Monday, August 15, 2022
Powertv Logo
Homeವಿದೇಶಕ್ರಿಕೆಟ್​​​​ ಜಗತ್ತಿಗೆ ಕೇರಂ ಬಾಲ್​ ಪರಿಚಯಿಸಿದ್ದ ಅಜಂತಾ ಮೆಂಡಿಸ್​​ ವಿದಾಯ..!

ಕ್ರಿಕೆಟ್​​​​ ಜಗತ್ತಿಗೆ ಕೇರಂ ಬಾಲ್​ ಪರಿಚಯಿಸಿದ್ದ ಅಜಂತಾ ಮೆಂಡಿಸ್​​ ವಿದಾಯ..!

ಕೊಲಂಬೊ:  ಕೇರಂ ಬಾಲ್ ಸ್ಪಿನರ್ ಖ್ಯಾತಿಯ ಶ್ರೀಲಂಕಾದ ಕ್ರಿಕೆಟಿಗ ಅಜಂತಾ ಮೆಂಡಿಸ್​ ತಮ್ಮ ಕ್ರಿಕೆಟ್​ ಕೆರಿಯರ್​ಗೆ ಗುಡ್​ ಬೈ ಹೇಳಿದ್ದಾರೆ.

ವಿಶ್ವ ಕ್ರಿಕೆಟ್​​ಗೆ ಕೇರಂ ಬಾಲ್​​ ಎಸೆತವನ್ನು ಪರಿಚಯಿಸಿದ್ದ ಅಜಂತಾ ಮೆಂಡಿಸ್​​ ತಮ್ಮ ವಿಭಿನ್ನ ಸ್ಟೈಲ್​ ಬೌಲಿಂಗ್​ ಮೂಲಕ ಗಮನಸೆಳೆದಿದ್ರು. 2008 ಏಪ್ರಿಲ್​ನಲ್ಲಿ ವಿಂಡೀಸ್​ ವಿರುದ್ಧ ಏಕದಿನ ಪಂದ್ಯದ ಮೂಲಕ ವರ್ಲ್ಡ್​​ ಕ್ರಿಕೆಟ್​ಗೆ ಎಂಟ್ರಿ ಕೊಟ್ಟ ಅವರು, ಪದಾರ್ಪಣೆ ಪಂದ್ಯದಲ್ಲೇ 39 ರನ್​ಗೆ 3 ವಿಕೆಟ್​​ ಪಡೆದಿದ್ರು. ಆದರೆ, ಅವರ ನಿಜವಾದ ಪ್ರತಿಭೆ ಸಾಬೀತಾಗಿದ್ದು ಬಳಿಕ ನಡೆದ ಏಷ್ಯಾಕಪ್​ನಲ್ಲಿ. ಕರಾಚಿಯಲ್ಲಿ ನಡೆದ ಭಾರತ ವಿರುದ್ಧದ ಫೈನಲ್​ ಪಂದ್ಯದಲ್ಲಿ ಭಾರತದ ಘಟಾನುಘಟಿ ಬ್ಯಾಟ್ಸ್​​ಮನ್​​ಗಳು ಮೆಂಡಿಸ್​​ ಬೌಲಿಂಗ್​ ಎದುರು ಪತರುಗುಟ್ಟಿದ್ರು. ಕೇವಲ 13 ರನ್​ ನೀಡಿ 6 ವಿಕೆಟ್​​ಗಳನ್ನು ಕಬಳಿಸಿದ್ದ ಅವರು ಶ್ರೀಲಂಕಾಕ್ಕೆ ಏಷ್ಯಾ ಕಪ್​​ ತಂದುಕೊಟ್ರು.

ಟೆಸ್ಟ್​​ ಕ್ರಿಕೆಟ್​​ನಲ್ಲೂ ಅದ್ಭುತ ಸಾಧನೆ ಮಾಡಿರುವ ಅಜಂತಾ ಮೆಂಡಿಸ್​​ ಭಾರತದ ವಿರುದ್ಧವೇ ತನ್ನ ಮೊದಲ ಟೆಸ್ಟ್​​ ಆಡಿದ್ರು. ಫಸ್ಟ್​​ ಮ್ಯಾಚ್​​ನಲ್ಲೇ 8 ವಿಕೆಟ್​​ ಪಡೆದ ಅವರು 3 ಪಂದ್ಯಗಳ ಸರಣಿಯಲ್ಲಿ ಬರೋಬ್ಬರಿ 26 ವಿಕೆಟ್​​ಗಳನ್ನು ಪಡೆದಿದ್ರು. ಅಷ್ಟೇ ಅಲ್ಲದೇ, ಶ್ರಿಲಂಕಾ ಸರಣಿ ಜಯಿಸುವಲ್ಲಿ ನೆರವಾದ್ರು. ಇನ್ನು ಟಿ-20 ಕ್ರಿಕೆಟ್​​ನಲ್ಲಂತೂ ಅವರ ಕೈಚಳಕ ಗಮನಾರ್ಹ. ಅಜಂತಾ ಮೆಂಡಿಸ್​​ ಟಿ-20 ಫಾರ್ಮೆಟ್​ನಲ್ಲಿ ಎರಡು ಬಾರಿ 6 ವಿಕೆಟ್​​ಗಳ ಗೊಂಚಲನ್ನು ಪಡೆದ ಏಕೈಕ ಆಟಗಾರಾಗಿದ್ದಾರೆ. ಇನ್ನು ಅವರು ತನ್ನ ಕೊನೆಯ ಪಂದ್ಯವನ್ನು 2015ರಲ್ಲಿ ವೆಸ್ಟ್​​ ಇಂಡೀಸ್​​ ವಿರುದ್ಧ ಆಡಿದ್ರು. ಒಡಿಐಯಲ್ಲಿ 87 ಮ್ಯಾಚ್​​ನಲ್ಲಿ 152 ವಿಕೆಟ್ಸ್​, 39 ಟಿ-20ಯಲ್ಲಿ 66 ವಿಕೆಟ್​​ ಹಾಗೂ 19 ಟೆಸ್ಟ್​​ ಮ್ಯಾಚ್​ಗಳಲ್ಲಿ 70 ವಿಕೆಟ್​​ಗಳನ್ನು ಪಡೆದಿದ್ದಾರೆ.

4 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments