ವಿಜಯಪುರ : ಹೌದು ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣೆಯ ಒಡಲು ತುಂಬಿ ಹರಿಯುತ್ತಿದೆ. ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ತುಂಬಿದ ಹಿನ್ನಲೆಯಲ್ಲಿ ಹೊರ ಹರಿವಿನ ನೀರಿನ ದೃಶ್ಯ ದೂರ ದೂರದಿಂದ ನಿಂತ ನೋಡಿದರೂ ಸಹಿತ ಪ್ರವಾಸಿಗರಿಗೆ ನೀರು ಉಕ್ಕಿ ಹರಿಯುವ ದೃಶ್ಯ ಕಾಣಬೇಕು ಎಂದು ಎಂದು ಕೆಬಿಜಿ ಎನ್ಎಲ್ ಅಧಿಕಾರಿಗಳು ಜಲಾಶಯಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ಆಲಮಟ್ಟಿ ಡ್ಯಾಂ ನ 26 ಗೇಟ್ಗಳಿಗೆ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಳವಡಿಕೆ ಮಾಡಿದ್ದು, ಬಣ್ಣದ ಬೆಳಕನ್ನು ಸೀಳಿಕೊಂಡು ಹೋಗುವ ಜಲಧಾರೆಯ ದೃಶ್ಯ ರಮಣೀಯವಾಗಿ ಕಂಡು ಬರುತ್ತಿದೆ. ಇದನ್ನೂ ವಿಕ್ಷಿಸಲು ರಾತ್ರಿ ಸಮಯದಲ್ಲಿ ದೂರ ದೂರದಿಂದ ಬರುತ್ತಿದ್ದಾರೆ.
ಇನ್ನೂ 2016 ರಲ್ಲಿ36 ಲಕ್ಷ ವೆಚ್ಚದಲ್ಲಿ ಜಲಾಶಯದ ನೀರಿಗೆ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವರ್ಷ ಜುಲೈ ಮೂರನೇ ವಾರದಿಂದ ಆಗಷ್ಟ್ ಮೂರನೇ ವಾರದವರೆಗೆ ನೀರನ್ನು ಹೊರ ಬಿಡಲಾಗುತ್ತದೆ, ಆ ಸಂದರ್ಭದಲ್ಲಿ ಸಂಜೆ ನೀರನ್ನು ಹೊರ ಬಿಡುವ ಆ ದೃಶ್ಯ ಮನಮೋಹಕವಾಗಿ ಕಾಣಬೇಕು ಎಂದು ಸಂಜೆ 6.30 ರಿಂದ ರಾತ್ರಿ 9.30ರ ವರೆಗೆ ಲೈಟಿಂಗ್ ಹಾಕುತ್ತಾರೆ. ಲೈಟಿಂಗ್ ನಲ್ಲಿ ನೀರು ಹರಿಯುವ ದೃಶ್ಯ ಚೆನ್ನಾಗಿ ಕಾಣುತ್ತದೆ. 156 ಲೈಟ್ಗಳ ವ್ಯವಸ್ಥೆ ಇಲ್ಲಿ ಮಾಡಲಾಗಿದ್ದು, ಅವಗಳಿಂದ ವಿವಿಧ ಬಣ್ಣಗಳ ಬರುವದರಿಂದ ಆ ಮನಮೋಹಕ ದೃಶ್ಯ ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಇನ್ನೂ 26 ಗೇಟ್ಗಳ ಪೈಕಿ ಒಂದೆರಡು ಗೇಟ್ಗಳ ಲೈಟ್ ದುರಸ್ಥೆಯಲ್ಲಿದ್ದು ಅವುಗಳನ್ನು ಸಹಿತ ಆದಷ್ಟು ಬೇಗ ದುರಸ್ಥೆ ಮಾಡುವ ಭರವಸೆ ಅಧಿಕಾರಿಗಳು ನೀಡಿದ್ದಾರೆ. ಇನ್ನು ಎರಡು ಮೂರು ಕಿಲೋ ಮೀಟರ್ ದೂರದಿಂದ ಸಹಿತ ಲೈಟಿಂಗ್ ನಲ್ಲಿ ನೀರು ಹರಿಯುವದನ್ನು ಕಂಡು ಪ್ರವಾಸಿಗರು ಸಂತಸಗೊಂಡಿದ್ದಾರೆ ಅಂತಾನೇ ಹೇಳಬಹುದು.
-ಸುನೀಲ್ ಭಾಸ್ಕರ