Sunday, May 29, 2022
Powertv Logo
Homeಕ್ರೀಡೆ2ನೇ ಟೆಸ್ಟ್ ಪಂದ್ಯಕ್ಕೆ ತಿರುವು ನೀಡಿದ ಜಡೇಜಾ : ಒಂದೇ ಕೈನಲ್ಲಿ ಸ್ಟನ್ನಿಂಗ್ ಕ್ಯಾಚ್!

2ನೇ ಟೆಸ್ಟ್ ಪಂದ್ಯಕ್ಕೆ ತಿರುವು ನೀಡಿದ ಜಡೇಜಾ : ಒಂದೇ ಕೈನಲ್ಲಿ ಸ್ಟನ್ನಿಂಗ್ ಕ್ಯಾಚ್!

ಕ್ರೈಸ್ಟ್​ಚರ್ಚ್​: ಭಾರತ-ನ್ಯೂಜಿಲೆಂಡ್  ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜೆಲೆಂಡ್ 235 ರನ್​ಗಳಿಗೆ ಆಲೌಟ್ ಆಗಿದೆ. ಆಲ್​ರೌಂಡರ್ ರವೀಂದ್ರ ಜಡೇಜಾ ಎರಡು ವಿಕೆಟನ್ನು ಪಡೆದು ಪಂದ್ಯಕ್ಕೆ ತಿರುವು ನೀಡಿದರು. ಅವರು ವಿಕೆಟ್ ಪಡೆದಿರುವುದಕ್ಕಿಂತಲೂ ಸೂಪರ್ ಮ್ಯಾನ್ ತರಹ ಗಾಳಿಯಲ್ಲಿ ಹಾರಿ ಕ್ಯಾಚ್ ಹಿಡಿದಿರುವುದು ಇದೀಗ ವೈರಲ್ ಆಗಿದೆ.   

ನ್ಯೂಜಿಲೆಂಡ್​ನ ಬ್ಯಾಟ್ಸ್​ಮ್ಯಾನ್ ನೀಲ್ ವ್ಯಾಗನರ್ ಮೊಹಮ್ಮದ್ ಶಮಿ ಬಾಲ್​ಗೆ ಬೌಂಡರಿ ಹೊಡೆಯುವ ತವಕದಲ್ಲಿದ್ದರು. ಆದರೆ ಅಷ್ಟರಲ್ಲಿ ಜಡೇಜಾ ಸ್ಟನ್ನಿಂಗ್ ಕ್ಯಾಚ್ ಹಿಡಿದು ವಿಕೆಟ್ ಪಡೆದುಕೊಂಡಿದ್ದಾರೆ. ಅದರಲ್ಲೂ ಗಾಳಿಯಲ್ಲಿ ಕ್ಯಾಚ್ ಹಿಡಿದಿದ್ದಲ್ಲದೆ, ಒಂದೇ ಕೈನಲ್ಲಿ ಕ್ಯಾಚ್ ಹಿಡಿದಿದ್ದಾರೆ. ಜಡೇಜಾ ಎಡಗೈನಲ್ಲಿ ಹಿಡಿದಿರುವ ಅದ್ಭುತ ಕ್ಯಾಚನ್ನು ನೋಡಿ ಫ್ಯಾನ್ಸ್ ಕುಣಿದು ಕುಪ್ಪಳಿಸಿದ್ದಾರೆ. ಇನ್ನು ಇದರಿಂದ ವ್ಯಾಗನರ್ ವಿಕೆಟ್ ಕಳೆದುಕೊಂಡು ಪೆವಿಲಿಯನ್​ಗೆ ಮರಳುವಂತಾಯ್ತು.

LEAVE A REPLY

Please enter your comment!
Please enter your name here

- Advertisment -

Most Popular

Recent Comments