Home ಸಿನಿ ಪವರ್ ರಾಧಿಕಾ ಪಂಡಿತ್ ಕಮ್​ಬ್ಯಾಕ್ ಬಗ್ಗೆ ರಾಕಿಂಗ್ ಸ್ಟಾರ್ ಯಶ್​ ಹೀಗಂದ್ರಾ..!?

ರಾಧಿಕಾ ಪಂಡಿತ್ ಕಮ್​ಬ್ಯಾಕ್ ಬಗ್ಗೆ ರಾಕಿಂಗ್ ಸ್ಟಾರ್ ಯಶ್​ ಹೀಗಂದ್ರಾ..!?

ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್ ಬರೋಬ್ಬರಿ 3 ವರ್ಷಗಳ ನಂತ್ರ ಕಮ್​​ ಬ್ಯಾಕ್​ ಆಗ್ತಿದ್ದಾರೆ. ‘ರಂಗಿತರಂಗ’ ಖ್ಯಾತಿಯ ನಟ ನಿರೂಪ್​​ ಭಂಡಾರಿ ಅಭಿನಯದ ‘ಆದಿಲಕ್ಷ್ಮಿ ಪುರಾಣ’ ರಾಧಿಕಾ ಕಮ್​​ಬ್ಯಾಕ್ ಆಗ್ತಿರೋ ಸಿನಿಮಾ. 2016ರಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ‘ಸಂತು ಸ್ಟ್ರೈಟ್ ಫಾರ್ವಡ್​’ಸಿನಿಮಾದಲ್ಲಿ ನಟಿಸಿದ್ದ ರಾಧಿಕಾ ಬಳಿಕ ಒಂದೇ ಒಂದು ಸಿನಿಮಾಗಳಲ್ಲಿ ಕಾಣಿಸಿಕೊಂಡಿರ್ಲಿಲ್ಲ. ಬಳಿಕ ಯಶ್ ಅವರ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ರಾಧಿಕಾ ಮತ್ತೆ ಬರ್ತಿದ್ದಾರೆ. ಈ ವಿಷಯ ಹಳೇದೇ ಬಿಡಿ! 
ಮದ್ವೆ ಬಳಿಕ ರಾಧಿಕಾ ಕಮ್​ಬ್ಯಾಕ್ ಮಾಡ್ತಿರೋ ‘ಆದಿಲಕ್ಷ್ಮೀ ಪುರಾಣ’ದ ಟ್ರೇಲರ್ ರಿಲೀಸ್ ಆಗಿದೆ. ನಟ ಹಾಗೂ ರಾಧಿಕಾರ ಪತಿ ಯಶ್ ಟ್ರೇಲರ್ ಲಾಂಚ್ ಮಾಡಿ ‘ಆದಿಲಕ್ಷ್ಮಿ ಪುರಾಣ’ ಟೀಮ್​​ಗೆ ವಿಶ್ ಮಾಡಿದ್ದಾರೆ.
ಟ್ರೇಲರ್ ಬಿಡುಗಡೆ ಮಾಡಿ ಪತ್ನಿ ರಾಧಿಕಾ ಕಮ್​​ಬ್ಯಾಕ್ ಆಗ್ತಿರೋ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ. ‘ರಾಧಿಕಾಳಲ್ಲಿರೋ ಪ್ರತಿಭೆ ವೇಸ್ಟ್ ಆಗಲು ಬಿಡುವವನಲ್ಲ ನಾನು. ಅವ್ರು ಯಾವಾಗ ಏನೇ ಮಾಡಿದ್ರು, ಅಭಿಮಾನಿಯಾಗಿ ನೋಡಲು ಕಾಯ್ತಿರ್ತೀನಿ’ ಅಂದಿದ್ದಾರೆ.
ಪ್ರೊಡ್ಯೂಸರ್ ರಾಕ್​ಲೈನ್ ವೆಂಕಟೇಶ್​ ಟ್ರೇಲರ್ ಲಾಂಚ್ ಮಾಡೋಕೆ ಅಂತ ಕರೆದ್ರು. ಅದಲ್ಲದೆ ರಾಧಿಕಾ ಗಂಡನಾದ ಮೇಲೆ ಈ ಕಾರ್ಯಕ್ರಮಕ್ಕೆ ಬರ್ದೇ ಇರೋಕಾಗುತ್ತಾ? ನಾನಿವತ್ತು ಬರ್ಲಿಲ್ಲ ಅಂದಿದ್ರೆ ಮನೇಲಿ ಬೀಳ್ತಿತ್ತು ಅಂತ ತಮಾಷೆ ಮಾಡಿ ನಕ್ಕು, ನಗಿಸಿದ್ರು ಯಶ್​​.

LEAVE A REPLY

Please enter your comment!
Please enter your name here

- Advertisment -

Most Popular

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

ಅಪಮಾನದಿಂದ ಶೋಕ್ದಾರ್ ಮುಕ್ತ.. ನೋ ಮಿಸ್ಟೇಕ್..?!

ನೈಟ್ ಸಫಾರಿಯಿಂದ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದ ಸ್ಯಾಂಡಲ್​ವುಡ್​ನ ಶೋಕ್ದಾರ್, ಟಾಕ್ ಆಫ್ ದ ಟೌನ್ ಆಗಿದ್ರು. ಆದ್ರೀಗ ಅರಣ್ಯಾಧಿಕಾರಿಗಳು ಆ ಕೇಸ್​ನ ಟ್ರೇಸ್ ಮಾಡಿದ್ದಾರೆ. ಅವಮಾನ ಹಾಗೂ ಅಪಮಾನಗಳಿಂದ ಬಜಾರ್ ಹುಡ್ಗನಿಗೆ ಮುಕ್ತಿ...

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

Recent Comments