ಬೆಂಗಳೂರು : ಮಂಗಳೂರು ಏರ್ಪೋರ್ಟ್ನಲ್ಲಿ ಸಜೀವ ಬಾಂಬ್ ಪತ್ತೆ ಪ್ರಕರಣದ ಆರೋಪಿ ಆದಿತ್ಯ ರಾವ್ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು, ಆತನ ಕಂತೆ ಕಂತೆ ಪುರಾಣಗಳು ಒಂದೋದಾಗಿ ಬಿಚ್ಚಿಕೊಳ್ಳುತ್ತಿವೆ.
2018ರಲ್ಲಿ ಬೆಂಗಳೂರು ಏರ್ಪೋರ್ಟ್ ಮತ್ತು ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಕರೆ ಮಾಡಿ ಪೊಲೀಸರ ಅತಿಥಿಯಾಗಿದ್ದ. ಈತ ಕುಂದಾಪುರ ಮೂಲದವನಾಗಿದ್ದು, ಕೆಹೆಚ್ಬಿ ಕಾಲೋನಿಯಲ್ಲಿ ವಾಸವಿದ್ದ. 2007ರಲ್ಲಿ ಎಂಬಿಎ ಪದವಿ ಮುಗಿಸಿದ್ದ. ಬೆಂಗಳೂರಿನ ಎಂ ಜಿ ರಸ್ತೆಯಲ್ಲಿರುವ ಕಂಪನಿಯೊಂದಕ್ಕೆ ಕೆಲಸಕ್ಕೆ ಸೇರಿ ಒಂದು ವರ್ಷದ ನಂತರ ಕೆಲಸ ತೊರೆದಿದ್ದ. ಆದಾದ ಬಳಿಕ ಬ್ಯಾಂಕ್ವೊಂದರ ಮಾರುಕಟ್ಟೆ ವಿಭಾಗದಲ್ಲಿ ವ್ಯವಸ್ಥಾಪಕನಾಗಿ ಕೆಲಸಕ್ಕೆ ಸೇರಿದ್ದ. ಅಲ್ಲಿ ಕೇವಲ 6 ತಿಂಗಳು ಕೆಲಸ ಮಾಡಿ, ನಂತರ ಕೆಲವು ದಿನಗಳ ಕಾಲ ಆಳ್ವಾಸ್ ಕಾಲೇಜಲ್ಲಿ ಸೆಕ್ಯೂರಿಟಿ ಕೆಲಸ ನಿರ್ವಹಿಸಿದ್ದ.
ಅಲ್ಲೂ ಬಿಟ್ಟು, ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿದ್ದ. ಅಷ್ಟೇ ಏಕೆ 2013ರಲ್ಲಿ ಪುತ್ತಿಗೆ ಮಠದಲ್ಲಿ ಅಡುಗೆ ಸಹಾಯಕನಾಗಿ ಸೇರಿದ್ದ. ಸ್ವಲ್ಪ ದಿನಗಳ ನಂತರ ಮಠ ಬಿಟ್ಟು, ಬೆಂಗಳೂರಿಗೆ ಬಂದಿದ್ದ ಪುಣ್ಯಾತ್ಮ, ಜಯನಗರದ ಎಲ್ಐಸಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದನು. ಈ ವೇಳೆ ಪೇಯಿಂಗ್ ಗೆಸ್ಟ್ನಲ್ಲಿ ತಂಗಿದ್ದ ಆತ ರೂಮ್ಮೇಟ್ನ ಲ್ಯಾಪ್ಟಾಪ್ ಕದ್ದಿದ್ದ. ಆ ಬಗ್ಗೆ ಸದ್ದಗುಂಟೆ ಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಕ್ಕಿಬಿದ್ದಾಗ ತಪ್ಪೊಪ್ಪಿಕೊಂಡಿದ್ದ ಕಿರಾತಕ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಲು ಲ್ಯಾಪ್ಟಾಪ್ ಕದ್ದಿದ್ದೇನೆ ಎಂದಿದ್ದ.
ಇನ್ನು ಕೆಲವು ದಿನಗಳ ಹಿಂದಷ್ಟೇ ಏರ್ಪೋರ್ಟಿಗೆ ಕೆಲಸ ಕೇಳಿಕೊಂಡು ಹೋಗಿದ್ದ. ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳು ಕೆಲಸ ಇಲ್ಲ ಅಂದಿದ್ದರು. ಅದರಿಂದ ಕುಪಿತಗೊಂಡ ಆತ ಇಂಟರ್ನೆಟ್ನಲ್ಲಿ ಏರ್ಪೋರ್ಟ್ ಮಾಹಿತಿ ವಿಚಾರಣೆ ಸಂಖ್ಯೆ ಹುಡುಕಿ, ಟರ್ಮಿನಲ್ ಮ್ಯಾನೇಜರ್ಗೆ ಹುಸಿ ಬಾಂಬ್ ಕರೆ ಮಾಡಿದ್ದ. ಏರ್ಪೋರ್ಟ್ನ ಏರ್ ಏಷಿಯಾ ಏರ್ಲೈನ್ಸ್ ಕೌಂಟರ್ಗೂ ಕರೆ ಮಾಡಿದ್ದ ರಣಹೇಡಿ, ಕೊಚ್ಚಿ, ಹೈದ್ರಾಬಾದ್, ಮುಂಬೈ, ಕೊಯಮತ್ತೂರು, ದೆಹಲಿಗೆ ಪ್ರಯಾಣಿಸುವ ವಿಮಾನಗಳಲ್ಲಿ ಬಾಂಬ್ ಇದೆ ಎಂದು ಬೆದರಿಕೆಹಾಕಿದ್ದ ಎಂದು ತಿಳಿದುಬಂದಿದೆ.
ರೈಲು ನಿಲ್ದಾಣದ ಲಗೇಜ್ ಕೊಠಡಿಯಲ್ಲಿ ಬ್ಯಾಗ್ ಇಟ್ಟಿದ್ದ ಈತ ಲಗೇಜ್ ಮರಳಿ ಪಡೆಯುವಾಗ ಶುಲ್ಕ ಪಾವತಿಸುವಂತೆ ಸಿಬ್ಬಂದಿ ಕೇಳಿದ್ದಕ್ಕೆ ಅವರ ಮೇಲೆಯೇ ಹರಿಹಾಯ್ದಿದ್ದ. ನನ್ನ ಬಳಿಯೇ ಹಣ ಕೇಳ್ತೀರ ಅಂತ ಜಗಳವಾಡಿದ್ದ. ಅಲ್ಲದೆ ಅದೇ ದಿನ ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ರೈಲ್ವೆ ನಿಲ್ದಾಣದ ಕ್ಲಾಕ್ ರೂಮ್ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದ್ದ. ಪೊಲೀಸ್ ತನಿಖೆ ಬಳಿಕ ಅದು ಹುಸಿಕರೆ ಎಂದು ಗೊತ್ತಾಗಿತ್ತು.
ಇನ್ನು ಈ ಆಸಾಮಿಗೆ ಎ ಸಿ ವ್ಯವಸ್ಥೆಯಲ್ಲಿ ಕೆಲಸ ಮಾಡೋದು ಕಿರಿಕಿರಿಯಂತೆ. ಹಾಗಾಗಿಯೇ ಇರೋ ಬರೋ ಕೆಲಸಗಳನ್ನು ಬಿಟ್ಟಿದ್ದಂತೆ! ನಿರರ್ಗಳವಾಗಿ ಇಂಗ್ಲಿಷ್ ಮಾತನಾಡ ಬಲ್ಲ ಕಿರಾತಕನ ಬಳಿ ಒಂದಲ್ಲ ಎರಡಲ್ಲ ನಾಲ್ಕು ಸಿಮ್ಗಳಿವೆ.
ಈ ಆದಿತ್ಯನ ತಂದೆ ನಿವೃತ್ತ ಬ್ಯಾಂಕ್ ನೌಕರರಾಗಿದ್ದಾರೆ. ಸಹೋದರ ಬ್ಯಾಂಕ್ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಾರೆ. ಮದುವೆ ಬಗ್ಗೆ ಪೊಲೀಸರು ಕೇಳಿದ್ದಕ್ಕೆ, ”ನಾನೇ ಬದುಕುವುದು ಕಷ್ಟ. ಇನ್ನು ಹೆಂಡತಿ ಮಕ್ಕಳನ್ನು ಬೇರೆ ಸಾಕಬೇಕೇ” ಎಂದು ಪ್ರಶ್ನೆ ಮಾಡಿದ್ದ ಎಂದು ತಿಳದುಬಂದಿದೆ.
ಅವನು ಯಾರೇ ಆಗಿದ್ದರೂ ಭಯೋತ್ಪಾದಕನೇ..! ಆತನ ಬಗ್ಗೆ ಸಿಂಪತಿ ಯಾಕೆ?
ಅವನು ಯಾರೇ ಆಗಿದ್ದರೂ ಭಯೋತ್ಪಾದಕನೇ..! ಆತನ ಬಗ್ಗೆ ಸಿಂಪತಿ ಯಾಕೆ?
Posted by Powertvnews on Wednesday, January 22, 2020