ರಾಧಿಕಾ ಪಂಡಿತ್ ರೀ ಎಂಟ್ರಿಗೆ ಮುಹೂರ್ತ ಫಿಕ್ಸ್..!

0
286

‘ಮೊಗ್ಗಿನ ಮನಸ್ಸಿ’ನ ಚೆಲುವೆ, ‘ರಾಮಾಚಾರಿ’ಯ ಮನದರಸಿ ಸ್ಯಾಂಡಲ್​ವುಡ್​ನ ಬ್ಯೂಟಿ ಕ್ವೀನ್ ರಾಧಿಕಾ ಪಂಡಿತ್. ಚಂದನವನದ ಚಂದದ ನಟಿ. ಮೂರು ವರ್ಷದ ಬಳಿಕ ಕಮ್​ಬ್ಯಾಕ್ ಮಾಡ್ತಿದ್ದಾರೆ. ಸಿಂಡ್ರೆಲಾ  ಗ್ರ್ಯಾಂಡ್​ ರೀ ಎಂಟ್ರಿ ಎಂದ್ರೆ ‘ಅದ್ಧೂರಿ’ ಆಗಿರ್ಲೇ ಬೇಕು ಅಲ್ವೇ?

 ಹೌದು, ರಾಧಿಕಾರ ಪಂಡಿತ್ ಕನ್ನಡ ಚಿತ್ರರಂಗದ ಅಗ್ರಗಣ್ಯ ನಾಯಕಿಯರಲ್ಲೊಬ್ಬರು. ಕಿರುತೆರೆ ಮೂಲಕ ಮನೆ ಮಾತಾದ ನಟಿ, ಮೊಗ್ಗಿನ ಮನಸ್ಸು ಸಿನಿಮಾ ಮೂಲಕ 2008ರಲ್ಲಿ ಸಿನಿ ಜರ್ನಿ ಶುರುಮಾಡಿದ್ರು. ಮೊದಲ ಸಿನಿಮಾವೇ  ಸೂಪರ್ ಹಿಟ್ ಆಯ್ತು. ಬಳಿಕ ಕೃಷ್ಣನ್ ಲವ್ ಸ್ಟೋರಿ, ಹುಡುಗರು, ಅದ್ಧೂರಿ,  ಡ್ರಾಮಾ, ಬಹುದ್ಧೂರ್, ರಾಮಾಚಾರಿ, ದೊಡ್ಮನೆ ಹುಡುಗ ಹೀಗೆ ಸಾಲು ಸಾಲು ಹಿಟ್ ಚಿತ್ರಗಳಲ್ಲಿ ಮಿಂಚಿದ್ರು.

2016ರಲ್ಲಿ ತೆರೆಕಂಡ ಸಂತು ಸ್ಟ್ರೈಟ್ ಫಾರ್ವಡ್​ ಮೂವಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದೇ  ರಾಧಿಕಾರ ಇದುವರೆಗಿನ ಕೊನೆಯ ಚಿತ್ರವಾಗಿದೆ. ಬಳಿಕ ಯಶ್ ಮತ್ತು ರಾಧಿಕಾ ಅವ್ರ ಮದ್ವೆಯಾಯ್ತು. ಮದ್ವೆ ನಂತ್ರ ರಾಧಿಕಾ ಯಾವ ಸಿನಿಮಾದಲ್ಲೂ ನಟಿಸಿರಲಿಲ್ಲ.

3 ವರ್ಷಗಳ ಬಳಿಕ ರಾಧಿಕ ಪಂಡಿತ್ ಅಭಿನಯದ ಸಿನಿಮಾ ತೆರೆಕಾಣ್ತಾ ಇದೆ. ವಿ.ಪ್ರಿಯಾ ನಿರ್ದೇಶನದ ‘ಆದಿಲಕ್ಷ್ಮಿ ಪುರಾಣ’ ಸಿನಿಮಾದಲ್ಲಿ ರಾಧಿಕಾ ಪಂಡಿತ್ ಅವರು ನಟಿಸಿರೋದು ಗೊತ್ತೇ ಇದೆ. ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಫ್ಯಾನ್ಸ್ ಕಾಯ್ತಾ ಇದ್ರು. ಇದೀಗ ಆದಿ ಲಕ್ಷ್ಮೀ ಪುರಾಣದ ರಿಲೀಸ್ ಡೇಟ್ ಫಿಕ್ಸ್ ಆಗಿದೆ.

ಜುಲೈ 19ರಂದು ಆದಿಲಕ್ಷ್ಮಿ ಪುರಾಣ’ ತೆರೆ ಕಾಣುತ್ತಿದೆ. ನಿರೂಪ್ ಬಂಡಾರಿ ಅವರ ಜೊತೆಗೆ ರಾಧಿಕಾ ಪಂಡಿತ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಹೆಚ್ಚಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ವಿಶ್ವಕಪ್ ನಡುವೆ ಸಿನಿಮಾ ರಿಲೀಸ್ ಮಾಡೋದು ಬೇಡ ಅಂತ ಪ್ರೊಡ್ಯೂಸರ್ ರಾಕ್​ಲೈನ್ ವೆಂಕಟೇಶ್  ರಿಲೀಸ್ ಡೇಟ್ ಅನ್ನು ಜುಲೈ ಗೆ ಫಿಕ್ಸ್ ಮಾಡಿದ್ದಾರೆ.

 

LEAVE A REPLY

Please enter your comment!
Please enter your name here