ದೆಹಲಿ : ಕೊರೋನಾ ಸೋಂಕಿತರು, ಶಂಕಿತರನ್ನು ಪತ್ತೆ ಹಚ್ಚಲು ಮತ್ತು ಅವರ ಚಲನವಲನದ ಮೇಲೆ ನಿಗಾವಹಿಸಲು ನಾಗ್ಪುರ ಸಂಶೋಧನಾ ತಂಡ ಸ್ಮಾರ್ಟ್ ರಿಸ್ಟ್ ಬ್ಯಾಂಡ್ ಪರಿಚಯಿಸಿದೆ. ಕಂಟೈನ್ಮೆಂಟ್ ಝೋನ್ಗಳಲ್ಲಿನ ಕೊರೋನಾ ಸೋಂಕಿತರು ಮತ್ತು ಶಂಕಿತರ ಮೇಲೆ ಗಮನವಿಡಲು ಈ ಬ್ಯಾಂಡ್ ಸಹಕಾರಿ ಆಗಲಿದೆ ಎನ್ನಲಾಗಿದೆ.
ಜೋಧ್ಪುರ್ ಐಐಟಿ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಸಹಯೋಗದಲ್ಲಿ ನಾಗ್ಪುರದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಈ ಸ್ಮಾರ್ಟ್ ರಿಸ್ಟ್ ಬ್ಯಾಂಡನ್ನು ವಿನ್ಯಾಸಗೊಳಿಸಿದೆ. ಕಂಟೈನ್ ವಲಯದಲ್ಲಿ ಯಾವ್ದೇ ನಿಯಮಗಳು ಉಲ್ಲಂಘನೆಯಾದ್ರೂ ಅದು ಸರಿಯಾದ ಸಮಯದಲ್ಲಿ ಎಚ್ಚರಿಕೆ ನೀಡುತ್ತೆ ಅಂತ ನಾಗ್ಪುರ ಏಮ್ಸ್ನ ಶರೀರಶಾಸ್ತ್ರದ ಸಹಾಯ ಪ್ರಾಧ್ಯಾಪಕ ಡಾ.ಪ್ರಥಮೇಶ್ ಕಾಂಬ್ಲೆ ತಿಳಿಸಿದ್ದಾರೆ. ಇನ್ನು ಈ ರಿಸ್ಟ್ ಬ್ಯಾಂಡ್ ಶೀಘ್ರದಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.
Dr Prathamesh Kamble, Assistant Professor, Physiology, AIIMS Nagpur says, "This device can provide mobile free operation, using a geo-fencing technology which will provide real-time alert on any breach in the quarantine zone." https://t.co/ICnU6FrkP3
— ANI (@ANI) July 23, 2020