ಬಾನಂಗಳದಲ್ಲಿ ರಫೇಲ್ ಅಬ್ಬರ – ಲೋಹದ ಹಕ್ಕಿಗಳ ಕಲರವಕ್ಕೆ ಅದ್ದೂರಿ ಚಾಲನೆ

0
164

ಬೆಂಗಳೂರು : ಕಾತುರದಿಂದ ಎದುರು ನೋಡುತ್ತಿದ್ದ 2019ರ ಏರ್- ಶೋಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ ನೀಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಕೇಂದ್ರ ಸಚಿವರಾದ ಸುರೇಶ್ ಪ್ರಭು, ಡಿ.ವಿ ಸದಾನಂದಗೌಡ ಮತ್ತಿತರರು ಉಪಸ್ಥಿತರಿದ್ದರು.
ಗಾಳಿಯನ್ನು ಸೀಳಿಕೊಂಡು ಬಿಟ್ಟ ಬಾಣದಂತೆ ಆಗಸಕ್ಕೆ ನುಗ್ಗುವ ಜೆಟ್, ಕಣ್ಣ ಮುಚ್ಚಿ ತಗೆಯುವಷ್ಟರಲ್ಲಿ ಮಂಗ ಮಾಯವಾಗುವ ಯುದ್ಧ ವಿಮಾನಗಳು, ರಂಗು ರಂಗು ಹೊಗೆ ಸೂಸುತ್ತ ಬಾನಂಗಳದಲ್ಲಿ ಚಿತ್ತಾರ ಮೂಡಿಸುವ ಪುಟಾಣಿ ಪಂಟರ್ ಗಳು, ಇನ್ನು ನಾವೇನು ಕಮ್ಮಿಯಂತ ಶಿಸ್ತಿನ ಕಾವಾಯತ್ತು ಮಾಡುವ ಹೆಲಿಕಾಪ್ಟರ್ ಗಳು, ಅಬ್ಬಾ.. ಎತ್ತಿದ ತಲೆ ಕೆಳಗಿಳಿಸದೆ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಿನ್ನಾಟ ನೋಡಲು ಜನ ಕಾತುರರಾಗಿದ್ದರು. ಇಂದಿನಿಂದ 4 ದಿನಗಳ ಕಾಲ ಲೋಹದ ಹಕ್ಕಿಗಳ ಹಾರಾಟದ ಹಬ್ಬವನ್ನು ಕಣ್ತುಂಬಿಕೊಳ್ಳಹುದು.
ಇಂದಿನಿಂದ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ 2019 ಶುರುವಾಗಿದೆ. 8 ಲಕ್ಷಕ್ಕೂ ಅಧಿಕ ಜನ ಏರ್ ಶೋಗೆ ಆಗಮಿಸ್ತಾರೆ ಅನ್ನೋ ನಿರೀಕ್ಷೆಯಿದೆ.
ಈ ಬಾರಿಯ ಏರ್ – ಶೋನಲ್ಲಿ ಮಹಿಳಾ ಪೈಲಟ್ ಗಳೂ ಸಹ ಭಾಗವಹಿಸಲಿದ್ದು, ಆಗಸದಲ್ಲಿ ವಿಮಾನಗಳನ್ನ ಹಾರಿಸಲು ರೆಡಿಯಾಗಿದ್ದಾರೆ. ಬ್ರಹ್ಮೋಸ್, ತೇಜಸ್, ರಫೆಲ್ ಹೀಗೆ ಯುದ್ದ ವಿಮಾನಗಳ ಹೆಸರುಗಳನ್ನು ಕೇಳಿ ಬಾಯಿ ಬಿಡುತ್ತಿದ್ದವರು ಈ ಬಾರಿ ಅವುಗಳನ್ನೆಲ್ಲ ಏರ್‌ ಶೋನಲ್ಲಿ ಕಣ್ತುಂಬಿಕೊಳ್ಳಬಹುದು.
ಇದರ ಮಧ್ಯೆ, ನಿನ್ನೆ ನಡೆದ ತಾಲೀಮಿನಲ್ಲಿ ದುರಂತವೊಂದು ಸಂಭವಿಸಿದೆ. ಪರಸ್ಪರ ಡಿಕ್ಕಿ ಹೊಡೆದ ಎರಡು ವಿಮಾನಗಳು ವಾಯುನೆಲೆಯ ಪಕ್ಕದ ಇಸ್ರೋ ಬಡಾವಣೆಯಲ್ಲಿ ಧರೆಗೆ ಬಿದ್ದಿವೆ. ಒಂದು ವಿಮಾನ ಬಡಾವಣೆಯ ಮನೆಗೆ ತಾಕಿ ಬಿದ್ರೆ, ಮತ್ತೊಂದು ವಿಮಾನ ಅಲ್ಲಿಯೇ 200 ಮೀಟರ್ ದೂರದ ಶೆಡ್​ ಪಕ್ಕದಲ್ಲಿ ಬಿದ್ದು, ಹೊತ್ತಿ ಉರಿದಿದೆ. ಈ ದುರಂತದಲ್ಲಿ ಸಾಹಿಲ್​ ಗಾಂಧಿ ಎನ್ನುವ ಪೈಲೆಟ್​ ಮೃತಪಟ್ಟಿದ್ದಾರೆ. ಪೈಲೆಟ್ ವಿಟಿ ಶೆಳ್ಕೆ ಹಾಗೂ ಸ್ಕಾಡರ್ ಲೀಡರ್ ತೇಜಶ್ವರ್ ಸಿಂಗ್ ಗಂಭೀರವಾಗಿ ಗಾಯಗೊಂಡು ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ದುರಂತ ಏರ್‌ ಶೋ ಮೇಲೆ ಕಪ್ಪು ಛಾಯೆಯನ್ನ ಮೂಡಿಸಿದ್ದು, ಮುಂದೆ ಇಂಥಾ ದುರಂತ ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ ಅಷ್ಟೇ.

LEAVE A REPLY

Please enter your comment!
Please enter your name here