ಬೆಂಗಳೂರು : ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ ಎಂಬ ಕಾರಣಗಳನ್ನು ನೀಡಿ ಕೆಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ನಿರಾಕರಿಸಲಾಗುತ್ತಿದೆ ಅನ್ನೋ ಆರೋಪ ದಿನಂಪ್ರತಿ ಕೇಳಿಬರುತ್ತಲೇ ಇದೆ. ಇದೀಗ ಈ ಅನುಭವ ನಟಿ ಸುಧಾರಾಣಿ ಅವರಿಗೂ ಆಗಿದೆ. ಸಹೋದರ ಮಗಳ ಚಿಕಿತ್ಸೆಗೆ ನಿರ್ಲಕ್ಷ್ಯ ತೋರಿದ ಖಾಸಗಿ ಆಸ್ಪತ್ರೆ ವಿರುದ್ಧ ಸುಧಾರಾಣಿ ಕೆಂಡಾಮಂಡಲಾರಾಗಿದ್ದಾರೆ.
ಸುಧಾರಾಣಿ ತನ್ನ ಸಹೋದರನ ಪುತ್ರಿ ದೀಪ್ತಿಯನ್ನು ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರು. ಆ ವೇಳೆ ವೆಂಟಿಲೇಟರ್ ಇಲ್ಲ ಅಂತ ಆಸ್ಪತ್ರೆ ಪ್ರವೇಶಕ್ಕೆ ನಿರಾಕರಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಕಾದು ಕಾದು ಬೇಸತ್ತ ನಟಿ ಸುಧಾರಾಣಿ ಆಸ್ಪತ್ರೆ ಸಿಬ್ಬಂದಿ ವರ್ತನೆಗೆ ಗರಂ ಆಗಿದ್ದಾರೆ. ನಂತರ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಕರೆಮಾಡಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.