Home ಸಿನಿ ಪವರ್ ಸ್ಯಾಂಡಲ್ ವುಡ್ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾಗೂ ಲೈಂಗಿಕ ಕಿರುಕುಳ ಆಗಿತ್ತಂತೆ..!

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾಗೂ ಲೈಂಗಿಕ ಕಿರುಕುಳ ಆಗಿತ್ತಂತೆ..!

ಮೀ ಟೂ ಬಿಸಿ ಸ್ಯಾಂಡಲ್ ವುಡ್‍ಗೂ ತಟ್ಟಿದೆ. ನಿನ್ನೆಯಷ್ಟೇ ನಟಿ ಶ್ರುತಿ ಹರಿಹರನ್ ಸೌತ್ ಇಂಡಿಯಾದ ಪಾಪ್ಯುಲರ್ ಆ್ಯಕ್ಟರ್ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಇದೀಗ ಅರ್ಜುನ್ ಸರ್ಜಾ ಅವರ ಮಗಳು ನಟಿ ಐಶ್ವರ್ಯ ಸರ್ಜಾ ಕೂಡ ಲೈಂಗಿಕ ಕಿರುಕುಳ ಅನುಭವಿಸಿದ್ದಾರೆ ಅನ್ನೋ ವಿಷ್ಯ ಬೆಳಕಿಗೆ ಬಂದಿದೆ.

ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿರೋ ಶ್ರುತಿ ಬೆಂಬಲಕ್ಕೆ ಒಂದಿಷ್ಟು ಮಂದಿ ನಿಂತಿದ್ದಾರೆ.  ಕೆಲವರು ಶ್ರುತಿ ಬಿಟ್ಟಿ ಪ್ರಚಾರಕ್ಕೆ ಇಂಥಾ ಆರೋಪ ಮಾಡ್ತಿದ್ದಾರೆ ಅಂತ ಗರಂ ಆಗಿದ್ದಾರೆ. ಈ ಬಗ್ಗೆ ಅರ್ಜುನ್ ಸರ್ಜಾ ಮಗಳು ಹಾಗೂ ನಟಿ ಐಶ್ವರ್ಯ ಮಾತಾಡಿದ್ದು, ಈ ವೇಳೆ ತಾವು ಅನುಭವಿಸಿದ್ದ ಕಿರುಕುಳವನ್ನೂ ಬಾಯ್ಬಿಟ್ಟಿದ್ದಾರೆ.

ನಂಗೂ  ಕೆಲ ವರ್ಷಗಳ ಹಿಂದೆ ಇದೇ ರೀತಿ ಅನುಭವವಾಗಿತ್ತು.  ನಂಗೆ ಕಿರುಕುಳದ ಅನುಭವ ಹೇಗಿರುತ್ತೆ ಅಂತ ಗೊತ್ತು. ನಿಜವಾಗಿಯೂ  ಆ ಕೆಟ್ಟ ಅನುಭವವಾಗಿದ್ದರೆ ಶ್ರುತಿ ಆಗಲೇ ಆ ಬಗ್ಗೆ ಹೇಳ್ಬೇಕಿತ್ತು . ಲೈಂಗಿಕ ಶೋಷಣೆ ಮಾಡಿದ ವ್ಯಕ್ತಿಯ ಮುಖವನ್ನೂ ಕೂಡ ನೋಡಲು ಅಸಹ್ಯ ಅನ್ಸುತ್ತೆ. ಹೀಗಿರುವಾಗ ಶ್ರುತಿ ಮೂವಿ ಶೂಟಿಂಗ್ ಎಲ್ಲಾ ಮುಗಿಸಿದ್ದಾರೆ. ಅಷ್ಟೇ ಅಲ್ದೆ ಶೂಟಿಂಗ್ ಮುಗಿದ ಬಳಿಕ ನಂಗೆ ಸಿಕ್ಕಾಗ ಅರ್ಜುನ್ ಸರ್ಜಾ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಿಮ್ಮ ತಂದೆ ನಂಗೆ ತುಂಬಾ ಇಷ್ಟವಾದ ಆ್ಯಕ್ಟರ್ ಅಂತ ಶ್ರುತಿ ನನ್ನತ್ರ ಹೇಳಿದ್ದರು. ನನ್ನ ತಂದೆಯಿಂದ ಶ್ರುತಿ ನಿಜಕ್ಕೂ ಕಿರುಕುಳ ಅನುಭವಿಸಿದ್ದರೆ ತಾನು ಅವರ ಬಿಗ್ ಫ್ಯಾನ್ ಅಂತ ನನ್ನ ಬಳಿ ಯಾಕೆ ಹೇಳಿಕೊಳ್ತಿದ್ರು ಅಂತ ಐಶ್ವರ್ಯ ಪ್ರಶ್ನಿಸಿದ್ದಾರೆ.

 

 

LEAVE A REPLY

Please enter your comment!
Please enter your name here

- Advertisment -

Most Popular

ಮುತ್ತೋಡಿ ರಕ್ಷಿತಾರಣ್ಯಕ್ಕೆ ನಟ ದರ್ಶನ್ ಭೇಟಿ

ಚಿಕ್ಕಮಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಸಫಾರಿ ಮಾಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ರಕ್ಷಿತಾರಣ್ಯಕ್ಕೆ ನಟ ದರ್ಶನ್ ಭೇಟಿ. ಭದ್ರಾ ರಕ್ಷಿತಾರಣ್ಯದಲ್ಲಿ ಸಫಾರಿ ನಡೆಸಿದ ಚಾಲೆಂಜಿಂಗ್ ಸ್ಟಾರ್. ಚಾಲೆಂಜಿಂಗ್ ಸ್ಟಾರ್ ಜೊತೆ ರಕ್ಷಿತಾರಣ್ಯದ...

ಸೋಮವಾರದ ನಂತರ ಮುಷ್ಕರ ಮತ್ತಷ್ಟು ತೀವ್ರಗೊಳ್ಳಲಿದೆ : ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು : ಸಾರಿಗೆ ನೌಕರರ ಮುಷ್ಕರ ಮಂಕಾದಂತೆ ಕಾಣ್ತಿದೆ ಎನ್ನುವಷ್ಟರಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದಾರೆ. ಸೋಮವಾರದ ನಂತರ ಮುಷ್ಕರ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ. 1 ಲಕ್ಷಕ್ಕೂ ಹೆಚ್ಚು...

ನಿಖಿಲ್ ಕುಮಾರ್ ಸ್ವಾಮಿಗೂ ಕೊರೋನಾ ಪಾಸಿಟಿವ್

ಬೆಂಗಳೂರು : ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಅವರಿಗೂ ಕೊರೋನಾ ಪಾಸಿಟಿವ್ ವರದಿಯಾಗಿತ್ತು ಈಗ ನಿಖಿಲ್ ಅವರಿಗೂ ಪಾಸಿಟಿವ್ ಬಂದಿದೆ. ಇಂದು ನಿಖಿಲ್ ಅವರ ಮೊದಲನೇ ವಾರ್ಷಿಕೋತ್ಸವವೂ ಆಗಿದೆ.  ನಾನು ಇಂದು...

ವಿವಾಹಕ್ಕೆ 100 – 200, ಅಂತ್ಯಸಂಸ್ಕಾರಕ್ಕೆ 25 – 50 ಜನ ಮಾತ್ರ

ಬೆಂಗಳೂರು : ಸಿಎಂ ಯಡಿಯೂರಪ್ಪನವರು ಕೊರೋನಾ ಕಾರಣದಿಂದ ಆಸ್ಪತ್ರೆಗೆ ದಾಖಲಾದ ಕಾರಣ ಸಚಿವ ಸುಧಾಕರ್ ಮತ್ತು ಬೊಮ್ಮಾಯಿ ಅವರು ಸಭೆ ನಡೆಸಿ ರಾಜ್ಯದಲ್ಲಿ ಇನ್ಮೇಲೆ ಟಫ್ ರೂಲ್ಸ್ ಶುರುವಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ.  ಕೊವಿಡ್ ನಿಯಮ...

Recent Comments