ಕಾರು ಅಪಘಾತದಲ್ಲಿ ಎಐಎಡಿಎಂಕೆ ಸಂಸದ ನಿಧನ

0
239

ಚೆನ್ನೈ: ಎಐಎಡಿಎಂಕೆ ಸಂಸದ ಎಸ್. ರಾಜೇಂದ್ರನ್​(62) ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಚೆನ್ನೈನಿಂದ 167 ಕಿ.ಮೀ ದೂರದ ವಿಲ್ಲುಪುರಂನಲ್ಲಿ ಇಂದು ಬೆಳಗ್ಗೆ ಅಪಘಾತ ನಡೆದಿದೆ. ವಿಲ್ಲುಪುರಂ ಕ್ಷೇತ್ರ ಪ್ರತಿನಿಧಿಸಿದ್ದ ಎಸ್​ ರಾಜೇಂದ್ರನ್​ ಅವರು ಡ್ರೈವರ್​ ಜೊತೆ ತಿಂಡಿವಾನಂಗೆ ಪ್ರಯಾಣಿಸುತ್ತಿದ್ದರು. ಈ ನಡುವೆ ಅಪಘಾತ ನಡೆದಿದೆ. ರಾತ್ರಿ ಡಿನ್ನರ್ ಮುಗಿಸಿ ಮನೆಗೆ ತೆರಳುವ ವೇಳೆ ಅಪಘಾತಗೊಂಡು ವಿಧಿವಶರಾಗಿದ್ದಾರೆ. ಇಂದು ಬೆಳಗ್ಗೆ 6 ಗಂಟೆಗೆ ಅವಘಡ ಸಂಭವಿಸಿದೆ ಅಂತ ಹೇಳಲಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ರಾಜೇಂದ್ರನ್​ ಅವರ ತಲೆ ಹಾಗೂ ಎದೆಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ರಾಜೇಂದ್ರನ್ ವಿಧಿವಶರಾಗಿದ್ದಾರೆ.

LEAVE A REPLY

Please enter your comment!
Please enter your name here