Home ದೇಶ-ವಿದೇಶ ಟಿಕ್​ ಟಾಕ್ ಆಯ್ತು ಈಗ ಅಲಿಬಾಬಾ ಮೇಲೆ ಟ್ರಂಪ್ ಕಣ್ಣು..!

ಟಿಕ್​ ಟಾಕ್ ಆಯ್ತು ಈಗ ಅಲಿಬಾಬಾ ಮೇಲೆ ಟ್ರಂಪ್ ಕಣ್ಣು..!

ವಾಷಿಂಗ್ಟನ್ : ಟಿಕ್ ಟಾಕ್ ಆಯ್ತು,  ಇದೀಗ ಇ- ಕಾಮರ್ಸ್​​ನ ದೈತ್ಯ ಎಂದು ಕರೆಸಿಕೊಂಡಿರುವ ಅಲಿಬಾಬಾ ಮೇಲೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಕಣ್ಣಿಟ್ಟಿದ್ದಾರೆ. ದೇಶದಲ್ಲಿ ಟಿಕ್​​ ಟಾಕ್​ ಗೆ ನಿರ್ಬಂಧ ಹೇರಿರುವ ಟ್ರಂಪ್, ಅಲಿಬಾಬಾ ಸೇರಿದಂತೆ ಚೀನಾ ಒಡೆತನದ ಬೇರೆ ಬೇರೆ ಕಂಪನಿಗಳ ಆ್ಯಪ್​ ಗಳನ್ನು ನಿಷೇಧಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಭಾರತ ಟಿಕ್ ಟಾಕ್ ಸೇರಿದಂತೆ ಚೀನಾದ ಪ್ರಮುಖ ಆ್ಯಪ್​ಗಳನ್ನು ನಿಷೇಧಿಸಿದ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಟ್ರಂಪ್ ತಾವು ಕೂಡ ತಮ್ಮ ದೇಶದಲ್ಲಿ ಟಿಕ್ ಟಾಕ್ ಬ್ಯಾನ್ ಮಾಡುವುದಾಗಿ ಘೋಷಿಸಿದ್ದರು. ಇದೀಗ ಟಿಕ್ ಟಾಕ್ ಮಾತ್ರವಲ್ಲದೆ ಬೈಟ್ ಡ್ಯಾನ್ಸ್ ಹಾಗೂ ಅಲಿಬಾಬಾ ಸೇರಿದಂತೆ ಚೀನಾದ ಎಲ್ಲಾ ಆ್ಯಪ್​ಗಳನ್ನು ನಿಷೇಧ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಟಿಕ್‌ಟಾಕ್ ಜನರ ವೈಯುಕ್ತಿಕ ಮಾಹಿತಿಯನ್ನು ಪಡೆದುಕೊಳ್ಳುತ್ತದೆ. ಭಾರತವು ಕೂಡ ಈ ಅಪ್ಲಿಕೇಷನ್‌ನಿಂದ ದೇಶದ ಭದ್ರತೆಗೆ ದಕ್ಕೆಯುಂಟಾಗಲಿದೆ ಎಂದು ಬ್ಯಾನ್ ಮಾಡಿದೆ. ಅದರಂತೆ  ನಾವೂ ಕೂಡ ಅತೀ ಶೀಘ್ರದಲ್ಲಿ ಟಿಕ್‌ಟಾಕ್ ಮೇಲೆ ನಿಷೇಧ ಹೇರಲಿದ್ದೇವೆ ಎಂದು ಟ್ರಂಪ್​​ ಹೇಳಿದ್ದರು.  ಈಗ ಟಿಕ್ ಟಾಕ್ ಜೊತೆ ಮತ್ತಿತರ ಆ್ಯಪ್​ಗಳನ್ನು ಬ್ಯಾನ್ ಮಾಡಲು ಟ್ರಂಪ್ ಸರ್ಕಾರ ನಿರ್ಧರಿಸಿದೆ.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಪೊಂಪಿಯೊ, ಟ್ರಂಪ್ ಆಡಳಿತವು ಅಮೆರಿಕಾರನ್ನು ರಕ್ಷಿಸಲು ಶ್ರಮಿಸುತ್ತಿದೆ. ವಿಶ್ವಾಸಾರ್ಹವಲ್ಲದ ಮಾರಾಟಗಾರರಾದ ಟಿಕ್ ಟಾಕ್ ಹಾಗೂ ವೀ ಚಾಟ್ ಸೇರಿದಂತೆ ಅನೇಕ ಅಪ್ಲಿಕೇಶನ್ ಗಳನ್ಜು ಆ್ಯಪಲ್, ಗೂಗಲ್ ಹಾಗೂ ಯು ಎಸ್ ಆ್ಯಪ್​ ಸ್ಟೋರಿಗಳಿಂದ ತೆಗೆದು ಹಾಕಲು ಈ ಹಿಂದೆ ಸೂಚನೆ ನೀಡಿದ್ದರು.

 

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments