷ್ಕರಿಸುತ್ತಿದ್ದೇವೆ. ಹೀಗಿದ್ದೂ ಯಾವುದೇ ಸಂಘಟನೆ ಪಾಕಿಸ್ತಾನಿ ಕಲಾವಿದರೊಂದಿಗೆ ಕೆಲಸ ಮಾಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ದೇಶವೇ ಮೊದಲು, ನಾವು ದೇಶದೊಂದಿಗೆ ನಿಲ್ಲುತ್ತೇವೆ” ಅಂತ ಚಿತ್ರ ಕಲಾವಿದರ ಸಂಘಟನೆ ನೊಟೀಸ್​ ಬಿಡುಗಡೆ ಮಾಡಿದೆ.

LEAVE A REPLY

Please enter your comment!
Please enter your name here