ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ಶಿವಮೊಗ್ಗ, ಬೂದಿ ಮುಚ್ಚಿದ ಕೆಂಡದಂತಿದ್ದು, ಹರ್ಷನ ಕೊಲೆಗೆ ಸೇಡು ತೀರಿಸಿಕೊಳ್ಳುವ ಪ್ರಕರಣವೊಂದು ಬಯಲಾಗಿದೆ. ಹರ್ಷನ ಕೊಲೆ ಬಳಿಕ ಪೋಟೋ ತೆಗೆಯಲು ಹೋಗಿದ್ದ ಖಾಸಗಿ ಪತ್ರಿಕೆಯ ಛಾಯಾಗ್ರಾಹಕ ಮೊಹಮದ್ ರಫಿ ರಫಿ ಮೇಲೆ ಮಾರಾಣಾಂತಿಕ ಹಲ್ಲೆಯಾಗಿದೆ.ಸುಮಾರು 15ಕ್ಕೂ ಹೆಚ್ಚು ಯುವಕರು, ಮಚ್ಚು, ಲಾಂಗು, ಚಾಕುವಿನಿಂದ ರಫಿ ಮೇಲೆ ಮಾರಣಾಂತಿಕವಾಗಿ ಸುಮಾರು 40 ಕಡೆ ಹಲ್ಲೆ ನಡೆಸಲಾಗಿದೆ.ಇನ್ನೇನು ರಫಿ ಸತ್ತ ಎಂದು ದುಷ್ಕರ್ಮಿಗಳು ಬಿಟ್ಟು ಹೋಗಿದ್ದರು.ಬಳಿಕ ಚೇತರಿಸಿಕೊಂಡ ರಫಿ ದೂರು ದಾಖಲಿಸಿದ್ದಾರೆ.ಈ ವೇಳೆ ಅರೆಸ್ಟ್ ಆದ ಯುವಕ ಜೆಟ್ಲಿ ಅಲ್ಲಾವುದ್ದೀನ್ ಎಂಬಾತನ ಕೊಲೆಗೆ ಸ್ಕೆಚ್ ರೂಪಿಸಲಾಗಿದೆ ಎಂದು ಸ್ಫೋಟಕ ಸತ್ಯ ಹೊರ ಹಾಕಿದ್ದಾನೆ. ಈ ಮೂಲಕ ಮತ್ತೊಮ್ಮೆ ಶಿವಮೊಗ್ಗವನ್ನು ಕೋಮು ದಳ್ಳುರಿಗೆ ದೂಡುವ ಪ್ರಯತ್ನ ನಡೆಸಲಾಗುತ್ತಿದೆ ಎಂಬ ಭಯಾನಕ ಅಂಶ ಹೊರಬಿದ್ದಿದೆ.
ಮತ್ತೊಂದು ಕೋಮುಗಲಭೆ ಜರುಗುವುದನ್ನು ಪೊಲೀಸರು ನಿಷ್ಕ್ರಿಯಗೊಳಿಸಿದ್ದಾರೆ.ಆರೋಪಿ ಜೆಟ್ಲಿ ಮಾಹಿತಿ ಮೇರೆಗೆ 13 ಜನರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ. ರಾಖಿ, ವಿಶ್ವಾಸ್, ಪ್ರವೀಣ್, ಕಟ್ಟೆ, ಕೋಟಿ, ಕುಲ್ಡಾ, ಅಪ್ಪು, ಸಚಿನ್ ರಾಯ್ಕರ್ ಸೇರಿ 13 ಜನರನ್ನು ಆರೋಪಿಗಳಾಗಿಸಲಾಗಿದೆ. ಇವರಲ್ಲಿ ಬಹುತೇಕರನ್ನು ಈಗಾಗಲೇ, ಬಂಧಿಸಲಾಗಿದೆ.ಆದರೆ,ಯುಪಿಎಐ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿಕೊಳ್ಳಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.ಜೊತೆಗೆ, ಇವರ ಹಿಂದೆ ಯಾರಿದ್ದಾರೆ ಎಂಬುದು ಕೂಡ ಬಯಲಾಗಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
ಒಟ್ಟಿನಲ್ಲಿ ಶಾಂತವಾಗಿರುವ ಶಿವಮೊಗ್ಗವನ್ನು ಮತ್ತೆ ಕೋಮು ಸಂಘರ್ಷಕ್ಕೆ ಕಾರಣವನ್ನಾಗಿಸಲು, ಪ್ರಯತ್ನಿಸುತ್ತಿರುವುದು, ಮಾತ್ರ ದುರಂತ. ಹಿಂದುಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಸಚಿನ್ ರಾಯ್ಕರ್ ವಿರುದ್ಧ ಕೂಡ ದೊಡ್ಡಪೇಟೆ ಪೊಲೀಸರು ಎಫ್.ಐ.ಆರ್ ದಾಖಲಿಸಿರುವುದು, ಈ ಕೇಸ್ ಮತ್ತಷ್ಟು ಸ್ಟ್ರಾಂಗ್ ಆಗಲು ಕಾರಣವಾಗಿರುವುದಂತೂ ಸುಳ್ಳಲ್ಲ.