Homeದೇಶ-ವಿದೇಶ‘ಉತ್ತರಾಖಂಡ್​​ದಲ್ಲಿ ಮುಂದುವರೆದ ಶೋಧ ಕಾರ್ಯ’

‘ಉತ್ತರಾಖಂಡ್​​ದಲ್ಲಿ ಮುಂದುವರೆದ ಶೋಧ ಕಾರ್ಯ’

ಉತ್ತರಾಖಂಡ್: ಹಿಮ ಸ್ಫೋಟದಿಂದ ಕಣ್ಮರೆಯಾಗಿರುವವರಿಗಾಗಿ ಉತ್ತರಾಖಂಡ್​​ದಲ್ಲಿ 4ನೇ ದಿನಕ್ಕೆ ಕಾರ್ಯಾಚರಣೆ ಮುಂದುವರೆದಿದೆ. ಸದ್ಯ ಸಾವಿನ ಸಂಖ್ಯೆ 32ಕ್ಕೇ ಏರಿಕೆಯಾಗಿದೆ. ಹಿಮ ಕುಸಿತದಿಂದ ಸುಮಾರು 197 ಮಂದಿ ಕಾಣೆಯಾಗಿದ್ದು, ಹುಡುಕಾಟ ತೀವ್ರಗೊಂಡಿದೆ.

ಪ್ರವಾಹದಿಂದ ಸುರಂಗಮಾರ್ಗದಲ್ಲಿ ಕೆಸರು ತುಂಬಿಕೊಂಡಿದ್ದು, ನಾಪತ್ತೆಯಾದವರನ್ನು ಹುಡುಕಾಟ ನಡೆಸಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ ಸುರಂಗದಲ್ಲಿ 120 ಮೀಟರ್​​​ನಷ್ಟು ಕೆಸರು ತೆಗೆಯಲಾಗಿದ್ದು, ಇನ್ನು 60 ಮೀಟರ್​​ನಷ್ಟು ಆಳದವರೆಗಿರುವ ಕೆಸರು ತೆಗೆಯಬೇಕಾಗಿದೆ. ಸ್ಥಳದಲ್ಲಿ ITBP, NDRF, SDRF ಹಾಗೂ ಸ್ಥಳೀಯ ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಹಿಮ ಪ್ರವಾಹದಿಂದ ಋಷಿಗಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಬ್ರಿಡ್ಜ್​​ ಕೊಚ್ಚಿಕೊಂಡು ಹೋಗಿದ್ದು, 13 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. 13 ಗ್ರಾಮಸ್ಥರಿಗೆ ಹೆಲಿಕಾಪ್ಟರ್​​​ ಮುಖಾಂತರ ಆಹಾರ ಒದಗಿಸುವ ಕಾರ್ಯ ನಡೆಯುತ್ತಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments